ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಮ್ಸ್‌ಗೆ ಶಿವಾನಂದ ಕುಡ್ತರಕರ್ ಮರು ನೇಮಕ; ಪ್ರತಿಭಟನೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಡಿಸೆಂಬರ್ 18: ಬಾಣಂತಿ ಗೀತಾ ಬಾನಾವಳಿ ಸಾವಿನ ಪ್ರಕರಣದ ತನಿಖಾ ವರದಿ ಬಂದ ತಕ್ಷಣ ಸರ್ಜನ್ ಡಾ. ಶಿವಾನಂದ ಕುಡ್ತರಕರ್ ಜಿಲ್ಲಾ ಆಸ್ಪತ್ರೆಗೆ ಮರು ನೇಮಕಗೊಂಡಿದ್ದಾರೆ. ಇದನ್ನು ವಿರೋಧಿಸಿ ಗೀತಾ ಕುಟುಂಬಸ್ಥರು ಕಾರವಾರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಾಣಂತಿ ಸಾವಿಗೆ ಯಾವುದೇ ಓರ್ವ ವೈದ್ಯನ ನಿರ್ಲಕ್ಷ್ಯ ಕಾರಣ ಅಲ್ಲ ಎಂದು ಸಿಇಒ ನೇತೃತ್ವದ ತನಿಖಾ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ. ಇದರ ಬೆನ್ನಲ್ಲೇ ಸರ್ಜನ್ ಕುಡ್ತರಕರ್ ಮತ್ತೆ ಜಿಲ್ಲಾಸ್ಪತ್ರೆಗೆ ಬುಧವಾರದಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಬಾಣಂತಿ ಗೀತಾ ಸಾವಲ್ಲಿ ನಿರ್ಲಕ್ಷವಾಗಿಲ್ಲ, ಸರ್ಜನ್ ನಿರ್ದೋಷಿ ಎಂದ ವರದಿ ಬಾಣಂತಿ ಗೀತಾ ಸಾವಲ್ಲಿ ನಿರ್ಲಕ್ಷವಾಗಿಲ್ಲ, ಸರ್ಜನ್ ನಿರ್ದೋಷಿ ಎಂದ ವರದಿ

ಇದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮೃತಳ ಮನೆ ಇರುವ ಸರ್ವೋದಯ ನಗರದಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಜನರು ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗುವ ತಕ ಡಾ. ಶಿವಾನಂದ ಕುಡ್ತರಕರ್ ಅವರನ್ನು ಇಲ್ಲಿಂದ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.

 ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು; ಅನಸ್ತೇಶಿಯಾ ಓವರ್ ಡೋಸ್ ಆರೋಪ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು; ಅನಸ್ತೇಶಿಯಾ ಓವರ್ ಡೋಸ್ ಆರೋಪ

ಜಿಲ್ಲಾಧಿಕಾರಿ ಡಾ. ಕೆ. ಹರೀಶ ಕುಮಾರ್ ಪ್ರತಿಭಟನೆ ನಡೆಸುತ್ತಿದ್ದ ಜನರನ್ನು ಭೇಟಿ ಮಾಡಿದರು. ಸಿಇಓ ನೇತೃತ್ವದ ಸಮಿತಿಯಲ್ಲಿ ನಮಗೆ ನಂಬಿಕೆ ಇಲ್ಲವೆಂದು ಮೊದಲೇ ತಿಳಿಸಿದ್ದೆವು. ಆದರೂ ಜಿಲ್ಲಾಡಳಿತ ಸರ್ಜನ್ ಅವರ ಪರವಾದ ನಿಲುವು ತಾಳಿ, ಅವರಿಗೆ ಅನುಕೂಲ ಆಗುವಂತೆ ಸ್ಥಳೀಯ ವೈದ್ಯರನ್ನೇ ಒಳಗೊಂಡ ತಂಡ ರಚಿಸಿ ತನಿಖೆ ನಡೆಸಿತು ಎಂದು ಜಿಲ್ಲಾಧಿಕಾರಿಗಳ ಮುಂದೆ ಆರೋಪಿಸಿದರು.

ಕಾರವಾರ ಕಿಮ್ಸ್‌ಗೆ ವಾಪಸ್ ಆದ ಡಾ. ಶಿವಾನಂದ ಕುಡ್ತರಕರ್ ಕಾರವಾರ ಕಿಮ್ಸ್‌ಗೆ ವಾಪಸ್ ಆದ ಡಾ. ಶಿವಾನಂದ ಕುಡ್ತರಕರ್

