ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿಯಲ್ಲಿ ಎಲ್ ಕೆಜಿ ಅಡ್ಮಿಶನ್ ಫಾರ್ಮ್ ಗಾಗಿ ರಾತ್ರಿಯಿಡೀ ಕ್ಯೂ ನಿಂತ ಪಾಲಕರು

|
Google Oneindia Kannada News

ಶಿರಸಿ, ಮಾರ್ಚ್ 13:ಮಕ್ಕಳ ಮುಂದಿನ ಭವಿಷ್ಯದ ಸಲುವಾಗಿ ದಿನವಿಡೀ ಎಲ್ಲಾ ತಂದೆ-ತಾಯಂದಿರು ದುಡಿಯೋದು ಇದ್ದೇ ಇದೆ. ಅದ್ರ ಜೊತೆಗೆನೇ ಮಕ್ಕಳ ಶಾಲಾ-ಕಾಲೇಜು ವಿದ್ಯಾಭ್ಯಾಸದ ಬಗ್ಗೆಯೂ ಖಂಡಿತ ವಿಚಾರ ಮಾಡಿಯೇ ಇರ್ತಾರೆ. ಅದು ಯಾವ ಮಟ್ಟಕ್ಕೆ ಅಂತೀರಾ?

ಇಲ್ಲೊಂದು ಕಡೆ ಅಡ್ಮಿಶನ್ ಫಾರ್ಮ್ ಗೆ ಪಾಲಕರು ರಾತ್ರಿಯಿಡೀ ನಿದ್ರೆಗೆಟ್ಟು ಶಾಲಾ ಆವರಣದಲ್ಲಿ ಮಲಗಿದ್ದಾರೆ. ಹೌದು, ಒಂದ್ಕಡೆ 1 ರಿಂದ ಕ್ರಮವಾಗಿ ಹೆಸರು ಬರೆದು ನೆಲಕ್ಕೆ ಇಟ್ಟಿರೋ ಚೀಟಿಗಳು. ಇನ್ನೊಂದ್ಕಡೆ ಯಾವಾಗ ಬಾಗಿಲು ತೆರೆದು ಫಾರ್ಮ್ ನೀಡ್ತಾರೋ ಅಂತ ನಿದ್ರೆ ಬಿಟ್ಟು ಕಾಯುತ್ತಿರೋ ಪಾಲಕರು.

ವಾಯುಪಡೆ ಯೋಧ ಅಭಿನಂದನ್ ಕತೆ ಮಕ್ಕಳಿಗೆ ಪಾಠವಾಯುಪಡೆ ಯೋಧ ಅಭಿನಂದನ್ ಕತೆ ಮಕ್ಕಳಿಗೆ ಪಾಠ

ಯಾವುದಪ್ಪ ಈ ಕಾಲೇಜು ಅಂತಾ ಕನ್ಫ್ಯೂಸ್ ಆದ್ರಾ? ಖಂಡಿತ ಇದು ಕಾಲೇಜೂ ಅಲ್ಲ, ಹೈಸ್ಕೂಲೂ ಅಲ್ಲ. ಇದು ಎಲ್ಕೆಜಿ ಕಣ್ರೀ...

ನಿಮಗೆ ಆಶ್ಚರ್ಯವಾಗಬಹುದು, ಆದರೂ ಇದು ಸತ್ಯ. ಇಷ್ಟು ದಿನ ಬೆಂಗಳೂರಿನತಹ ದೊಡ್ಡ ದೊಡ್ಡ ನಗರಗಳಲ್ಲಿ ಕಾಣಿಸುತ್ತಿದ್ದ ಇಂತಹ ದೃಶ್ಯಗಳು ಈಗ ಉತ್ತರ ಕನ್ನಡ ಜಿಲ್ಲೆಯಲ್ಲೂ ಸಿಗುತ್ತಿವೆ. ಇದೀಗ ಶಿರಸಿಯ ಸೆಂಟ್ ಅಂಥೋನಿ ಸ್ಕೂಲ್ ಎಲ್ ಕೆಜಿ ಅಡ್ಮಿಶನ್ ಗೋಸ್ಕರ ಪೋಷಕರು ಹೇಗೆಲ್ಲಾ ಹರಸಾಹಸಪಟ್ಟರು ಗೊತ್ತಾ? ಇಲ್ಲಿದೆ ನೋಡಿ ವಿವರ....

 ಅಡ್ಮಿಷನ್ ಗೆ ಫುಲ್ ಡಿಮ್ಯಾಂಡು

ಅಡ್ಮಿಷನ್ ಗೆ ಫುಲ್ ಡಿಮ್ಯಾಂಡು

ಸೆಂಟ್ ಅಂಥೋನಿ ಸ್ಕೂಲ್ ಶಿರಸಿಯಲ್ಲಿ ಮೊದಲು ಪ್ರಾರಂಭವಾದ ಇಂಗ್ಲೀಷ್ ಮೀಡಿಯಮ್ ಸ್ಕೂಲ್. ಇಲ್ಲಿ ಪ್ರತೀ ವರ್ಷವೂ ಅಡ್ಮಿಷನ್ ಗೆ ಡಿಮ್ಯಾಂಡೋ ಡಿಮ್ಯಾಂಡು. ವರ್ಷದಲ್ಲೊಮ್ಮೆ ನೀಡುವ ಅಡ್ಮಿಷನ್ ಫಾರ್ಮ್ ಪಡೆಯೋಕೆ ಐದು ನೂರಕ್ಕೂ ಹೆಚ್ಚು ಪಾಲಕರು ಮನೆಬಿಟ್ಟು ರಾತ್ರಿಯಿಡೀ ಕ್ಯೂ ನಿಲ್ತಾರೆ.

