ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3 ಕಿ.ಮೀ ರಸ್ತೆಗಾಗಿ ನೂರಾರು ಕಿ.ಮೀ ದೂರದಿಂದ ಬಂದರೂ ಸಿಗದ ಸಚಿವರು!

By ಉತ್ತರ ಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ, ಸೆಪ್ಟೆಂವರ್ 10: ಜಿಲ್ಲಾ ಉಸ್ತುವಾರಿ ಸಚಿವರಿಂದ ಅಹವಾಲು ಸ್ವೀಕಾರದ ಮಾಹಿತಿ ಆಧರಿಸಿ ನೂರಾರು ಕಿ.ಮೀ ದೂರದ ಕುಗ್ರಾಮದಿಂದ ಸಚಿವರನ್ನು ಕಂಡು ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಗ್ರಾಮಸ್ಥರಿಗೆ ಸಚಿವರು ಸಿಗದೆ ಪರದಾಡಿದ ಘಟನೆ ಕಾರವಾರದಲ್ಲಿ ನಡೆದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶುಕ್ರವಾರ ಕಾರವಾರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು. ಅದರಂತೆ ಕುಮಟಾ ತಾಲ್ಲೂಕಿನ ಕುಗ್ರಾಮ ಮೇದಿನಿಯ ಜನರು ಮಾಹಿತಿ ಗಮನಿಸಿ ಒಟ್ಟಾಗಿ ಕಾರವಾರಕ್ಕೆ ತೆರಳಲು ನಿರ್ಧರಿಸಿದ್ದರು. ಬೆಳಿಗ್ಗೆ 5 ಗಂಟೆಗೆ ದಟ್ಟ ಅರಣ್ಯದಲ್ಲಿ ಕಾಲ್ನಡಿಗೆಯಲ್ಲಿ 8 ಕಿ.ಮೀ ನಡೆದು ಬಸ್ ಮೂಲಕ ಸುಮಾರು 20 ಕ್ಕೂ ಹೆಚ್ಚು ಜನರು ನೂರಾರು ಕಿ.ಮೀ ದೂರದ ಜಿಲ್ಲಾ ಕೇಂದ್ರ ಕಾರವಾರವನ್ನು ತಲುಪಿದ್ದರು.

ಸ್ವಾತಂತ್ರ ಬಂದು 7 ದಶಕ ಕಳೆದರೂ ರಸ್ತೆ ಭಾಗ್ಯ ಕಾಣದ ಕುಮಟಾದ ಈ ಗ್ರಾಮ!ಸ್ವಾತಂತ್ರ ಬಂದು 7 ದಶಕ ಕಳೆದರೂ ರಸ್ತೆ ಭಾಗ್ಯ ಕಾಣದ ಕುಮಟಾದ ಈ ಗ್ರಾಮ!

ಆದರೆ ಕಾರವಾರದಲ್ಲಿ ಸಚಿವರ ಕಾರ್ಯಕ್ರಮ ರದ್ದುಪಡಿಸಲಾಗಿತ್ತಾದರೂ ಈ ಬಗ್ಗೆ ಸರಿಯಾದ ಮಾಹಿತಿ ಸಿಗದ ಕಾರಣ ಗ್ರಾಮಸ್ಥರು ಪರದಾಡುವಂತಾಯಿತು. ಸುಮಾರು 130 ಕಿ.ಮೀ ದೂರ ಪ್ರಯಾಣ ಬೆಳಸಿದರು ಸಚಿವರನ್ನು ಕಾಣಲಾಗದೆ ಕೊನೆಗೆ ಸಚಿವ ಕಚೇರಿಗೆ ತೆರಳಿ ಸಮಸ್ಯೆ ಬಗ್ಗೆ ವಿನಂತಿಸಿದ್ದಾರೆ.

