ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋಕರ್ಣ ದಕ್ಷಿಣೆ ಸ್ವೀಕಾರ ವಿವಾದ: ರಾಮಚಂದ್ರಾಪುರ ಮಠಕ್ಕೆ ಗೆಲುವು

|
Google Oneindia Kannada News

ಕಾರವಾರ, ಆಗಸ್ಟ್ 27: ಇಲ್ಲಿನ ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿಸುವವರಿಂದ ಹಾಗೂ ಭಕ್ತರಿಂದ ದಕ್ಷಿಣೆ ಸ್ವೀಕರಿಸಲು ಅನುವು ಮಾಡಿಕೊಡಬೇಕೆಂದು ಕೋರಿ ಅನಂತ ದತ್ತಾತ್ರೇಯ ಅಡಿ ಹಾಗೂ ಇತರ 24 ಮಂದಿ ಸಲ್ಲಿಸಿದ್ದ ಅರ್ಜಿ ಸಂಬಂಧ ಕಾರವಾರದ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರಾಜ್ಯ ಹೈಕೋರ್ಟ್ ನ ಧಾರವಾಡ ಪೀಠ ವಜಾ ಮಾಡಿದೆ.

Recommended Video

Coronaದಿಂದ ಗುಣಮುಖರಾದ SP Balasubrahmanyam . ಈಗ ಪ್ರಜ್ಞಾಸ್ತಿಥಿಗೆ ಮರಳಿದ್ದಾರೆ | Oneindia Kannada

ಈ ಮೂಲಕ ಕಾರವಾರ ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ ರಾಮಚಂದ್ರಾಪುರ ಮಠ ಮತ್ತು ಶ್ರೀಕ್ಷೇತ್ರ ಗೋಕರ್ಣದ ಉಪಾದಿವಂತ ಮಂಡಳಿಗೆ ಜಯ ಸಿಕ್ಕಿದಂತಾಗಿದೆ.

ಜನರಿಗೂ, ದೇವರಿಗೂ ಸರ್ಕಾರದ ಆಡಳಿತ ಇಷ್ಟವಿಲ್ಲ: ರಾಘವೇಶ್ವರ ಶ್ರೀಜನರಿಗೂ, ದೇವರಿಗೂ ಸರ್ಕಾರದ ಆಡಳಿತ ಇಷ್ಟವಿಲ್ಲ: ರಾಘವೇಶ್ವರ ಶ್ರೀ

ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಪಾರಂಪರಿಕ ಪೂಜೆ ಮಾಡಿಸುವ ಹಾಗೂ ಭಕ್ತರಿಂದ ದಕ್ಷಿಣೆ ಸ್ವೀಕರಿಸಲು ಆಡಳಿತ ಮಂಡಳಿ ಅಡ್ಡಿ ಪಡಿಸದಂತೆ ಶಾಶ್ವತ ನಿರ್ಬಂಧಕಾಜ್ಞೆ ನೀಡಬೇಕು ಎಂದು ಕೋರಿ ಅರ್ಜಿದಾರರು ಕುಮಟಾ ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಜತೆಗೆ ತಾತ್ಕಾಲಿಕವಾಗಿ ಪೂಜೆ ಹಾಗೂ ದಕ್ಷಿಣೆ ಸ್ವೀಕಾರಕ್ಕೆ ಅವಕಾಶ ಕೋರಿದ್ದರು. ಇದಕ್ಕೆ ದೇವಾಲಯ ಆಡಳಿತ ಮಂಡಳಿ ಆಕ್ಷೇಪ ಸಲ್ಲಿಸಿತ್ತು.

Ramachandra Math Appeal Against Karwar Court Regarding Gokarna Temple Wins

ಹೈಕೋರ್ಟ್ ಆದೇಶದ ಅನ್ವಯ ಈ ದಾವೆ ವಿಚಾರಣೆಯನ್ನು ಪ್ರಧಾನ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಕಾರವಾರ ನ್ಯಾಯಾಲಯ ಉಭಯ ಪಕ್ಷಗಳ ವಾದವನ್ನು ಆಲಿಸಿ ಅರ್ಜಿದಾರರ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ ಆದೇಶ ಮಾಡಿತ್ತು.

ಈ ಆದೇಶದ ವಿರುದ್ಧ ದೇವಾಲಯ ಆಡಳಿತವನ್ನು ನೋಡಿಕೊಳ್ಳುತ್ತಿರುವ ರಾಮಚಂದ್ರಾಪುರ ಮಠ ಮತ್ತು ಶ್ರೀಕ್ಷೇತ್ರ ಗೋಕರ್ಣ ಉಪಾದಿವಂತ ಮಂಡಳಿ ವತಿಯಿಂದ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಮಹತ್ವದ ಆದೇಶ ಹೊರಡಿಸಿ, ಶ್ರೀಮಠ ಹಾಗೂ ಉಪಾದಿವಂತ ಮಂಡಳಿ ಸಲ್ಲಿಸಿದ ಮೇಲ್ಮನವಿಯನ್ನು ಪುರಸ್ಕರಿಸಿ, ಜಿಲ್ಲಾ ನ್ಯಾಯಾಲಯದ ಆದೇಶವನ್ನು ವಜಾ ಮಾಡಿದೆ. ಜತೆಗೆ ವಾದಿಗಳು ಸಲ್ಲಿಸಿದ್ದ ತಾತ್ಕಾಲಿಕ ಅರ್ಜಿಯನ್ನು ಕೂಡಾ ತಿರಸ್ಕರಿಸಿದೆ.

English summary
Ramachandra math which appealed against Karwar Court verdict Regarding Gokarna temple wins,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X