ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಜಗತ್ತಿನ ಯಾವ ಲ್ಯಾಬ್ ನಲ್ಲೂ ಕಾಣಸಿಗದ ಹೈಬ್ರಿಡ್ ತಳಿ ರಾಹುಲ್ ಗಾಂಧಿ'

|
Google Oneindia Kannada News

ಕಾರವಾರ (ಉತ್ತರ ಕನ್ನಡ), ಜನವರಿ 30: ಜಗತ್ತಿನ ಯಾವ ಲ್ಯಾಬೊರೇಟರಿಯಲ್ಲಿ ಕೂಡ ಸಿಗದಂಥ ‌"ಹೈಬ್ರಿಡ್ ತಳಿ" ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎಂದು ಬುಧವಾರದಂದು ಕಾರವಾರದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆತನಿಗೆ (ರಾಹುಲ್ ಗಾಂಧಿ) ಈ ದೇಶದ ಬಗ್ಗೆ ಗೊತ್ತಿಲ್ಲ. ಧರ್ಮದ ಬಗ್ಗೆ ಯಾವುದೇ ವಿಚಾರ ಗೊತ್ತಿಲ್ಲ. ಅವರು ಹೇಗೆ ಸುಳ್ಳು ಹೇಳುತ್ತಾರೆ ನೋಡಿ. ಆತನ ತಂದೆ ಮುಸ್ಲಿಂ, ತಾಯಿಯೊಬ್ಬರು ಕ್ರಿಶ್ಚಿಯನ್ ಮತ್ತು ಮಗ ಬ್ರಾಹ್ಮಣನಂತೆ. ಇದು ಹೇಗೆ ಸಾಧ್ಯ? ಇಂಥ ಹೈಬ್ರಿಡ್ ತಳಿಯನ್ನು ಜಗತ್ತಿನಲ್ಲಿ ಯಾವ ಲ್ಯಾಬೋರೇಟರಿಯಲ್ಲೂ ನೋಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇದೆಂಥ ವಿಪರ್ಯಾಸ! ಹೆಗಡೆಗೆ ಪಾಠ ಕಲಿಸೋಕೆ ಪತ್ನಿಯನ್ನು ಎಳೆದುತರೋದಾ?!ಇದೆಂಥ ವಿಪರ್ಯಾಸ! ಹೆಗಡೆಗೆ ಪಾಠ ಕಲಿಸೋಕೆ ಪತ್ನಿಯನ್ನು ಎಳೆದುತರೋದಾ?!

ಆದರೆ, ಇಂಥ ತಳಿಯೊಂದನ್ನು ಈ ದೇಶದಲ್ಲಿರುವ ಕಾಂಗ್ರೆಸ್ ಲ್ಯಾಬೋರೇಟರಿಯಲ್ಲಿ ನೋಡಬಹುದು. ತಂದೆ ಹಾಗೂ ಮಗ ಇಬ್ಬರೂ ಬೇರೆ ರೀತಿ ಎಂದು ಕಾರ್ಯಕ್ರಮದಲ್ಲಿ ವ್ಯಂಗ್ಯವಾಡಿದ್ದಾರೆ.

Rahul Gandhi ‘a hybrid specimen’, says minister Anant Kumar Hegde

ಅನಂತ ಕುಮಾರ್ ಹೆಗಡೆ ಪ್ರಚೋದನಾಕಾರಿ ಹೇಳಿಕೆಗಳಿಂದಲೇ ಮಾಧ್ಯಮಗಳಲ್ಲಿ ಸುದ್ದಿ ಆಗುವಂಥವರು. ಕಳೆದ ಭಾನುವಾರದಂದು ಮಾತನಾಡುತ್ತಾ, ಹಿಂದೂ ಯುವತಿಯರನ್ನು ಮುಟ್ಟುವವರ ಕೈ ಕತ್ತರಿಸಬೇಕು ಎಂದು ಹೇಳಿದ್ದರು.

English summary
Union minister Ananth Kumar Hegde has called Congress president Rahul Gandhi “a hybrid specimen” that cannot be found in any laboratory in the world. Hegde said at a function in Karnataka’s Karwar, according to news agency ANI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X