• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರದ ಕಣ್ಣಿಗೆ ಕಾಣುತ್ತಿರುವುದು ಬೆಂಗಳೂರು, ಮೈಸೂರು ಮಾತ್ರ ಎಂದ ವಾಟಾಳ್ ನಾಗರಾಜ್

By ಕಾರವಾರ ಪ್ರತಿನಿಧಿ
|
   ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ವಾಟಾಳ್ ನಾಗರಾಜ್ | Oneindia Kannada

   ಕಾರವಾರ, ಅಕ್ಟೋಬರ್.28: ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಗಡಿನಾಡ ಅಭಿವೃದ್ಧಿಗೆ ಆಗ್ರಹಿಸಿ ನ.24ರಂದು ಬೆಳಗ್ಗೆ 11 ಗಂಟೆಗೆ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ಮೆರವಣಿಗೆ, ಸತ್ಯಾಗ್ರಹ ಹೋರಾಟ ನಡೆಸಲಾಗುವುದು ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

   ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ನ.1ಕ್ಕೆ ರಾಜ್ಯದ ಏಕೀಕರಣಗೊಂಡು 62 ವರ್ಷ ಆಗುತ್ತಿದೆ. ಆದರೆ, ಸರ್ಕಾರದ ಕಣ್ಣಿಗೆ ಕಾಣುತ್ತಿರೋದು ಬೆಂಗಳೂರು, ಮೈಸೂರು ಮಾತ್ರ. ಕೇರಳ, ಕಾಸರಗೋಡಿನಲ್ಲಿ ಮಲಯಾಳಿ ಭಾಷೆ ಕಡ್ಡಾಯವಾಗಿ ಅಧ್ಯಯನ ಮಾಡಬೇಕು ಎಂದು ಒತ್ತಡ ಹೇರುವ ಮೂಲಕ ಅಲ್ಲಿ ಕನ್ನಡಕ್ಕೆ ಇತಿಶ್ರೀ ಹಾಡಲಾಗಿದೆ.

   ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ: ಬೆಳಗಾವಿ ಅಧಿವೇಶನದಲ್ಲಿ ಮಂಡನೆ

   ಕಾರವಾರವನ್ನು ಅಭಿವೃದ್ಧಿ ಮಾಡುವುದಾದರೆ ಅದ್ಭುತವಾಗಿ ಬೆಳೆಸಬಹುದಿತ್ತು. ಆದರೆ, ರಾಜ್ಯ ಏಕೀಕರಣಗೊಂಡು 62 ವರ್ಷವಾದರೂ ಇಲ್ಲಿ ಹೆಚ್ಚಿನ ಅಭಿವೃದ್ಧಿ ಆಗಿಲ್ಲ. ಸಾವಿರಾರು ಜನರು ಕೆಲಸ ಮಾಡುವಂಥ ಕಾರ್ಖಾನೆ ನಿರ್ಮಾಣವಾಗಿಲ್ಲ. ಇಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ.

   ಹೀಗಾಗಿ ಇಲ್ಲಿಂದ ಶುರುವಾಗುವ ಹೋರಾಟವನ್ನು ರಾಜ್ಯದ ಉದ್ದಗಲ್ಲಕ್ಕೂ ಮುಂದುವರಿಸಲಾಗುವುದು. ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ತೀವ್ರ ಒತ್ತಾಯ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದರು. ಮುಂದೆ ಓದಿ..

    ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ

   ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ

   "ರಾಜ್ಯದ ಏಕೀಕರಣ ಸಂದರ್ಭದಲ್ಲಿ ತಾಂತ್ರಿಕವಾಗಿ 2 ಕೋಟಿ ಜನರು ಹೊರಗುಳಿದರು. ಕಾಸರಗೋಡು, ವೈನಾಡು, ಸೊಲ್ಲಾಪುರ, ಹೊಸೂರು ಸೇರಿದಂತೆ ಹೊರನಾಡಿನಲ್ಲಿರುವವರ ಬಗ್ಗೆ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ.