ಜಿಲ್ಲಾಧಿಕಾರಿಗಳ ಮುಂದೆ ಆರೋಪ

ಜಿಲ್ಲಾಧಿಕಾರಿಗಳ ಮುಂದೆ ಆರೋಪ

ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆಗಾಗಿ ಗೀತಾ ಬಾನಾವಳಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆಯ ವೇಳೆ ಅವರು ಮೃತಪಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿದ ತಂಡ ಕೂಡ ಬಾಣಂತಿ ಸಾವಿನಲ್ಲಿ ಸರ್ಜನ್ ಅವರ ತಪ್ಪಿಲ್ಲ ಎಂದು ಹೇಳಿದೆ. ತನಿಖೆಯ ವೇಳೆ ಮೃತಳ ಕುಟುಂಬಸ್ಥರ, ಮುಖಂಡರ ಹೇಳಿಕೆಗಳನ್ನು ಪಡೆದಿಲ್ಲ ಹಾಗೂ ಅವುಗಳ ಬಗ್ಗೆ ಹೆಚ್ಚು ಗಮನ ಕೊಟ್ಟಿಲ್ಲ ಎಂದು ಜಿಲ್ಲಾಧಿಕಾರಿಗಳ ಮುಂದೆ ಆರೋಪಿಸಿದರು.

ಈ ವರದಿಯೇ ಅಂತಿಮವಲ್ಲ

ಈ ವರದಿಯೇ ಅಂತಿಮವಲ್ಲ

ಜಿಲ್ಲಾಧಿಕಾರಿಗಳು ಮಾತನಾಡಿ, "ಸಿಇಒ ನೇತೃತ್ವದ ತನಿಖಾ ವರದಿಗೂ, ಸರ್ಜನ್ ಮರು ನೇಮಕಕ್ಕೂ ಯಾವುದೇ ಸಂಬಧವಿಲ್ಲ. ವರದಿ ಸಲ್ಲಿಕೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುವುದಕ್ಕೂ, ಸರ್ಜನ್ ಮರು ನೇಮಕವೂ ಕಾಕತಾಳೀಯವಾಗಿ ಒಂದರ ಹಿಂದೆ ಒಂದರಂತೆ ಆಗಿದೆ. ಆದರೆ, ಆ ವರದಿಯನ್ನು ನಾವೆಲ್ಲಿಯೂ ಸಲ್ಲಿಸಿಲ್ಲ. ಈ ವರದಿಯೇ ಅಂತಿಮವೂ ಅಲ್ಲ. ತನಿಖೆ ಇನ್ನೂ ಮುಂದುವರಿದಿದೆ" ಎಂದು ಸ್ಪಷ್ಟಪಡಿಸಿದರು.

ಆರೋಗ್ಯ ಇಲಾಖೆಗೆ ಮಾಹಿತಿ ನೀಡುತ್ತೇವೆ

ಆರೋಗ್ಯ ಇಲಾಖೆಗೆ ಮಾಹಿತಿ ನೀಡುತ್ತೇವೆ

"ಸರ್ಜನ್ ಅವರ ಮರು ನೇಮಕ ಸರ್ಕಾರದಿಂದ ಆಗಿದೆ. ಅದನ್ನು ತಡೆಯುವ ಅಧಿಕಾರ ನನಗಿಲ್ಲ. ಆದರೆ, ಅವರ ಮರು ನೇಮಕದ ಬಗ್ಗೆ ಸಾರ್ವಜನಿಕರಿಗೆ ಅಸಮಾಧಾನವಿದೆ ಎಂದು ಆರೋಗ್ಯ ಇಲಾಖೆಗೆ ಜಿಲ್ಲಾಡಳಿತದಿಂದ ಮಾಹಿತಿ ನೀಡುತ್ತೇವೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.

Recommended Video

ನೋ ಫೋಟೋ ನೋ ಫೋಟೋ ಅಂತಾನೇ kareena ಮಗ..! | Oneindia Kannada
ಡಾ. ಶಿವಾನಂದ ಮರು ನೇಮಕ

ಡಾ. ಶಿವಾನಂದ ಮರು ನೇಮಕ

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಬೋಧಕ ಆಸ್ಪತ್ರೆಯ ಸರ್ಜನ್ ಹಾಗೂ ವೈದ್ಯಕೀಯ ಅಧೀಕ್ಷಕರಾಗಿ ಡಾ. ಶಿವಾನಂದ ಕುಡ್ತರಕರ್ ಬುಧವಾರ ಮರು ನೇಮಕವಾಗಿದ್ದಾರೆ. ಶಸ್ತ್ರ ಚಿಕಿತ್ಸೆ ವೇಳೆ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಡಾ. ಶಿವನಾಂದ ವರ್ಗಾವಣೆಗೊಂಡಿದ್ದರು. ಇಷ್ಟು ದಿನ ಈ ಹುದ್ದೆಯಲ್ಲಿ ಸ್ಥಾನಿಕ ವೈದ್ಯಕೀಯ ಅಧಿಕಾರಿಯಾಗಿದ್ದ ಡಾ. ವೆಂಕಟೇಶ್ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಬುಧವಾರ ಡಾ. ಶಿವಾನಂದ ಅಧಿಕಾರ ವಹಿಸಿಕೊಂಡಿದ್ದಾರೆ.

English summary
Protest against Dr. Shivananda Kudthalakar who re appointed as surgeon of the Karwar Institute of Medical Sciences (KIMS). He transferred after the row of death of the newborn's mother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X