ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತತ್ಕಾಲ್ ಟಿಕೆಟ್ ಬುಕ್ ಮಾಡಿ ಹೆಚ್ಚು ಹಣ ಪೀಕುತ್ತಿದ್ದವನಿಗೆ ದಂಡ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ನವೆಂಬರ್ 4: ರೈಲ್ವೆಯ ತತ್ಕಾಲ್ ಇ- ಟಿಕೆಟ್ ‌ಗಳನ್ನು ಬುಕ್ ಮಾಡಿ, ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಪ್ರಯಾಣಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯವು ಆತನಿಗೆ ಐದು ಸಾವಿರ ದಂಡ ವಿಧಿಸಿ, ಬಳಕೆದಾರನ ಬುಕಿಂಗ್ ಐಡಿಯನ್ನು ಬ್ಲಾಕ್ ಮಾಡಲು ಐಆರ್ ಸಿಟಿಸಿಗೆ ಸೂಚಿಸಿದೆ.

ಖಾಸಗಿ ಬಸ್‌ಗಳಿಂದ ಹಗಲು ದರೋಡೆ; ಸಿಎಂ ಹೆಸರಿಗೇ ಟಿಕೆಟ್ ಬುಕ್ ಮಾಡಿದ ಯುವಕ!ಖಾಸಗಿ ಬಸ್‌ಗಳಿಂದ ಹಗಲು ದರೋಡೆ; ಸಿಎಂ ಹೆಸರಿಗೇ ಟಿಕೆಟ್ ಬುಕ್ ಮಾಡಿದ ಯುವಕ!

ನಗರದ ಫಾಸ್ಟ್ ಟ್ರಾವೆಲ್ಸ್ ಮಾಲೀಕ ಅಬ್ದುಲ್ ನಾಸಿರ್ ಇಬ್ರಾಹಿಂ ಶೇಖ್ ಎನ್ನುವವರನ್ನು ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ 33 ಟಿಕೆಟ್ ‌ಗಳು ನಾಸಿರ್ ಅಂಗಡಿಯಲ್ಲಿ ಪತ್ತೆಯಾಗಿವೆ. ಟಿಕೆಟ್ ‌ಗಳ ಜತೆಗೆ, ಕಂಪ್ಯೂಟರ್, ಪ್ರಿಂಟರ್, ಮೊಬೈಲ್, ಡಾಂಗಲ್ ಹಾಗೂ ರೂ 1,020 ನಗದು ಹಾಗೂ ಡೈರಿಗಳನ್ನು ಜಪ್ತಿ ಮಾಡಲಾಗಿದೆ.

Penalty For Man Who Selling Ticket For High Price By Booking In Tatkal

ಏನಿದು ಪ್ರಕರಣ?: 'ಕಾರವಾರದಲ್ಲಿ ರೈಲ್ವೆ ತತ್ಕಾಲ್ ಇ- ಟಿಕೆಟ್ ‌ಗಳನ್ನು ಹೆಚ್ಚಿನ ದರಕ್ಕೆ ಪ್ರಯಾಣಿಕರಿಗೆ ಮಾರಾಟ ಮಾಡಲಾಗುತ್ತಿದೆ' ಎಂದು ಆರ್‌ಪಿಎಫ್ ಪೊಲೀಸ್ ಮಹಾನಿರ್ದೇಶಕರಿಗೆ ದೂರೊಂದು ಬಂದಿತ್ತು. ಈ ಬಗ್ಗೆ ತನಿಖೆಗೆ ಅವರು ಇಲ್ಲಿನ ಆರ್‌ಪಿಎಫ್ ಕಚೇರಿಗೆ ಸೂಚಿಸಿದ್ದರು. ಇಲ್ಲಿನ ಆರ್‌ಪಿಎಫ್ ಸಿಬ್ಬಂದಿ ನಗರದ ಗ್ರೀನ್‌ ಸ್ಟ್ರೀಟ್ ನಲ್ಲಿರುವ ಫಾಸ್ಟ್ ಟ್ರಾವೆಲ್ಸ್ ಮೇಲೆ ಕೆಲವು ದಿನಗಳಿಂದ ಕಣ್ಣಿಟ್ಟಿದ್ದರು. ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಒಮ್ಮೆ ದಾಳಿ ನಡೆಸಿದ ವೇಳೆ ತತ್ಕಾಲ್ ಇ- ಟಿಕೆಟ್ ‌ಗಳನ್ನು ಬುಕ್ ಮಾಡಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅದರಂತೆ ಆರೋಪಿಯನ್ನು ಬಂಧಿಸಲಾಗಿತ್ತು.

English summary
Police have arrested a man on charges of booking railway tatkal e-tickets and selling them to passengers for a high price
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X