ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರುತ್ತಿದೆ ಪೆಟ್ರೋಲ್ ದರ: ರಾಜ್ಯದಲ್ಲಿ ಉತ್ತರ ಕನ್ನಡದಲ್ಲೇ ಗರಿಷ್ಠ

|
Google Oneindia Kannada News

ಕಾರವಾರ, ಜನವರಿ 29: ದೇಶದಾದ್ಯಂತ ತೈಲ ದರ ಏರುಗತಿಯಲ್ಲಿ ಸಾಗುತ್ತಿದ್ದು, ರಾಜಸ್ಥಾನದಲ್ಲಿ ಬ್ರ್ಯಾಂಡೆಡ್ ಪೆಟ್ರೋಲ್ ದರ ಶತಕ ದಾಟಿದೆ. ಈ ನಡುವೆ ಕರ್ನಾಟಕದಲ್ಲೂ ಪ್ರತಿ ದಿನ ಪೈಸೆ ಲೆಕ್ಕದಲ್ಲಿ ದರ ಏರಿಕೆಯಾಗುತ್ತಲೇ ಇದೆ. ಈ ನಡುವೆ ಬೇರೆಲ್ಲ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪೆಟ್ರೋಲ್ ಗರಿಷ್ಠ ದರ ಹೊಂದಿದ್ದು, ಡೀಸೆಲ್ ದರದಲ್ಲಿ ಕೂಡ ಜಿಲ್ಲೆ ಮೂರನೇ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿ ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿ) ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿಎಲ್)ಗಳಿಗೆ ಸೇರಿದ 150ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಿವೆ. ಬೆರಳೆಣಿಕೆಯ ರಿಲಾಯನ್ಸ್ ಕಂಪನಿಯ ಪೆಟ್ರೋಲ್ ಬಂಕ್‌ಗಳಿವೆ. ಈ ಎಲ್ಲಾ ಬಂಕ್‌ಗಳಲ್ಲಿನ ಪೆಟ್ರೋಲ್ ದರ ರಾಜ್ಯದ ಉಳಿದೆಲ್ಲ ಜಿಲ್ಲೆಗಳಿಗೆ ಹೋಲಿಸಿದರೆ ಅತಿ ಹೆಚ್ಚಾಗಿದೆ.

ಪೆಟ್ರೋಲ್ 100ರು ಗಡಿದಾಟಿದ ಬಳಿಕ ಕೊನೆಗೂ ತೆರಿಗೆ ಇಳಿಕೆ ಪೆಟ್ರೋಲ್ 100ರು ಗಡಿದಾಟಿದ ಬಳಿಕ ಕೊನೆಗೂ ತೆರಿಗೆ ಇಳಿಕೆ

ಶುಕ್ರವಾರ ಕಾರವಾರದ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್‌ಗೆ 90.80 ರೂ. ಇದ್ದು, ಡೀಸೆಲ್‌ಗೆ 82.51 ರೂ. ಇದೆ. ಕಳೆದ ವಾರ (ಜ.23) ಪೆಟ್ರೋಲ್‌ಗೆ 90.23 ರೂ. ಇದ್ದು, ಡೀಸೆಲ್ ದರ 81.92 ರೂ. ಇತ್ತು. ವಾರದಲ್ಲೇ ಪೆಟ್ರೋಲ್ ದರದಲ್ಲಿ 57 ಪೈಸೆ, ಡೀಸೆಲ್‌ನಲ್ಲಿ 59 ಪೈಸೆ ಏರಿಕೆ ಕಂಡಿದೆ. ಈ ದರ ರಾಜ್ಯದ ಬೇರಾವ ಜಿಲ್ಲೆಗಳಲ್ಲೂ ಇಲ್ಲ. ಹಾಗಿದ್ದರೆ ಉತ್ತರ ಕನ್ನಡದಲ್ಲೇಕೆ ಗರಿಷ್ಠ ದರ ಎನ್ನುವ ಪ್ರಶ್ನೆಗೆ ಉತ್ತರ ಮುಂದಿದೆ ಓದಿ...

