ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಮರಳುಗಾರಿಕೆಗೆ ನಿಷೇಧ: ನಿಲ್ಲದ ಅಕ್ರಮ‌ ಮರಳು ಸಾಗಾಟ ದಂಧೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಸೆಪ್ಟೆಂಬರ್‌, 23: ಜಿಲ್ಲೆಯ ಕರಾವಳಿಯಲ್ಲಿ ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ತಡೆ ಹಾಕಲಾಗಿದ್ದು, ನಿಯಮ‌ವನ್ನು ಬಿಗಿ ಮಾಡಲಾಗಿದೆ. ನಿಯಮ ಜಾರಿಯಾದ ಬಳಿಕ ನದಿ ತೀರಗಳಲ್ಲಿ ಮರಳು ತೆಗೆದು ಮಾರಾಟ ಮಾಡದಂತೆ ರಾಷ್ಟ್ರೀಯ ಹಸಿರು ಪೀಠ ಬಿಗಿ ಬಂದೋಬಸ್ತ್‌ ಕೈಗೊಂಡಿದೆ. ಪರಿಣಾಮ ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗಳಿಗೆ ಮರಳು ಕೊರತೆ ಒಂದೆಡೆ ಆದರೆ, ಮತ್ತೊಂದೆಡೆ ಅನಧಿಕೃತವಾಗಿ ಮರಳನ್ನು ಹೆಚ್ಚಿನ ಬೆಲೆಗೆ ಗೋವಾ ರಾಜ್ಯಗಳಿಗೆ ಮಾರಾಟ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

ಸಿಆರ್‌ಜೆಡ್ ವಲಯದಲ್ಲಿ ಮರಳುಗಾರಿಕೆ ಮಾಡುವುದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಮರಳುಗಾರಿಕೆ ಮಾಫಿಯ ಆಗಿದ್ದು, ಇದನ್ನು ಸ್ಥಗಿತಗೊಳಿಸುವಂತೆ ರಾಷ್ಟ್ರೀಯ ಹಸಿರು ಪೀಠ ಜಿಲ್ಲಾಡಳಿತಕ್ಕೆ ಆದೇಶ ಮಾಡಿತ್ತು. ಸದ್ಯ ಕಳೆದ ನಾಲ್ಕೈದು ತಿಂಗಳಿನಿಂದ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತ ಆಗಿದ್ದು, ಮರಳಿನ ಅಭಾವ ಸಹ ಎದುರಾಗಿದೆ. ಈಗಾಗಲೇ ಮಳೆ ಕಡಿಮೆ ಆಗಿರುವ ಕಾರಣ ಕಟ್ಟಡ ಕಾಮಗಾರಿಗಳು ಪ್ರಾರಂಭವಾಗಿವೆ. ಸಣ್ಣ ಪುಟ್ಟ ದುರಸ್ತಿ ಕಾಮಗಾರಿಗಳಿಗೂ ಮರಳಿನ ಅಭಾವ ಕಾಡತೊಡಗಿದೆ.

ಶಿರಸಿಯಲ್ಲಿ ಉಡ ನುಂಗಲು ಯತ್ನಿಸಿ ವಿಫಲವಾದ ಕಾಳಿಂಗ ಸರ್ಪ

ಹೆಚ್ಚಿದ ಅನಧಿಕೃತ ಮರಳುಗಾರಿಕೆ

ಇನ್ನು ಮರುಗಾರಿಕೆಗೆ ನಿರ್ಬಂಧ ಹೇರಿದ ಬೆನ್ನಲ್ಲೆ ಸದ್ದಿಲ್ಲದೇ ಅಕ್ರಮವಾಗಿ ಮರಳನ್ನು ದಾಸ್ತಾನು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮರಳನ್ನು ಸಾಗಾಟದ ದಂಧೆಯೂ ಸಹ ಜೋರಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅದರಲ್ಲೂ ಕಾಳಿ ನದಿಯಲ್ಲಿ ಈ ಹಿಂದೆ ಮರಳನ್ನು ತೆಗೆಯಲು ಅವಕಾಶ ನೀಡಿದಾಗ, ಹೆಚ್ಚಿನ ಪ್ರಮಾಣದಲ್ಲಿ ಮರಳನ್ನು ತೆಗೆದು ಸಂಗ್ರಹಿಸಿದ್ದರು. ಹೆಚ್ಚಿನ ಮರಳು ಸಂಗ್ರಹ ಮಾಡಿಕೊಂಡವರು ಇದೀಗ ಅದನ್ನು ರಾತ್ರೋರಾತ್ರಿ ಕದ್ದುಮುಚ್ಚಿ ಗೋವಾಕ್ಕೆ ಸಾಗಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಗೋವಾ ಗಡಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದನ್ನು ಕಾರವಾರ ಉಪವಿಭಾಗಾಧಿಕಾರಿ ಸೂಚನೆಯಂತೆ ಹಿಡಿದಿದ್ದರು. ಅಕ್ರಮಕ್ಕೆ ಕಡಿವಾಣ ಹಾಕುವಂತೆ ಸ್ಥಳೀಯರಾದ ಎನ್ ದತ್ತಾ ಅವರು ಆಗ್ರಹಿಸಿದ್ದಾರೆ.