   ಅವರ ಶಾಲೆಗಳು, ಕನ್ನಡ ಭಾಷೆ, ಬೆಳವಣಿಗೆ, ಸಾಹಿತ್ಯ- ಸಂಸ್ಕೃತಿ ಪರಿಸ್ಥಿತಿಯ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ. ಅವರು ಹೋರಾಟ ಮಾಡಿ ಮಾಡಿ ಕೊನೆಗೆ ಕರ್ನಾಟಕಕ್ಕೆ ಸೇರೋಕೆ ಆಗಿಲ್ಲ ಎಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

   15 ವರ್ಷದಿಂದ ಈಚೆಗೆ ರಾಜಕಾರಣಿಗಳು ಕೆಟ್ಟ ಬಾಯಿ, ಕೆಟ್ಟ ನಾಲಿಗೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಎಲ್ಲಿ ಏನು ಮಾತನಾಡಬೇಕು ಗೊತ್ತಿಲ್ಲ. ರಾಜ್ಯದ ರಾಜಕಾರಣಿಗಳ ಪರಿಸ್ಥಿತಿಯು ಸಾಮಾನ್ಯ ಜನರು ಕೂಡ ಕೆಳಮಟ್ಟದಲ್ಲಿ ಟೀಕಿಸುವಂಥವಾಗಿದೆ" ಎಂದು ವಾಟಾಳ್ ನಾಗರಾಜ್ ಬೇಸರವ್ಯಕ್ತಪಡಿಸಿದರು.

    ಈ ಬಗ್ಗೆ ಕಡ್ಡಾಯ ತೀರ್ಮಾನವಾಗಲಿ

   ಈ ಬಗ್ಗೆ ಕಡ್ಡಾಯ ತೀರ್ಮಾನವಾಗಲಿ

   "ರಾಜ್ಯದಲ್ಲಿ ಹೊರಗಿನವರ ದಾಂಧಲೆ ಹೆಚ್ಚಾಗಿದೆ. ಶಾಸನ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಬೇಕು. ಸರ್ಕಾರದಲ್ಲೇ ಕನ್ನಡಿಗರಿಗೆ ಮೀಸಲಾತಿ ಕೊಡುತ್ತಿಲ್ಲ. ಇನ್ಫೋಸಿಸ್ ಸುಧಾ ಮೂರ್ತಿ ಅವರು ಭಾರೀ ಮೆರವಣಿಗೆ ನಡೆಸಿದ್ದನ್ನು ಕಂಡಿದ್ದೀರಿ. ಅವರಿಗೆ ಸಾವಿರಾರು ಎಕರೆ ಕೊಟ್ಟಿದ್ದೀರಿ. ಆದರೆ, ಐಟಿ ಬಿಟಿಯಂಥ ಕಂಪನಿಗಳೇ ಕನ್ನಡಿಗರಿಗೆ ಉದ್ಯೋಗ ಕೊಡುತ್ತಿಲ್ಲ. ಈ ಬಗ್ಗೆ ಕಡ್ಡಾಯ ತೀರ್ಮಾನವೊಂದು ಆಗಬೇಕು

   ತಮಿಳುನಾಡು, ಕೇರಳ, ಆಂಧ್ರದಲ್ಲಿ ಕನಿಷ್ಠ ಮೂರು ತಿಂಗಳು ಕನ್ನಡ ಚಿತ್ರ ಪ್ರದರ್ಶನ ಮಾಡಬೇಕು. ಆ ಚಿತ್ರ ನಡೆಯಲಿ, ನಡಿಯದಿರಲಿ. ಪ್ರದರ್ಶನ ಮಾಡಲೇಬೇಕು. ಇಲ್ಲ ಅಂದರೆ ಕರ್ನಾಟಕದಲ್ಲಿ ನಿಮ್ಮ ಚಿತ್ರ ಹಾಕೋದು ಸರಿಯಲ್ಲ" ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

