ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ‌ ಕನ್ನಡ ಎಸ್‌ಪಿ ಹೆಸರು ಬಳಸಿ ಹಣ ಕೇಳುತ್ತಿರುವ ಪೊಲೀಸ್ ಅಧಿಕಾರಿಗಳು?

|
Google Oneindia Kannada News

ಕಾರವಾರ, ಆಗಸ್ಟ್ 28: ಮೇಲಾಧಿಕಾರಿಗಳಿಗೆ ಹಣ ಕೊಡಬೇಕು ಎಂದು ಠಾಣೆ ಮಟ್ಟದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳೇ ಹಲವು ದಂಧೆಕೋರರಿಂದ ಹಣ ಪಡೆಯುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. "ನನ್ನ ಹೆಸರನ್ನು ಯಾರೇ ದುರ್ಬಳಕೆ ಮಾಡಿಕೊಂಡರೂ ಬಿಡುವುದಿಲ್ಲ,'' ಎಂದು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಖಡಕ್ ಎಚ್ಚರಿಕೆ ನೀಡಿದ್ದಾರೆ.

"ಉತ್ತರ ಕನ್ನಡ ಜಿಲ್ಲೆಯ ಕೆಲವು ಠಾಣೆಗಳಲ್ಲಿ ಪೊಲೀಸರು ಮೇಲಾಧಿಕಾರಿಗಳಿಗೂ ಹಣ ಕೊಡಬೇಕು ಎಂದು ಜನರಿಂದ ಹಣ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದು ಸಹಿಸಲಾಗದ ವಿಷಯವಾಗಿದೆ. ಮೇಲಾಧಿಕಾರಿಗೆ ಎಂದು ಹಣ ಕೇಳಿದರೆ ಯಾರೂ ಪೊಲೀಸರಿಗೆ ಯಾವ ವಿಷಯಕ್ಕೂ ಹಣ ಕೊಡಬೇಡಿ,'' ಎಂದು ಶಿವಪ್ರಕಾಶ್ ದೇವರಾಜು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

"ನಾನು ಯಾರ ಬಳಿಯೂ ಹಣ ಕೇಳುವುದಿಲ್ಲ. ಯಾರೇ ಪೊಲೀಸರು ನನಗೆ ಹಣ ತಂದುಕೊಡುವುದಿಲ್ಲ. ಪೊಲೀಸ್ ಕೆಲಸವೆಂದರೆ ಜನರ ಸೇವೆ ಮಾಡುವ ಜವಾಬ್ದಾರಿ. ಸರ್ಕಾರ ನಮಗೆ ಬಂಧಿಸುವ, ಕ್ರಮ ಕೈಗೊಳ್ಳುವ ಬಲವನ್ನು ಕೊಟ್ಟಿದೆಯೆಂದರೆ ಅದು ಜನ ಸೇವೆ ಮಾಡಲಿ ಎಂದು. ಆದರೆ ಇದನ್ನೇ ದುರ್ಬಳಕೆ ಮಾಡಿಕೊಂಡು ಜನರಿಂದ ಕೆಲ ವಿಚಾರದಲ್ಲಿ ಹಣ ಪಡೆಯುವುದು ಸರಿಯಾದುದ್ದಲ್ಲ. ಇದರಲ್ಲಿ ಯಾರೇ ಭಾಗಿಯಿದ್ದರೂ ನಾನು ಬಿಡುವುದಿಲ್ಲ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡೇ ಕೈಗೊಳ್ಳುತ್ತೇನೆ,'' ಎಂದರು.

Karwar: Police Allegedly Asking Money From People By Misusing Uttara Kannada SP Name

"ಯಾರಾದರೂ ಸಾರ್ವಜನಿಕರ ಬಳಿ ಮೇಲಾಧಿಕಾರಿಗಳಿಗೆ ಹಣ ಕೊಡಬೇಕು ಎಂದು ಹಣ ಪಡೆದಿದ್ದೇ ಆದರೆ ಅಂಥವರು ಠಾಣೆಯಲ್ಲಿರುವ ದೂರು (ಕಂಪ್ಲೇಂಟ್) ಬಾಕ್ಸ್‌ನಲ್ಲಿ ದೂರನ್ನು ಕೊಡಬಹುದು. ಅಲ್ಲದೇ ಸಾಕ್ಷಿ ಸಮೇತ ನನಗೆ ವೈಯಕ್ತಿಕವಾಗಿಯೂ ದೂರು ಕೊಡಬಹುದು. ಇಂತಹ ಸಂಸ್ಕೃತಿಗೆ ಕಡಿವಾಣ ಹಾಕಬೇಕಾಗಿದೆ,'' ಎಂದು ಅವರು ಬೇಸರಿಂದಲೇ ನುಡಿದರು.

ಮಟ್ಕಾ ಬುಕ್ಕಿಗಳ ಮೇಲೆ ನಿಗಾ
"ಉತ್ತರ ಕನ್ನಡ ಜಿಲ್ಲೆಯಲ್ಲಿ ಓಸಿ, ಮಟ್ಕಾ ಕಡಿವಾಣಕ್ಕೆ ಹಲವು ಕ್ರಮ ಕೈಗೊಳ್ಳಲಾಗಿದೆ. ಅದಾಗಿಯೂ ಹಲವೆಡೆ ಓಸಿ, ಮಟ್ಕಾ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ," ಎಂದು ಶಿವಪ್ರಕಾಶ್ ದೇವರಾಜು ಹೇಳಿದರು.