 ತುರ್ತಾಗಿ 3 ಕಿಮೀ ರಸ್ತೆಗಾಗಿ ಮನವಿ

ತುರ್ತಾಗಿ 3 ಕಿಮೀ ರಸ್ತೆಗಾಗಿ ಮನವಿ

ಕಳೆದ ಹಲವು ವರ್ಷಗಳಿಂದ ಗ್ರಾಮಕ್ಕೆ ಅಗತ್ಯವಿರುವ ರಸ್ತೆಗಾಗಿ ಮನವಿ ಮಾಡುತ್ತಿದ್ದೇವೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇಬ್ಬರು ಜಿಲ್ಲಾಧಿಕಾರಿ ಕೂಡ ಗ್ರಾಮದಲ್ಲಿ ಗ್ರಾಮ‌ವಾಸ್ತವ್ಯ ಮಾಡಿ ಸಮಸ್ಯೆ ಅರಿತಿದ್ದಾರೆ. ಆದರೆ ದೊಡ್ಡ ಮಟ್ಟದ ಅನುದಾನ ಬೇಕಾಗಿರುವುದರಿಂದ ಪ್ರಯತ್ನಿಸುವುದಾಗಿ ತಿಳಿಸುತ್ತಿದ್ದಾರೆ. ಆದರೆ ಗ್ರಾಮಕ್ಕೆ 7 ಕಿ.ಮೀ ರಸ್ತೆ ಅವಶ್ಯಕತೆ. ಆದರೆ ಅನುದಾನ ದೊಡ್ಡಮಟ್ಟದಲ್ಲಿ ಬೇಕು ಎಂದು ಪ್ರತಿ ಬಾರಿಯೂ ನಮ್ಮ‌ ಮನವಿ ತಿರಸ್ಕರಿಸಲಾಗುತ್ತಿದೆ. ಆದರೆ ನಮಗೆ 7 ಕಿ.ಮಿ ಬದಲಾಗಿ ತುರ್ತಾಗಿ ಅಗತ್ಯವಿರುವ ಕೇವಲ 3 ಕಿ.ಮೀ ರಸ್ತೆ ಅಗತ್ಯವಿದೆ ಗ್ರಾಮಸ್ಥರು ತಿಳಿಸಿದರು.

ಮುಂದಿನ 5 ದಿನಗಳವರೆಗೆ ಈ ರಾಜ್ಯಗಳಲ್ಲಿ ಅಧಿಕ ಮಳೆ: IMD ಆರೆಂಜ್ ಅಲರ್ಟ್ಮುಂದಿನ 5 ದಿನಗಳವರೆಗೆ ಈ ರಾಜ್ಯಗಳಲ್ಲಿ ಅಧಿಕ ಮಳೆ: IMD ಆರೆಂಜ್ ಅಲರ್ಟ್

 ಮಕ್ಕಳ ಓದಿಗೂ ಸಮಸ್ಯೆ

ಮಕ್ಕಳ ಓದಿಗೂ ಸಮಸ್ಯೆ

ಇನ್ನು ಗ್ರಾಮದಲ್ಲಿ ಐದನೇ ತರಗತಿವರೆಗೆ ಮಾತ್ರ ಶಾಲೆ ಇದೆ. ಮುಂದೆ ಓದಬೇಕಾದರೇ ಗ್ರಾಮದಿಂದ ನಿತ್ಯ 8 ಕಿ. ಮೀ. ದಟ್ಟ ಅರಣ್ಯದಲ್ಲಿ ನಡೆದು ಸಾಗಿ ಬಸ್ ಮೂಲಕ ತೆರಳಬೇಕಿದೆ. ಇಲ್ಲವೇ ಯಾವುದಾದರೂ ಸಂಬಂಧಿಕರ ಮನೆಯಲ್ಲೋ ಅಥವಾ ಹಾಸ್ಟೆಲ್‌ಗಳಲ್ಲೋ ಮಕ್ಕಳನ್ನು ಬಿಟ್ಟು ಓದಿಸಬೇಕಾಗಿದೆ. ಕೆಲವು ಮಕ್ಕಳಿಗೆ ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ.