   ಕಾಸರಗೋಡು ಸರ್ಕಾರಿ ಶಾಲೆ ರಕ್ಷಿಸಿ: ಸರ್ಕಾರಕ್ಕೆ ವಾಟಾಳ್ ಒತ್ತಡ

    ಸರ್ಕಾರ ಅವರನ್ನು ಗಡಿಪಾರು ಮಾಡಬೇಕು

   ಸರ್ಕಾರ ಅವರನ್ನು ಗಡಿಪಾರು ಮಾಡಬೇಕು

   "ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ರಾಜ್ಯೋತ್ಸವವನ್ನು ವಿರೋಧಿಸಿ ಕರಾಳ ದಿನಾಚರಣೆ ಮಾಡಲು ಕರೆ ಕೊಟ್ಟಿದೆ. ಸರ್ಕಾರ ಅವರನ್ನು ಗಡಿಪಾರು ಮಾಡ್ಬೇಕು. ಇದರಲ್ಲಿ ಮತ್ತೆ ಬೇರೆ ಮಾತೇ ಇಲ್ಲ. ಏನೇ ಆದರೂ ಚಿಂತೆ ಇಲ್ಲ, ಅವರನ್ನು ಬಂಧನ ಮಾಡಬೇಕು. ಸರ್ಕಾರ ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು.

   ರಾಜ್ಯ ಸರ್ಕಾರವೇ ಅದ್ಧೂರಿಯಾಗಿ ಅಲ್ಲಿ ಕನ್ನಡ ದಿನಾಚರಣೆಯನ್ನು ಮಾಡ್ಬೇಕು. ಅವಾಗ ಅವರಿಗೆ ಬುದ್ಧಿ ಬರುತ್ತೆ. ಅವರ ಜತೆ ಸರಸ ಆಡುವಂಥ ನಮ್ಮ ಜನಪ್ರತಿನಿಧಿಗಳು, ಮತಕ್ಕಾಗಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯದಲ್ಲ" ಎಂದು ವಾಟಾಳ್ ನಾಗರಾಜ್ ವಿಷಾದವ್ಯಕ್ತಪಡಿಸಿದರು.

    ಮೀಟೂಗೆ ಪ್ರತಿಕ್ರಿಯೆ ಕೊಟ್ಟ ವಾಟಾಳ್

   ಮೀಟೂಗೆ ಪ್ರತಿಕ್ರಿಯೆ ಕೊಟ್ಟ ವಾಟಾಳ್

   ಕನ್ನಡ ಚಿತ್ರರಂಗದಲ್ಲಿ ಮೀಟೂ ಬಹಳ ಅಲೆಯನ್ನು ಎಬ್ಬಿಸಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವಾಟಾಳ್ ನಾಗರಾಜ್, ‘ಮೀಟೂ ನಿಜ. ಆದರೆ, ಹಾಗಂದ್ರೆ ಏನು? ಅದನ್ನ ವಿಶ್ಲೇಷಣೆ ಮಾಡುತ್ತಾ ಕುಳಿತುಕೊಂಡರೆ ಜಾಸ್ತಿ ಆಗುತ್ತೆ. ಅದರ ಬಗ್ಗೆ ಚರ್ಚೆ ಮಾಡೋಕೆ ಬೇಕಾದಷ್ಟಿದೆ. ನಾವು ನೀವು ಮೀಟೂ ಅಷ್ಟೇ' ಎಂದು ಹೇಳಿದಾಗ ಸುದ್ದಿಗೋಷ್ಠಿ ನಗೆಗಡಲಲ್ಲಿ ತೇಲಿತು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Protest will be held at Karwar's Deputy Commissioner office on 11th November, demanding development of North Karnataka, Hyderabad Karnataka and the border.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more