50 ರೂ.ನ ಒಳಗೆ ಸಿಗಬೇಕಿತ್ತು

50 ರೂ.ನ ಒಳಗೆ ಸಿಗಬೇಕಿತ್ತು

ಗ್ರಾಹಕ ಖರೀದಿಸಿದ ಪೆಟ್ರೋಲ್‌ಗೆ ಬಂಕ್‌ಗಳಲ್ಲಿ ಪಡೆಯುವ ದರದಲ್ಲಿ ಹಲವಾರು ತೆರಿಗೆಗಳು ಸೇರಿರುತ್ತವೆ. ಅಂದರೆ, ಅಬಕಾರಿ ಸುಂಕ, ವ್ಯಾಟ್, ವಿತರಣೆದಾರರ ಕಮಿಷನ್, ಸಾಗಾಟ ವೆಚ್ಚ ಸೇರಿದಂತೆ ಇತರ ತೆರಿಗೆಗಳು ಕೂಡ ಸೇರಿರುತ್ತವೆ. ಸದ್ಯ ಲೀಟರ್ ಪೆಟ್ರೋಲ್‌ಗಳ ಮೇಲೆ 33 ರೂ.ನವರೆಗೆ ಅಬಕಾರಿ ಸುಂಕ, 20 ರೂ.ನವರೆಗೆ ವ್ಯಾಟ್, 2 ರೂ. ವಿತರಣೆದಾರರ ಕಮಿಷನ್ ಸೇರಿದಂತೆ 4 ರೂ.ನಷ್ಟು ಇತರ ಸುಂಕಗಳನ್ನು ವಿಧಿಸಲಾಗುತ್ತದೆ. ಅಂದರೆ, ಈ ಎಲ್ಲಾ ತೆರಿಗೆಗಳು ಪೆಟ್ರೋಲ್ ಮೇಲೆ ವಿಧಿಸದಿದ್ದರೆ 50 ರೂ.ನ ಒಳಗೆ ಪ್ರತಿ ಲೀಟರ್ ಪೆಟ್ರೋಲ್ ದೊರೆಯಲಿದೆ. ಆದರೆ ಹೀಗಾಗುವುದಿಲ್ಲ!

ಜಿಎಸ್‌ಟಿಗೆ ಒಳಪಡಿಸಲು ತಯಾರಿಲ್ಲ

ಜಿಎಸ್‌ಟಿಗೆ ಒಳಪಡಿಸಲು ತಯಾರಿಲ್ಲ

ಪೆಟ್ರೋಲ್ ಅನ್ನು ಜಿಎಸ್‌ಟಿಗೆ ಒಳಪಡಿಸಿದರೆ ಈ ಎಲ್ಲಾ ತೆರಿಗೆಗಳಿಂದ ಮುಕ್ತವಾಗಿ ಒಂದೇ ತೆರಿಗೆಯನ್ನು ವಿಧಿಸಲಾಗುತ್ತದೆ. ಆದರೆ, ಇದಕ್ಕೆ ಸರ್ಕಾರಗಳು ತಯಾರಿಲ್ಲ. ಕುಳಿತಲ್ಲಿಂದಲೇ ಯಾವುದೇ ಟೆಂಡರ್ ಕರೆಯದೆ, ಖರ್ಚುಗಳಿಲ್ಲದೆ, ಎಲ್ಲಾ ಸಮಯದಲ್ಲೂ ಸರ್ಕಾರಕ್ಕೆ ಆದಾಯ ತಂದುಕೊಡುವುದೇ ಈ ತೈಲೋತ್ಪನ್ನಗಳು. ಹೀಗಾಗಿ ಈ ಬಗ್ಗೆ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ. ದರ ಹೆಚ್ಚಾದರೂ, ಕಡಿಮೆಯಾದರೂ ಬಂಕ್‌ಗಳ ಮಾಲೀಕರಿಗೆ ನಯಾಪೈಸೆಯೂ ಲಾಭ- ನಷ್ಟವಿಲ್ಲ ಎನ್ನುತ್ತಾರೆ ಬಂಕ್‌ಗಳ ಮಾಲೀಕರು. ಅವರ ಕಮಿಷನ್‌ನಲ್ಲಿ ವ್ಯತ್ಯಯವಾದರೆ ಮಾತ್ರ ಲಾಭ- ನಷ್ಟದ ವಿಚಾರ ಬರಲಿದೆ. ಆದರೆ, ಇಲ್ಲಿ ಕಮಿಷನ್ ಅಲ್ಲ, ತೆರಿಗೆಗಳಿಂದ ತೈಲೋತ್ಪನ್ನಗಳನ್ನು ಮುಕ್ತವಾಗಿಸಲು ಒತ್ತಾಯವಿದೆ ಎನ್ನುತ್ತಾರೆ ಅವರು.

