ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರೇಶ್ ಮೆಸ್ತಾ ಕೇಸ್‌: ಕೋರ್ಟ್‌ಗೆ 'ಬಿ' ರಿಪೋರ್ಟ್ ಸಲ್ಲಿಸಿದ ಸಿಬಿಐ

|
Google Oneindia Kannada News

ಕಾರವಾರ, ಅಕ್ಟೋಬರ್ 04: ಹೊನ್ನಾವರದ ಪರೇಶ್ ಮೇಸ್ತಾ ಅವರ ಸಾವು ಹತ್ಯೆಯಲ್ಲ, ಅದು ಆಕಸ್ಮಿಕ ಸಾವು ಎಂದು ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ಹೊನ್ನಾವರದ ನ್ಯಾಯಾಲಯಕ್ಕೆ ತನಿಖಾ ವರದಿ (ಬಿ ರಿಪೋರ್ಟ್) ಸಲ್ಲಿಕೆ ಮಾಡಿದ್ದಾರೆ.

ಪ್ರಕರಣ ಸಂಬಂಧ ಸೋಮವಾರ ವರದಿ ಪರಿಶೀಲಿಸಿ ವಿಚಾರಣೆ ನಡೆಸಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನ್ಯಾಯಪೀಠವು ಮುಂದಿನ ತಿಂಗಳ ನವೆಂಬರ್ 16ಕ್ಕೆ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿತು.

ಕಳೆದ ಐದು ವರ್ಷಗಳ ಹಿಂದೆ 2017ರಂದು ಡಿಸೆಂಬರ್ ಮೊದಲ ವಾರ ಹೊನ್ನಾವರ ಪಟ್ಟಣದಲ್ಲಿ ಕೋಮು ಗಲಭೆ ನಡೆದಿತ್ತು. ಈ ಸಂದರ್ಭದಲ್ಲಿ ಹೊನ್ನಾವರದ ಮೀನುಗಾರ 19 ವರ್ಷದ ಯುವಕ ಪರೇಶ್ ಮೇಸ್ತಾ ನಾಮಪತ್ತೆಯಾಗಿದ್ದ. ಎರಡು ದಿನ ಬಿಟ್ಟು (ಡಿಸೆಂಬರ್ 8ರಂದು) ಹೊನ್ನಾವರದಲ್ಲಿನ ಶನಿ ದೇವಾಲಯ ಸಮೀಪದ ಶಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತಾ ಯುವಕನ ದೇಹ ಶವ ಪತ್ತೆಯಾಗಿತ್ತು.

ಕಾರವಾರ; 2,220 ಕೆ.ಜಿ ಗೋಮಾಂಸ ಸಾಗಾಟ; ಐವರು ಆರೋಪಿಗಳು ಅಂದರ್ಕಾರವಾರ; 2,220 ಕೆ.ಜಿ ಗೋಮಾಂಸ ಸಾಗಾಟ; ಐವರು ಆರೋಪಿಗಳು ಅಂದರ್

ಶವವಾಗಿ ಸಿಕ್ಕ ಆ ಯುವಕನನ್ನು ಅನ್ಯ ಕೋಮಿನವರು ಕೊಲೆಗೈದು ಬಿಸಾಡಿದ್ದಾರೆ, ಇದು ಅವರದ್ದೆ ಕೃತ್ಯ ಎಂದು ಹಲವು ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಆಪಾದಿಸಿದ್ದರು. ಅಷ್ಟೇ ಅಲ್ಲದೇ ಈತನನ್ನು ಹಿಂದೂ ಸಂಘಟನೆಗಳು ಹಿಂದೂ ಕಾರ್ಯಕರ್ತ ಎಂದು ಬೆಂಬಿಸಿದ್ದೇ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು ಎಂದು ಹೇಳಲಾಗಿತ್ತು.

ಕೋಮುದ್ವೇಷ, ಅಹಿತಕರ ಘಟನೆಗಳಿಗೆ ಕುರಿತಂತೆ ಹೊನ್ನಾವರ ರಣಾಂಗಣವಾಗುತ್ತಿದ್ದಂತೆ ಎಚ್ಚೆತ್ತ ಅಂದು ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಪರೇಶ್ ಮೇಸ್ತಾ ಪ್ರಕರಣವನ್ನು ಸಿಬಿಐಗೆ ವಹಿಸಿದರು. ಅದಲ್ಲದೇ ಈ ಕುರಿತು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತ ಮತ್ತು ಮುಖಂಡರು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿದ್ದರು.

ಈವರೆಗೆ ಐವರ ಬಂಧನ

ಈವರೆಗೆ ಐವರ ಬಂಧನ

ಸಿಬಿಐಗೆ ವಹಿಸಿದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಐದು ಜನರನ್ನು ಬಂಧಿಸಿದ್ದರು. ವಿಚಾರಣೆ ನಡೆಯುತ್ತಲೇ ಈ ಮಧ್ಯೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಲಭಿಸಿಲ್ಲ ಎಂದು ಪ್ರತಿಭಟನೆ ಸಹ ಮಾಡಲಾಗಿತ್ತು. ಇದೀಗ ಸಿಬಿಐ ನಾಲ್ಕೂವರೆ ವರ್ಷದ ನಂತರ ನ್ಯಾಯಾಲಾಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಸಿದ್ದಾರೆ. ನವೆಂಬರ್ 16ಕ್ಕೆ ಬರಬಹುದು ಎನ್ನಲಾಗುತ್ತಿರುವ ನ್ಯಾಯಪೀಠದ ತೀರ್ಪು ಕುರಿತು ಸಾಕಷ್ಟು ಕೂತುಹಲ ಮನೆ ಮಾಡಿದೆ.