Sand Mining Ban in Karavali : Non Stop Illegal Sand Trade

ಯಾವ್ಯಾವ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶ?

ಕಾರವಾರ ತಾಲೂಕಿನ ಕಾಳಿ, ಅಂಕೋಲಾ ತಾಲೂಕಿನ ಗಂಗಾವಳಿ, ಕುಮಟಾ ತಾಲೂಕಿನ ಅಘನಾಶಿನಿ ಹಾಗೂ ಹೊನ್ನಾವರ ತಾಲೂಕಿನ ಶರಾವತಿ ನದಿಯಲ್ಲಿ ಮರಳನ್ನು ತೆಗೆಯಲು ಅವಕಾಶ ನೀಡಲಾಗಿತ್ತು. ಸುಮಾರು 100ಕ್ಕೂ ಅಧಿಕ ಲೀಸ್ ಪಡೆದವರು ಮರಳು ತೆಗೆಯುತ್ತಿದ್ದು, ಸದ್ಯ ಮರಳುಗಾರಿಕೆ ಸ್ಥಗಿತ ಮಾಡಿದ್ದಾರೆ. ಜನರಿಗೆ ಮರಳು ಅವಶ್ಯಕತೆ ಇರುವ ಹಿನ್ನಲೆಯಲ್ಲಿ ಅನಧಿಕೃತವಾಗಿ ಮರಳನ್ನು ತೆಗೆದು ಸಾಗಾಟ ಮಾಡುವ ಕೃತ್ಯಕ್ಕೆ ಇಳಿದಿದ್ದಾರೆ. ಕೆಲವರು ದಂಧೆಯನ್ನೇ ಬಂಡವಾಳ ಮಾಡಿಕೊಂಡು ಪಕ್ಕದ ಗೋವಾ ರಾಜ್ಯಗಳಿಗೂ ಮರಳು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಹೆಚ್ಚಾಗಿ ಈ ದಂಧೆ ನಡೆಯುತ್ತಿದೆ.

Sand Mining Ban in Karavali : Non Stop Illegal Sand Trade

ಕಾರವಾರದಲ್ಲಿ ನಿಲ್ಲದ ಮರಳು ದಂಧೆ

ಬೆಳಗಿನ ವೇಳೆಯಲ್ಲಿ ಮರಳನ್ನು ಸಾಗಿಸಿದರೆ ಅಧಿಕಾರಿಗಳು ಹಿಡಿಯುತ್ತಾರೆ ಎಂದು ರಾತ್ರಿ ವೇಳೆ ಸಾಗಾಟ ಮಾಡುವ ಕಾರ್ಯಕ್ಕೆ ಇಳಿದಿದ್ದಾರೆ. ಆದ್ದರಿಂದ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಈ ಅಕ್ರಮಕ್ಕೆ ಕಡಿವಾಣ ಹಾಕಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ ಆಗಿದೆ. ಸದ್ಯ ಸಿಆರ್‌ಜೆಡ್ ಪ್ರದೇಶದ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅವಕಾಶ ಇಲ್ಲ. ಆದ್ದರಿಂದ ಈ ವ್ಯಾಪ್ತಿಯನ್ನು ಹೊರತುಪಡಿಸಿ ನದಿ, ಹಳ್ಳ ಕೊಳ್ಳಗಳಲ್ಲಿ ಮರಳು ತೆಗೆಯುತ್ತಿದ್ದಾರೆ. ನಿರ್ಧಿಷ್ಟ ತೆರಿಗೆಯೊಂದಿಗೆ ಸ್ಥಳೀಯ ಗ್ರಾಮ ಪಂಚಾಯತಿ ಪರವಾನಿಗೆ ಮೂಲಕ ಮರಳು ತೆಗೆಯಲು ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಮೋಹನ್ ತಿಳಿಸಿದ್ದಾರೆ.

English summary
illegal sand banned in coastal CRZ of Karwar district, rule tight, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X