 160-200 ಮಕ್ಕಳಿಗೆ ಅಡ್ಮಿಷನ್

160-200 ಮಕ್ಕಳಿಗೆ ಅಡ್ಮಿಷನ್

ಸೇಂಟ್ ಅಂಥೋನಿ ಸ್ಕೂಲ್ ನಲ್ಲಿ ಪ್ರತಿ ವರ್ಷ ಎಲ್ ಕೆಜಿಗೆ 160 ರಿಂದ 200 ಮಕ್ಕಳನ್ನು ಅಡ್ಮಿಷನ್ ಮಾಡಿಸಿಕೊಳ್ತಾರೆ. ಆ 200 ಮಕ್ಕಳಲ್ಲಿ ತಮ್ಮ ಮಕ್ಕಳೂ ಒಬ್ರಾಗ್ಬೇಕು ಅನ್ನೋ ಆಸೆ ಪಾಲಕರದ್ದು. ಬೆಳಿಗ್ಗೆ 10 ಗಂಟೆಗೆ ನೀಡುವ ಅಡ್ಮಿಷನ್ ಪಾರ್ಮ್ ಗೆ ಸಂಜೆ 4 ಗಂಟೆಯಿಂದಲೇ ಕ್ರಮಸಂಖ್ಯೆ ಬರೆದು ನೆಲಕ್ಕೆ ಚೀಟಿ ಇಟ್ಟು ರಾತ್ರಿಯಿಡೀ ಕಾದು, ಶಾಲಾ ಆವರಣದಲ್ಲೇ ಕೂತಿರೋದು ನಿಜಕ್ಕೂ ಆಶ್ಚರ್ಯ ಎನಿಸುತ್ತದೆ.

 ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ಬೆಳಕಾದ ವಿರೂಪಾಕ್ಷಸ್ವಾಮಿ ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ಬೆಳಕಾದ ವಿರೂಪಾಕ್ಷಸ್ವಾಮಿ

 ಮೊದಲು ಬಂದವರಿಗೆ ಆದ್ಯತೆ

ಮೊದಲು ಬಂದವರಿಗೆ ಆದ್ಯತೆ

ಪ್ರತಿವರ್ಷ ಯಾರು ಮೊದಲು ಹೆಸರು ನೋಂದಾಯಿಸುತ್ತಾರೋ ಆ ಮಕ್ಕಳಿಗೆ ಸೀಟು. ಅಡ್ಮಿಷನ್ ವೇಳೆ ಪ್ರಭಾವ ನಡೆದು ಗಲಾಟೆ ಆಗಬಾರ್ದು ಅನ್ನೋ ಉದ್ದೇಶಕ್ಕೆ ಪಾಲಕರೇ ಈ ರೂಲ್ಸ್ ಹಾಕಿಕೊಂಡಿದ್ದಾರೆ. ಒಂದು ರಾತ್ರಿ ನಿದ್ರೆ ಬಿಟ್ಟು ಕಷ್ಟ ಆದ್ರುನೂ ಪರವಾಗಿಲ್ಲ ಇದೇ ಸ್ಕೂಲ್ನಲ್ಲಿ ಅಡ್ಮಿಷನ್ ಸಿಗಲಿ, ಅನ್ನೋ ಮಾತು ಪಾಲಕರದ್ದು.

 ಭವಿಷ್ಯ ಉತ್ತಮವಾಗಿ ರೂಪಿಸಿಕೊಳ್ಳಲಿ

ಭವಿಷ್ಯ ಉತ್ತಮವಾಗಿ ರೂಪಿಸಿಕೊಳ್ಳಲಿ

ಅದೇನೇ ಇರಲಿ, ಮಕ್ಕಳು ಚೆನ್ನಾಗಿ ಕಲಿತು ತಮ್ಮ ಭವಿಷ್ಯ ಉತ್ತಮವಾಗಿ ರೂಪಿಸಿಕೊಳ್ಳಲಿ ಅನ್ನೋ ಆಸೆ ಎಲ್ಲ ಪಾಲಕರದ್ದು. ಆಗ ಮಾತ್ರ ತಂದೆ ತಾಯಂದಿರ ಈ ಶ್ರಮಕ್ಕೆ ನಿಜವಾದ ಫಲ ಸಿಕ್ಕಂತಾಗುತ್ತದೆ.

 ಚಾಮರಾಜನಗರದ ಹೊನ್ನೇಗೌಡನಹುಂಡಿ ಶಾಲೆಗೆ ಇಬ್ಬರೇ ವಿದ್ಯಾರ್ಥಿಗಳು..! ಚಾಮರಾಜನಗರದ ಹೊನ್ನೇಗೌಡನಹುಂಡಿ ಶಾಲೆಗೆ ಇಬ್ಬರೇ ವಿದ್ಯಾರ್ಥಿಗಳು..!

English summary
Parents were standing queue all night for LKG Admission Form in Sirsi.160 to 200 children are admitted to Sirsi St. Anthony School every year.Here's a detailed report on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X