ಉತ್ತರಕನ್ನಡ; ವರ್ಷದಲ್ಲಿ 6 ಸಾವಿಕ್ಕೂ ಹೆಚ್ಚು ಜನರಿಗೆ ಕಚ್ಚಿದ ಬೀದಿ ನಾಯಿಗಳುಉತ್ತರಕನ್ನಡ; ವರ್ಷದಲ್ಲಿ 6 ಸಾವಿಕ್ಕೂ ಹೆಚ್ಚು ಜನರಿಗೆ ಕಚ್ಚಿದ ಬೀದಿ ನಾಯಿಗಳು

ಮೃತನಿಗೆ ನ್ಯಾಯ ದೊರಕಿಸಿಕೊಡಿ

ಮೃತನಿಗೆ ನ್ಯಾಯ ದೊರಕಿಸಿಕೊಡಿ

ಭಾರೀ ಆಗ್ರಹದ ನಂತರ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತು. ಅಲ್ಲಿಂದ ಸಾಕಷ್ಟು ಭಾರಿ ಹೊನ್ನಾವರಕ್ಕೆ ಅಧಿಕಾರಿಗಳು ಹೋಗಿ ಬಂದರು. ಮೃತ ಮನೆಯವರನ್ನು ವಿಚಾರಣೆಗೆ ಒಳಪಡಿಸಿದರು. ಅಲ್ಲದೇ ತನಿಖೆ ಕೈಗೆತ್ತಿಕೊಂಡು ಸಾಕಷ್ಟು ತಿಂಗಳುಗಳಾದ ಒಂದು ಅಂತ್ಯ ಕಾಣಿಸಲಿಲ್ಲ ಬಿಜೆಪಿ ನಾಯಕರು ಹೋರಾಟವನ್ನು ಮಾಡಿದ್ದರು. ಸದ್ಯ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು, ಮೃತ ಯುವಕನಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬುದು ಅನೇಕರ ಆಶಯವಾಗಿದೆ.

ಕೇಸ್ ವಾಪಸ್ಸಿನ ಭರವಸೆ ನೀಡಿದ್ದ ಬಿಜೆಪಿ

ಕೇಸ್ ವಾಪಸ್ಸಿನ ಭರವಸೆ ನೀಡಿದ್ದ ಬಿಜೆಪಿ

ಯುವಕ ಪರೇಶ್ ಮೆಹ್ತಾ ಸಾವಿನ ನಂತರವು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ, ಕುಮಟಾ, ಹೊನ್ನಾವರ, ದಲ್ಲಿ ಅನೇಕ ಪ್ರಕರಣಗಳು ನಡೆದಿವೆ. ಇವುಗಳಿಗೆ ಸಂಬಂಧಿಸಿದಂತೆ ನೂರಾರು ತರುಣರ ಮೇಲೆ ಪ್ರಕರಣಗಳು ದಾಖಲಾಗಿದ್ದವು. ನಾವು ಅಧಿಕಾರಕ್ಕೆ ಬಂದರೆ ಯುವಕರ ವಿರುದ್ಧ ದಾಖಲಾದ ಕೇಸುಗಳನ್ನು ವಾಪಸ್ಸು ಪಡೆಯುವುದಾಗಿ ಬಿಜೆಪಿ ಹೇಳಿಕೆ ನೀಡಿತ್ತು.

ಎನ್‌ಐಎಗೆ ಒಪ್ಪಿಸಲು ಆಗ್ರಹ

ಎನ್‌ಐಎಗೆ ಒಪ್ಪಿಸಲು ಆಗ್ರಹ

ಈ ಸಾವಿನ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ ಸಾಕಷ್ಟು ಒತ್ತಾಯ ಕೇಳಿ ಬಂದಿತ್ತು.
ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡಲಾಯಿತು. ಆದರೆ ಅಂದಿನ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಪರೇಶ್ ಮೇಸ್ತಾ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತದೆ ಎಂದು ಅಂದಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. ಅಲ್ಲದೇ ಪ್ರತಿಪಕ್ಷಗಳ ಹೋರಾಟಕ್ಕೆ ಮಣಿದು ಈ ನಿರ್ಧಾರ ಬಂದಿಲ್ಲ. ಮೃತ ಮೇಸ್ತ ಪೋಷಕರ ಒತ್ತಾಯದಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಸತತ ನಾಲ್ಕೂವರೆ ವರ್ಷದ ಬಳಿಕ ಇದೀಗ ಅಧಿಕಾರಿಗಳು ನ್ಯಾಯಾಲಯಕ್ಕೆ ಅಂತಿಮ ವರದಿ ನೀಡಿದ್ದಾರೆ.

English summary
Paresh Mesta case CBI officers submitted B report to the court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X