ಸಾಗಾಣಿಕಾ ವೆಚ್ಚ ಹೆಚ್ಚು

ಸಾಗಾಣಿಕಾ ವೆಚ್ಚ ಹೆಚ್ಚು

ಇನ್ನು, ಇವನ್ನೆಲ್ಲ ಬಿಟ್ಟು ಉತ್ತರ ಕನ್ನಡದಲ್ಲಿ ಯಾಕೆ ಪೆಟ್ರೋಲ್, ಡೀಸೆಲ್‌ಗೆ ಗರಿಷ್ಠ ದರವೆಂಬ ಬಗ್ಗೆ ಹೇಳುವುದಾದರೆ, ಜಿಲ್ಲೆಗೆ ಮಂಗಳೂರಿನಿಂದ ಟ್ಯಾಂಕರ್‌ಗಳಲ್ಲಿ ತೈಲೋತ್ಪನ್ನಗಳು ಬರುತ್ತವೆ. ಹೀಗಾಗಿ 300 ಕಿ.ಮೀ.ನಷ್ಟು ಸಾಗಣೆ ಮಾಡಿದ ವೆಚ್ಚವನ್ನು ಕೂಡ ಈ ಪೆಟ್ರೋಲ್ ದರದಲ್ಲಿ ಸೇರಿಸಲಾಗುತ್ತದೆ. ಅಂತಿಮವಾಗಿ ಅದು ಗ್ರಾಹಕನ ಮೇಲೆಯೇ ಹೊರೆಯಾಗುತ್ತದೆ. ಇಲ್ಲಿ ಕೂಡ ಆಗಿದ್ದು ಇದೇ.

ಉತ್ತರ ಕನ್ನಡದಲ್ಲಿ ಡಿಪೋ ಇಲ್ಲ

ಉತ್ತರ ಕನ್ನಡದಲ್ಲಿ ಡಿಪೋ ಇಲ್ಲ

ಉತ್ತರ ಕನ್ನಡದಲ್ಲಿ ತೈಲೋತ್ಪನ್ನಗಳ ಸಂಗ್ರಹಕ್ಕೆ ಡಿಪೋ ಇಲ್ಲ. ಈ ಡಿಪೋ ಇರುವುದು ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಅಲ್ಲಿ ಈಗಾಗಲೇ ಮೇಲೆ ತಿಳಿಸಿರುವಂತೆ ಮೂರು ಕಂಪೆನಿಗಳು ಸೇರಿ ಡಿಪೋ ಸ್ಥಾಪಿಸಿವೆ. ಹೀಗಾಗಿ ಅಲ್ಲಿಂದ ಸುತ್ತಮುತ್ತಲಿನ ಜಿಲ್ಲೆಗಳಿಗೆ ಪೆಟ್ರೋಲ್, ಡೀಸೆಲ್‌ಗಳನ್ನು ಪೂರೈಸಲಾಗುತ್ತದೆ. ಮಂಗಳೂರು ಬಂದರಿಗೆ ಹಡಗುಗಳ ಮೂಲಕ ಬರುವ ತೈಲೋತ್ಪನ್ನಗಳನ್ನು ಸುಲಭವಾಗಿ ಅನ್‌ಲೋಡ್ ಮಾಡಿ ಡಿಪೋದಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದರೆ, ಉತ್ತರ ಕನ್ನಡದಲ್ಲಿ ಬಂದರುಗಳಿದ್ದರೂ, ಇಲ್ಲಿಗೆ ಬೃಹತ್ ಹಡಗುಗಳು ಬರುತ್ತಿಲ್ಲ, ಬರಲು ವ್ಯವಸ್ಥೆಗಳು ಕೂಡ ಅಷ್ಟೊಂದು ಯೋಗ್ಯವಾಗಿಲ್ಲ. ಆದರೆ, ಮೂರೂ ತೈಲ ಕಂಪನಿಗಳು ಮನಸ್ಸು ಮಾಡಿದರೆ ಜಿಲ್ಲೆಯಲ್ಲೇ ಡಿಪೋ ಸ್ಥಾಪಿಸಬಹುದು ಎನ್ನುತ್ತಾರೆ ಕೆಲ ಬಂಕ್‌ಗಳ ಮಾಲೀಕರು.