 ವರ್ಷದಲ್ಲಿ 3 ತಿಂಗಳೂ ಬಾರದ ವಿದ್ಯುತ್‌

ವರ್ಷದಲ್ಲಿ 3 ತಿಂಗಳೂ ಬಾರದ ವಿದ್ಯುತ್‌

ಇದಲ್ಲದೆ ಗ್ರಾಮಕ್ಕೆ ಅಗತ್ಯವಿದ್ದ ವಿದ್ಯುತ್ ಸಂಪರ್ಕವನ್ನು ಕಳೆದ ಕೆಲ ವರ್ಷದ ಹಿಂದೆ ಒದಗಿಸಲಾಗಿದೆಯಾದರೂ ಯಾರಿಗೂ ಪ್ರಯೋಜನವಾಗದ ಸ್ಥಿತಿ ನಿರ್ಮಾಣವಾಗಿದೆ. ದಟ್ಟ ಅಡವಿಯ ಮದ್ಯದಲ್ಲಿ ಕಂಬಗಳನ್ನು ಹುಗಿದು ವಿದ್ಯುತ್ ಕೊಂಡೊಯ್ಯಲಾಗಿದೆ. ಆದರೆ ಪ್ರತಿ ಮಳೆಗಾಲದ ವೇಳೆಗೆ ವಿದ್ಯುತ್ ಕಂಬಗಳು ಧರೆಗುರುಳುತ್ತಿದ್ದು ವಿದ್ಯುತ್ ವರ್ಷದಲ್ಲಿ ಮೂರು ತಿಂಗಳು ಸಿಗದಂತಾಗಿದೆ.

 ಭರವಸೆ ನೀಡಿದ ಬಳಿಕ ವಾಪಸ್

ಭರವಸೆ ನೀಡಿದ ಬಳಿಕ ವಾಪಸ್

ಆದ ಕಾರಣ ಗ್ರಾಮಕ್ಕೆ ಅಗತ್ಯವಿರುವ ವಿದ್ಯುತ್ ಅನ್ನು ಅಂಡರ್ ಗ್ರೌಂಡ್ ಕೇಬಲ್ ಮೂಲಕ ಪೂರೈಸಬೇಕು. ಇದರಿಂದ ಸರ್ಕಾರಕ್ಕೆ ಪ್ರತಿ ವರ್ಷ ನಿರ್ವಹಣೆ ವೆಚ್ಚ ಕಡಿಮೆಯಾಗುವುದಲ್ಲದೆ ಜನರಿಗೂ ನಿತ್ಯ ವಿದ್ಯುತ್ ಪೂರೈಕೆಯಾಗಲಿದೆ ಎಂಬುದು ಸೇರಿದಂತೆ ಹಲವು ಸಮಸ್ಯೆಗ ಬಗ್ಗೆ ಒತ್ತಾಯಿಸಿ ಮನವಿ ನೀಡಲು ಆಗಮಿಸಿದ್ದರು. ಆದರೆ ಸಚಿವರು ಕಾರ್ಯಕ್ರಮ ಬದಲಾಯಿಸಿ ತೆರಳಿದ ಕಾರಣ ಗ್ರಾಮಸ್ಥರಿಗೆ ಸಿಕ್ಕಿಲ್ಲ.‌ ಬಳಿ ಅವರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿರುವ ಗ್ರಾಮಸ್ಥರು ಅಲ್ಲಿನ ಸಿಬ್ಬಂದಿ ಸಚಿವರ ಗಮನಕ್ಕೆ ತರುವ ಭರವಸೆ ನೀಡಿದ ಬಳಿಕ ವಾಪಸ್ಸ್ ಆಗಿದ್ದಾರೆ.

ಆದರೆ 130 ಕಿ.ಮೀ ದೂರದಿಂದ ಮುಂಜಾನೆ 5 ಗಂಟೆಗೆ ಎದ್ದು ಬಂದರೂ ಸಚಿವರನ್ನು ಕಾಣದೆ ವಾಪಸ್ಸು ಆಗುತ್ತಿರುವುದು ಬೇಸರ ತಂದಿದೆ.‌ ಸಚಿವರು ನಮ್ಮ‌ ಸಮಸ್ಯೆಗೆ ಸ್ಪಂದಿಸಿ ಆದಷ್ಟು ಬೇಗ ರಸ್ತೆಗೆ ಅಗತ್ಯವಿರುವ ಅನುದಾನ ನೀಡಿ ಗ್ರಾಮದ ಬಹುದೊಡ್ಡ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರಾದ ಕೃಷ್ಣಾ ಗೌಡ ಒತ್ತಾಯಿಸಿದ್ದಾರೆ.

English summary
Medini village people who came from more than 100 km to request for a 3 km road are disappointed, because they did not meet the minister kota srinivasa pujari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X