"ಯಾರು ಓಸಿ ಬುಕ್ಕಿಗಳು ಇರುತ್ತಾರೋ, ಅಂಥವರ ಮೇಲೆ ನಿಗಾ ಇಡಲಾಗುವುದು. ಜೊತೆಗೆ ಒಮ್ಮೆ ಪ್ರಕರಣ ದಾಖಲಾದವರ ಮೇಲೂ ನಿಗಾ ಇಡಲಾಗುವುದು. ಅಂಕೋಲಾ, ಶಿರಸಿ ಸೇರಿ ಹಲವೆಡೆ ಓಸಿ, ಮಟ್ಕಾ ಹೆಚ್ಚಾಗಿದೆ ಎನ್ನುವ ದೂರು ಕೇಳಿ ಬಂದಿದೆ. ಈ ಬಗ್ಗೆ ಮುಂದಿನ ದಿನದಲ್ಲಿ ಇನ್ನಷ್ಟು ಕಟ್ಟುನಿಟ್ಟನ ಕ್ರಮ ಕೈಗೊಳ್ಳಲಾಗುವುದು," ಎಂದಿದ್ದಾರೆ.

ಉತ್ತರ ಕನ್ನಡದಲ್ಲಿ ರಾಜ್ಯದಲ್ಲೇ ಹೆಚ್ಚು ಗೋವು ಕಳವು ಪ್ರಕರಣ!
"ಹೊಸದಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಉತ್ತರ ಕನ್ನಡ ಜಿಲ್ಲೆಯಲ್ಲಿ 16 ಕೇಸ್‌ಗಳನ್ನು ದಾಖಲಿಸಲಾಗಿದ್ದು, ರಾಜ್ಯದಲ್ಲಿಯೇ ಹೆಚ್ಚಿನ ಪ್ರಕರಣ ದಾಖಲಾದ ಜಿಲ್ಲೆ ಉತ್ತರ ಕನ್ನಡವಾಗಿದೆ," ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ಹೇಳಿದರು.

"ಉತ್ತರ ಕನ್ನಡ ಜಿಲ್ಲೆಯಲ್ಲಿ ಐಷಾರಾಮಿ ಕಾರಿನಲ್ಲಿ ಬಂದು ಹಸುಗಳನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಮುಂದೆ ಇಂತಹ ಕಳ್ಳತನ ತಡೆಗೆ ಜಿಲ್ಲೆಯಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾತ್ರಿ ವೇಳೆ ಕಾರಿನಲ್ಲಿ ಆಗಮಿಸುವ ಕಳ್ಳರು ಹಿಂದಿನ ಸೀಟು ತೆಗೆದು ಅಲ್ಲಿ ಹಸುಗಳನ್ನು ತುಂಬಿ ಕಸಾಯಿಖಾನೆಗೆ ಸಾಗಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ಮುಂದೆ ಪುನರಾವರ್ತನೆ ಆಗದಂತೆ ತಡೆಯಲು ಚೆಕ್‌ಪೋಸ್ಟ್‌ಗಳಲ್ಲಿ ಹೊರ ರಾಜ್ಯದ ವಾಹನಗಳ ಮೇಲೆ, ವೇಗವಾಗಿ ಚಲಿಸುವ ವಾಹನಗಳ ಮೇಲೆ ನಿಗಾ ಇಡಲಾಗುವುದು," ಎಂದರು.

Recommended Video

ರಹಾನೆ ಕೈಬಿಟ್ರೆ ಯಾರಾಗ್ತಾರೆ 4 ನೇ ಟೆಸ್ಟ್ ಪಂದ್ಯದ ಉಪನಾಯಕ? | Oneindia Kannada

"ಬಾಳೆಗುಳಿಯಿಂದ ಭಟ್ಕಳದವರೆಗೆ ನಾಲ್ಕು ಕಡೆ ಚೆಕ್‌ಪೋಸ್ಟ್ ಮಾಡಿದ್ದು, ಬಿಡಾಡಿ ದನಗಳ ಕೊಂಬಿಗೆ ರೇಡಿಯಂ ಹಾಕಲಾಗುವುದು. ಕಾರಿನಲ್ಲಿ ದನವನ್ನು ತುಂಬಿಕೊಂಡು ಹೋಗುವಾಗ ರೇಡಿಯಂ ಮೂಲಕವಾದರೂ ಕಾಣಲಿ ಎಂದು ರೇಡಿಯಂಗಳನ್ನು ಹಾಕಲಾಗುವುದು. ಸಾರ್ವಜನಿಕರ ಸಹಕಾರ ಸಹ ಇದರಲ್ಲಿ ಮುಖ್ಯವಾಗಿದೆ. ಜನರು ಎಲ್ಲೇ ಕಳ್ಳತನವಾದರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು," ಎಂದು ಮನವಿ ಮಾಡಿಕೊಂಡರು.

English summary
Uttara Kannada SP Shivaprakash Devaraju responded to allegations that police officers are receiving money from the People.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X