• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎರಡು ಡೋಸ್ ಕೋವಿಡ್ ಲಸಿಕೆ ಪಡೆದರೂ ಮಾಜಿ ಸಚಿವ ದೇಶಪಾಂಡೆಗೆ ಕೊರೋನಾ!

|

ಕಾರವಾರ, ಏಪ್ರಿಲ್ 24: ಮಾಜಿ ಸಚಿವ ಹಾಗೂ ಹಾಲಿ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಕೋವಿಡ್- 19 ಸೋಂಕು ತಗುಲಿರುವುದು ದೃಢಪಟ್ಟಿದೆ. ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷಿಸಿಕೊಳ್ಳುವಂತೆ ಅವರು ಸಾಮಾಜಿಕ ಜಾಲತಾಣಗಳ ತಮ್ಮ ಖಾತೆಗಳಲ್ಲಿ ಮನವಿ ಮಾಡಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷಿಸಿಕೊಳ್ಳಿ ಎಂದು ದೇಶಪಾಂಡೆ ಫೇಸ್‌ಬುಕ್ ಹಾಗೂ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.

ದೇಶಪಾಂಡೆ ಅವರು ಈಗಾಗಲೇ ಮಾರ್ಚ್ 4ರಂದು ಮೊದಲ ಡೋಸ್ ಹಾಗೂ ಏಪ್ರಿಲ್ 19ರಂದು ಎರಡನೇ ಡೋಸ್ ಅನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಪಡೆದಿದ್ದರು. ತಾವು ಲಸಿಕೆ ಪಡೆದಿರುವ ಬಗ್ಗೆಯೂ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಫೊಟೊ ಸಮೇತ ಹಂಚಿಕೊಂಡು, ಅರ್ಹ ಎಲ್ಲರೂ ಲಸಿಕೆ ಪಡೆದುಕೊಳ್ಳುವಂತೆ ಅವರು ಕರೆ ನೀಡಿದ್ದರು. ಲಸಿಕೆ ಪಡೆದ ಬಳಿಕವೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಮಾಸ್ಕ್ ಧರಿಸುವುದನ್ನು ಪಾಲಿಸುವಂತೆ ಅವರು ಕಿವಿಮಾತು ಹೇಳಿದ್ದರು. ಎರಡು ಡೋಸ್ ಲಸಿಕೆ ಪಡೆದರೂ ಕೂಡ ಅವರಿಗೆ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ.

ಇನ್ನು ದೇಶಪಾಂಡೆಯವರಿಗೆ ಸೋಂಕು ದೃಢಪಡುತ್ತಿದ್ದಂತೆಯೇ ಅನೇಕ ಮುಖಂಡರು ಅವರು ಕೋವಿಡ್‌ನಿಂದ ಶೀಘ್ರವೇ ಗುಣಮುಖರಾಗಲೆಂದು ಹಾರೈಸಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ, ಆರೋಗ್ಯ ಸಚಿವ ಡಾ.ಸುಧಾಕರ್, ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ, ಅವರ ಮಾಜಿ ಸಚಿವರಾದ ಎಂ.ಬಿ.ಪಾಟೀಲದೀಶ್ವರ್ ಖಂಡ್ರೆ, ಮಾಜಿ ಶಾಸಕ ಸತೀಶ್ ಸೈಲ್ ಸೇರಿದಂತೆ ಅನೇಕರು ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ಟ್ವೀಟ್ ಮಾಡಿದ್ದಾರೆ.

English summary
I have tested positive for COVID-19. I request everyone who came in close contact with me over the last few days to isolate themselves and get tested- tweets Haliyal MLA RV Deshpande.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X