ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇವರು ಉತ್ತರ ಕನ್ನಡ ಜಿಲ್ಲೆಯ 'ಕೊರೊನಾ ವಾರಿಯರ್ಸ್'...

|
Google Oneindia Kannada News

ಕಾರವಾರ, ಜುಲೈ 7: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಇತರ ಇಲಾಖೆಯ ಅಧಿಕಾರಿ, ಸಿಬ್ಬಂದಿಯ ಕಾರ್ಯ ದಿನನಿತ್ಯ ಪ್ರತ್ಯಕ್ಷವಾಗಿ ಅಥವಾ ಸುದ್ದಿ ಮಾಧ್ಯಮಗಳಲ್ಲಿ ಕಾಣುತ್ತಿರುತ್ತೇವೆ. ಆದರೆ, ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆಯೋ ಇಲ್ಲವೋ ಎಂಬ ವರದಿ ನೀಡಲು ನಿದ್ದೆ, ಊಟ- ತಿಂಡಿ ಬಿಟ್ಟು ಹಗಲು- ರಾತ್ರಿ ಪ್ರಯೋಗಾಲಯದಲ್ಲಿ ದುಡಿಯುತ್ತಿರುವವರ ಕಾರ್ಯ ಮಾತ್ರ ಎಲೆಮರೆಯ ಕಾಯಿಯಾಗೇ ಉಳಿದುಬಿಟ್ಟಿದೆ.

ಹೌದು, ಕೊರೊನಾ ಸೋಂಕಿನ ವಿರುದ್ಧದ ಹೋರಾಟ ಒಬ್ಬರಿಂದ ಮಾತ್ರವಲ್ಲ, ಒಗ್ಗಟ್ಟಿನ ಹೋರಾಟ. ಹಾಗೆಯೇ, ಪ್ರತಿದಿನ ಜಿಲ್ಲಾಡಳಿತ ಅಥವಾ ಸರ್ಕಾರ ಬಿಡುಗಡೆ ಮಾಡುವ ಹೆಲ್ತ್ ಬುಲೆಟಿನ್ ಹಿಂದೆಯೂ ಅದೆಷ್ಟೋ ಕೈಗಳ ದಿನವಿಡಿಯ ಶ್ರಮವೂ ಅಡಗಿದೆ ಎನ್ನುವುದನ್ನು ಕೂಡ ಕೊರೊನಾದ ಸದ್ದು- ಸುದ್ದಿಗಳ ನಡುವೆ ಮರೆತೇ ಬಿಟ್ಟಿದ್ದೇವೆ.

 ಉತ್ತರ ಕನ್ನಡದ ಕಿಮ್ಸ್‌ ನಲ್ಲಿ ಪ್ರಯೋಗಾಲಯ

ಉತ್ತರ ಕನ್ನಡದ ಕಿಮ್ಸ್‌ ನಲ್ಲಿ ಪ್ರಯೋಗಾಲಯ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕಿಮ್ಸ್) ಕೋವಿಡ್- 19 ಪ್ರಯೋಗಾಲಯ ತಿಂಗಳ ಹಿಂದೆ ಆರಂಭಗೊಂಡಿದೆ. ಈ ಪ್ರಯೋಗಾಲಯ ಆರಂಭಗೊಂಡು ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಅವರ ಮಾರ್ಗದರ್ಶನ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್ ಅವರ ಪರಿಶ್ರಮ, ಕಿಮ್ಸ್‌ ನ ನಿರ್ದೇಶಕ ಡಾ.ಗಜಾನನ ನಾಯಕ ಅವರ ಸಹಕಾರ ಇದೆ.