ಗೋವಾ- ಕರ್ನಾಟಕಕ್ಕೆ 7 ರೂ.ನಷ್ಟು ದರ ವ್ಯತ್ಯಾಸ

ಗೋವಾ- ಕರ್ನಾಟಕಕ್ಕೆ 7 ರೂ.ನಷ್ಟು ದರ ವ್ಯತ್ಯಾಸ

ಇನ್ನು, ಉತ್ತರ ಕನ್ನಡ ಜಿಲ್ಲೆಯ ಪಕ್ಕದಲ್ಲಿರುವ ಗೋವಾ ರಾಜ್ಯದಲ್ಲಿ ಕರ್ನಾಟಕದ ಪೆಟ್ರೋಲ್‌ಗೆ ಹೋಲಿಸಿದರೆ ಸುಮಾರು 7 ರೂ.ನಷ್ಟು ದರ ವ್ಯತ್ಯಾಸವಿರುತ್ತದೆ. ಶುಕ್ರವಾರ ಗೋವಾದಲ್ಲಿ ಪೆಟ್ರೋಲ್‌ಗೆ 83.13 ರೂ. ಇದ್ದು, ಡೀಸೆಲ್‌ಗೆ 86.75 ರೂ. ಇದೆ. ಹೀಗಾಗಿ ಗೋವಾ ಗಡಿಯಾದ ಕಾರವಾರದ ಜನತೆ ಸಾಕಷ್ಟು ಮಂದಿ ಗೋವಾ ರಾಜ್ಯಕ್ಕೆ ತೆರಳಿ ಪೆಟ್ರೋಲ್ ಹಾಕಿಸಿಕೊಂಡು ಬರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈ ರೀತಿ ಪೆಟ್ರೋಲ್‌ಗಾಗಿ ಗಡಿ ದಾಟುವವರ ಸಂಖ್ಯೆಯಲ್ಲೂ ಹೆಚ್ಚಾಗಿದೆ ಎನ್ನಲಾಗಿದೆ.

ಯಾವತ್ತೂ ಬೇಡಿಕೆ

ಯಾವತ್ತೂ ಬೇಡಿಕೆ

ಪೆಟ್ರೋಲ್, ಡೀಸೆಲ್‌ಗೆ ಯಾವತ್ತೂ ಬೇಡಿಕೆ ಇದೆ. ಕಾರವಾರದಲ್ಲಿ ಪ್ರತಿದಿನ ಸರಾಸರಿ 100 ಬೈಕ್‌ಗಳು ಹಾಗೂ 10 ಕಾರುಗಳು ಮಾರಾಟವಾಗುತ್ತವೆ. ಕಾರವಾರದಲ್ಲಿ ವಾಹನಗಳ ನಿಲುಗಡೆಗೂ ಜಾಗವಿಲ್ಲದಾಗಿದೆ. ಮನೆಗಳ ಎದುರಿನ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿಡುತ್ತಾರೆ. ಹೀಗಿರುವಾಗ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿದರೆ ಸರಕಾರಕ್ಕೂ ಆದಾಯದ ಕೊರತೆ ಎದುರಾಗಬಹುದು ಎನ್ನುವುದು ಬಂಕ್ ಮಾಲೀಕರೊಬ್ಬರ ಅಭಿಪ್ರಾಯವಾಗಿದೆ.

English summary
Oil prices are on the rise across the country, and also in Karnataka, Petrol and deisel prices are rising every day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X