ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರು ತಿನ್ನಲು ದಿನವಿಡೀ ಹೆಣಗಾಡಿದ ಹೆಬ್ಬಾವು

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಸೆಪ್ಟೆಂಬರ್ 17: ಬೃಹತ್ ಗಾತ್ರದ ಹೆಬ್ಬಾವೊಂದು ದಿನದ ಹಿಂದಷ್ಟೇ ಹುಟ್ಟಿದ್ದ ಎಮ್ಮೆ ಕರುವನ್ನು ಕೊಂದು ಭಕ್ಷಿಸಲು ದಿನವಿಡೀ ವಿಫಲಯತ್ನ ಮಾಡಿದೆ. ಕಾರವಾರದ ಸೋನಾರವಾಡದಲ್ಲಿ ಈ ದೃಶ್ಯ ಕಂಡುಬಂದಿದೆ.

ಸೋನಾವಾಡದ ಬಳಿ ಪಾಳು ಬಿದ್ದ ಗದ್ದೆ ಬಯಲಿನಲ್ಲಿ ಎಮ್ಮೆಯೊಂದು ದಿನದ ಹಿಂದೆ ಜನಿಸಿದ ಕರುವಿನೊಂದಿಗೆ ಮೇಯಲು ತೆರಳಿತ್ತು. ಈ ವೇಳೆ ಸುಮಾರು ಒಂಬತ್ತು ಅಡಿ ಉದ್ದದ ಹೆಬ್ಬಾವು ಕರುವಿನ ಮೇಲೆ ದಾಳಿ ಮಾಡಿದೆ. ಬೆಳಿಗ್ಗೆಯಿಂದಲೂ ಗದ್ದೆಯಲ್ಲಿ ಕರು ಒದ್ದಾಡುತ್ತಿತ್ತು. ಎಮ್ಮೆ ತನ್ನ ಕರುವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಸೋತು ನೋಡುತ್ತಾ ನಿಂತಿತ್ತು. ಇದನ್ನು ದೂರದಿಂದ ನೋಡಿದ ಅಲ್ಲಿನ ಕೆಲ ಮನೆಯವರು ನಿರ್ಲಕ್ಷಿಸಿದ್ದರು.

ಶಾಕಿಂಗ್ ವಿಡಿಯೋ: ಹಾವಿನ ವಿರುದ್ಧ ನಾಲ್ಕು ಬೆಕ್ಕುಗಳ ಫೈಟಿಂಗ್!ಶಾಕಿಂಗ್ ವಿಡಿಯೋ: ಹಾವಿನ ವಿರುದ್ಧ ನಾಲ್ಕು ಬೆಕ್ಕುಗಳ ಫೈಟಿಂಗ್!

ಕೊನೆಗೆ ಸಂಜೆಯಾದರೂ ಎಮ್ಮೆ ಅಲ್ಲಿಯೇ ನಿಂತಿರುವುದನ್ನು ಗಮನಿಸಿ ಹೋಗಿ ನೋಡಿದಾಗ ಹೆಬ್ಬಾವು ಕರುವನ್ನು ನುಂಗುತ್ತಿದ್ದುದು ಗಮನಕ್ಕೆ ಬಂದಿದೆ. ಹೆಬ್ಬಾವಿನಿಂದ ತಪ್ಪಿಸಿಕೊಳ್ಳಲು ಕರು ಗದ್ದೆಯಲ್ಲಿ ಉರುಳಾಡಿದೆ. ಎಮ್ಮೆ ಕೂಡ ಬಿಡಿಸಲು ಪ್ರಯತ್ನ ನಡೆಸಿತ್ತಾದರೂ ಅದು ಸಾಧ್ಯವಾಗದೇ ಕರು ಸಾವನ್ನಪ್ಪಿತ್ತು.

Python Tried To Eat A Newborn Calf In Sonarawada

ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದರು. ಬಳಿಕ ಸ್ಥಳಕ್ಕೆ ಬಂದ ಸಿಬ್ಬಂದಿ ಕರುವಿನ ತಲೆ ನುಂಗಿದ ಹೆಬ್ಬಾವನ್ನು ಬೇರ್ಪಡಿಸಿ, ಹಿಡಿದು ಹಾವನ್ನು ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ. ಆದರೆ ತನ್ನ ಕರುವನ್ನು ಕಳೆದುಕೊಂಡ ಎಮ್ಮೆ ದಿನವಿಡೀ ಮೂಕರೋಧನೆ ಅನುಭವಿಸಿದ್ದು ನೆರೆದವರ ಕರಳು ಹಿಂಡುವಂತಿತ್ತು.

English summary
A giant python has been trying all day to kill and eat a buffalo calf that had just been born day before. The scene was found in Sonaravada of Karawara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X