• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಟ್ಕಳದ ಆರು ಉಗ್ರರ ಮೇಲೆ ರೆಡ್‌ ಕಾರ್ನರ್ ನೋಟಿಸ್ ಜಾರಿ

By ಕಾರವಾರ ಪ್ರತಿನಿಧಿ
|

ಕಾರವಾರ, ಜೂನ್.27: ಭಾರತ ಸೇರಿದಂತೆ ಜಗತ್ತಿನ ವಿವಿಧೆಡೆ 2007ರಿಂದ ನಡೆಯುತ್ತಿರುವ ಹಲವು ಉಗ್ರರ ಕೃತ್ಯಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಸರು ಪದೇ ಪದೇ ತಳಕು ಹಾಕಿಕೊಳ್ಳುತ್ತಿದ್ದು, ಇದೀಗ ಮತ್ತೆ ಭಟ್ಕಳದ ಆರು ಮಂದಿ ಉಗ್ರರಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಯಾಗುವ ಮೂಲಕ ಭಟ್ಕಳ ಮತ್ತೆ ಸುದ್ದಿಯಲ್ಲಿದೆ.

ಇತ್ತೀಚಿಗೆ ಕೇಂದ್ರ ಗೃಹ ಸಚಿವಾಲಯದ ಇಂಟರ್​ಪೋಲ್ ವಿಭಾಗ ರಾಜ್ಯದ 16 ಮಂದಿಯ ವಿರುದ್ಧ ಹೊರಡಿಸಿರುವ ರೆಡ್​ಕಾರ್ನರ್ ನೋಟಿಸ್ ನಲ್ಲಿ 12 ಉಗ್ರರು ರಾಜ್ಯದ ಕರಾವಳಿ ಭಾಗದವರಾಗಿದ್ದಾರೆ. ಇವರಲ್ಲಿ 6 ಮಂದಿ ಭಟ್ಕಳದವರು ಎಂಬ ಗಂಭೀರ ವಿಚಾರವನ್ನೂ ಇಲಾಖೆ ಸ್ಪಷ್ಟಪಡಿಸಿದೆ.

ಜಮ್ಮ ಮತ್ತು ಕಾಶ್ಮೀರ: ಐವರು ಉಗ್ರರ ಹತ್ಯೆ

ಹೌದು, ಭಾರತದಲ್ಲಿ ಉಗ್ರ ಕೃತ್ಯಗಳನ್ನು ‌ನಡೆಸಲು ರಾಜ್ಯದ 16 ಮಂದಿ ಉಗ್ರರು ಹೊಂಚು ಹಾಕುತ್ತಿದ್ದಾರೆ ಎಂಬ ಅಘಾತಕಾರಿ ವರದಿಯನ್ನ ಗೃಹ ಸಚಿವಾಲಯ ನೀಡಿದೆ.

ಇವರೆಲ್ಲಾ ಪಾಕಿಸ್ತಾನ, ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿ ಭಯೋತ್ಪಾದನೆ, ಭೂಗತ ಚಟುವಟಿಕೆ ಸೇರಿದಂತೆ ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿರುವ ಗೃಹ ಸಚಿವಾಲಯ, ಇಂಟರ್​ಪೋಲ್ ವಿಭಾಗದಿಂದ 16 ಮಂದಿಯ ವಿರುದ್ಧ ರೆಡ್​ಕಾರ್ನರ್ ನೋಟಿಸ್ ಜಾರಿ ಮಾಡಿದೆ.

ಭಯೋತ್ಪಾದನೆ, ಉಗ್ರ ಕೃತ್ಯಗಳಿಗೆ ಯುವಕರನ್ನು ನೇಮಕ‌ ಮಾಡಿಕೊಳ್ಳುವ ಕಾರ್ಯದಲ್ಲಿ ಅಬ್ದುಲ್ ಖಾದರ್ ಸುಲ್ತಾನ್ ಅರ್ಮಾರ್ ಹಾಗೂ ಸಲೀಂ ಇಷಾಖಿ, ಭಯೋತ್ಪಾದನೆಗೆ ಸಂಚು ರೂಪಿಸುವ, ಯುವಕರ ನೇಮಕ ಮತ್ತು ತರಬೇತಿ ಕಾರ್ಯದಲ್ಲಿ ಮಹಮ್ಮದ್ ಶಫಿ ಅರ್ಮಾರ್.

ಭಯೋತ್ಪಾದನಾ ಚಟುವಟಿಕೆ, ಹಣ ಸಂಗ್ರಹ ಹಾಗೂ ಯುವಕರ ನೇಮಕಾತಿಯಲ್ಲಿ ಹುಸೇನ್ ಹಾರೂನ್ ಮಹಮ್ಮದ್, ಭಯೋತ್ಪಾದನೆ, ಕೊಲೆ ಹಾಗೂ ಸ್ಫೋಟಕಗಳ ಬಳಕೆ ವಿಭಾಗದಲ್ಲಿ ಇಕ್ಬಾಲ್, ಭಯೋತ್ಪಾದನೆ, ಕೊಲೆ, ಸ್ಫೋಟಕ ಮತ್ತು ಮಾರಕಾಸ್ತ್ರಗಳ ಪೂರೈಕೆಯಲ್ಲಿ ಆಫೀ ಜಿಲಾನಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.

ಇವರು ಮೂಲತಃ ಭಟ್ಕಳದವರಾಗಿದ್ದು, ಈ ಆರು ಮಂದಿಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ.

ಇನ್ನು ದಕ್ಷಿಣ ಕನ್ನಡ ಮೂಲದ ಬಾಲಕೃಷ್ಣ ಶೆಟ್ಟಿ(ವಿಕ್ಕಿ ಶೆಟ್ಟಿ), ಯೋಗೀಶ್, ಕಿನ್ನಿಗೋಳಿಯ ಅಲ್ತಾ ಬಾವಾ, ತೆಕ್ಕಟ್ಟೆಯ ಅಬು ಮೊಹಮ್ಮದ್, ಉಡುಪಿಯ ಮೊಯಿದಿನಬ್ಬ ಬ್ಯಾರಿ, ಯೋಗೇಶ್ ಬಂಗೇರ, ಮಂಡ್ಯದ ಸಯ್ಯದ್ ಆಜಾಜ್ ಪಾಷ, ಶಿವಮೊಗ್ಗದ ಹೆಬ್ಬೆಟ್ಟು ಮಂಜ, ಬೆಂಗಳೂರಿನ ಮೊಹಮ್ಮದ್ ಯಾಹ್ಯಾ, ಹಸನ್ ಲುಕ್ಮನ್ ಶೇಖ್ ಇವರ ವಿರುದ್ಧವೂ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ministry of Home Affairs issued Red Corner Notice on six Bhatkal terrorists. In the Red Corner Notice, In the Red Corner Notice, 12 terrorists are on the coast of the state.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more