ಉತ್ತರ ಕನ್ನಡ ಜಿಲ್ಲೆ; ಈ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಚಿಕಿತ್ಸೆ ಲಭ್ಯಉತ್ತರ ಕನ್ನಡ ಜಿಲ್ಲೆ; ಈ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಚಿಕಿತ್ಸೆ ಲಭ್ಯ

ಸದ್ಯ ಈ ಪ್ರಯೋಗಾಲಯ ಕಿಮ್ಸ್ ನ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಏಳು ವೈದ್ಯರು, ಇಬ್ಬರು ವಿಜ್ಞಾನಿಗಳು, 9 ಮಂದಿ ತಂತ್ರಜ್ಞರು, ಡಾಟಾ ಆಪರೇಟರ್ಸ್ 4 ಹಾಗೂ ಡಿ ದರ್ಜೆಯ ಇಬ್ಬರು ನೌಕರರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

 ಸುಮಾರು 4,000 ಯಶಸ್ವಿ ಪರೀಕ್ಷೆ...

ಸುಮಾರು 4,000 ಯಶಸ್ವಿ ಪರೀಕ್ಷೆ...

ವೈದ್ಯರು ಮೂರು ಶಿಫ್ಟ್ ನಂತೆ ಕಾರ್ಯನಿರ್ವಹಿಸುತ್ತಿದ್ದು, ಒಂದು ಶಿಫ್ಟ್ ಎಂಟು ಗಂಟೆ ಇರಲಿದೆ. ಕಿಮ್ಸ್ ಕೋವಿಡ್ ಪ್ರಯೋಗಾಲಯದಲ್ಲಿ ಡಾ.ಶೀತಲ ಗೌಡ, ಡಾ.ನವೀನ್, ಡಾ.ಅಶ್ವಿನ್, ಡಾ.ಚಾಂದಿನಿ, ಡಾ.ಸ್ನೇಹಾ ಕುಕನೂರ್, ಸ್ವಪ್ನಾ ಹಾಗೂ ಪಾರಿತೋಶ್ ಇವರೊಂದಿಗೆ ವಿಜ್ಞಾನಿಗಳಾಗಿ ಡಾ.ಶಿವಕುಮಾರ್ ಹಾಗೂ ಡಾ.ರಾಜೇಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜೂನ್ ಒಂದರಿಂದ ಕಾರ್ಯಾರಂಭ ಮಾಡಿದ ಈ‌ ಲ್ಯಾಬ್ ನಲ್ಲಿ ಈವರೆಗೆ ಸುಮಾರು 4,000 ಪರೀಕ್ಷೆಗಳನ್ನು ನಡೆಸಲಾಗಿದೆ. ಲ್ಯಾಬ್ ನ ಸಾಮರ್ಥ್ಯ ದಿನಕ್ಕೆ 250 ಆರ್ ಟಿ- ಪಿಸಿಆರ್ (including pooling) ಹಾಗೂ ಟ್ರ್ಯೂ- ನ್ಯಾಟ್ ನಲ್ಲಿ 20 ಪರೀಕ್ಷೆಗಳನ್ನು ದಿನಕ್ಕೆ ನಡೆಸಬಹುದಾಗಿದೆ. ಆದರೆ, ಸದ್ಯ ದಿನವೊಂದಕ್ಕೆ 500ರಷ್ಟು ಗಂಟಲು ದ್ರವದ ಮಾದರಿ ಜಿಲ್ಲೆಯ ವಿವಿಧೆಡೆಯಿಂದ ಪರೀಕ್ಷೆಗಾಗಿ ಲ್ಯಾಬ್ ಗೆ ಬರುತ್ತಿವೆ. ಹೀಗಾಗಿ ಇಲ್ಲಿನ ಸಿಬ್ಬಂದಿ ಹಗಲು- ರಾತ್ರಿ ಎನ್ನದೇ ಒತ್ತಡದ ನಡುವೆಯೂ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ವರದಿಯಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕರ್ತವ್ಯದ ಅವಧಿಯ ಎಂಟು ತಾಸೂ ಗಮನವಿಟ್ಟು ಪರೀಕ್ಷೆಗಳನ್ನು ನಡೆಸಬೇಕಿದೆ.

 ಪಿಪಿಇ ಕಿಟ್ ಧರಿಸಿಯೇ ಇರಬೇಕು...

ಪಿಪಿಇ ಕಿಟ್ ಧರಿಸಿಯೇ ಇರಬೇಕು...

ಇನ್ನು, ಗಂಟಲು ದ್ರವದಲ್ಲಿನ ವೈರಾಣು ಪರೀಕ್ಷೆ ನಡೆಸುವ ಸಿಬ್ಬಂದಿಗೂ ಸೋಂಕು ಒಮ್ಮೊಮ್ಮೆ ತಗುಲುವ ಸಾಧ್ಯತೆ ಇರುತ್ತದೆ. ರಾಜ್ಯದ ಕೆಲವೆಡೆ ಕೂಡ ಈ ರೀತಿಯ ಘಟನೆಗಳು ನಡೆದಿವೆ. ಹೀಗಾಗಿ ಅತಿ ಜಾಗರೂಕತೆಯಿಂದ ಇಲ್ಲಿ ಕಾರ್ಯನಿರ್ವಹಿಸಬೇಕಿದೆ. ಮುಂಜಾಗ್ರತಾ ಕ್ರಮವಾಗಿ ಕರ್ತವ್ಯದ ಅವಧಿಯಲ್ಲಿ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ಧರಿಸಿಯೇ ಇಲ್ಲಿ ಕಾರ್ಯನಿರ್ವಹಿಸುವುದು ಅಗತ್ಯ ಹಾಗೂ ಅನಿವಾರ್ಯವಾಗಿದೆ.

ವೈರಾಣು ಹೆಚ್ಚುವ ಸಾಧ್ಯತೆ; ಕಿಮ್ಸ್ ‌ನಲ್ಲಿ ಮತ್ತೆ 100 ಹಾಸಿಗೆಗಳ ಕೋವಿಡ್- 19 ವಾರ್ಡ್ವೈರಾಣು ಹೆಚ್ಚುವ ಸಾಧ್ಯತೆ; ಕಿಮ್ಸ್ ‌ನಲ್ಲಿ ಮತ್ತೆ 100 ಹಾಸಿಗೆಗಳ ಕೋವಿಡ್- 19 ವಾರ್ಡ್

 ಗಂಟಲು ದ್ರವ ಪರೀಕ್ಷೆಗೆ ಬೇಕು 8 ಗಂಟೆ

ಗಂಟಲು ದ್ರವ ಪರೀಕ್ಷೆಗೆ ಬೇಕು 8 ಗಂಟೆ

ಓರ್ವ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ನಡೆಸಲು ಕನಿಷ್ಠ 6ರಿಂದ 8 ಗಂಟೆ ಬೇಕಾಗುತ್ತದೆ. ಆ ವ್ಯಕ್ತಿಗೆ ಪಾಸಿಟಿವ್ ಅಥವಾ ನೆಗೆಟಿವ್ ಎಂದು ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸುವ ಹೊತ್ತಿಗೆ ಇನ್ನೊಂದು ಗಂಟೆ ಹೆಚ್ಚೇ ತಗುಲುತ್ತದೆ. ಈ ವೇಳೆ ಮೊದಲಿನ ಶಿಫ್ಟ್ ಗೆ ಪರೀಕ್ಷೆ ನಡೆಸಿದ್ದವರು ವಿಶ್ರಾಂತಿಗಾಗಿ ತೆರಳಿದರೆ, ಎರಡನೇ ಶಿಫ್ಟ್ ನ ಸಿಬ್ಬಂದಿಯ ಮೇಲೆ ಕಾರ್ಯಭಾರ ಹೆಚ್ಚಾಗುತ್ತದೆ. ಒತ್ತಡದ ನಡುವೆಯೂ ಕಳೆದ ಒಂದು ತಿಂಗಳಿನಿಂದ ಇಲ್ಲಿನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

English summary
We forgot the work of lab staff when we speak about corona warriors. Here is a story about corona warriors of uttara kannada district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X