ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ: ಬೈತಖೋಲ್‌ನಲ್ಲಿ ನೌಕಾನೆಲೆಯಿಂದ ರಸ್ತೆ, ಗೋಡೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

|
Google Oneindia Kannada News

ಕಾರವಾರ, ಅಕ್ಟೋಬರ್ 19: ನೌಕಾನೆಲೆ ವ್ಯಾಪ್ತಿಗೊಳಪಟ್ಟಿರುವ ಬೈತಖೋಲ್ ಗುಡ್ಡದ ಬಳಿ ಕಾಂಕ್ರೀಟ್ ರಸ್ತೆ ಹಾಗೂ ಗೋಡೆ ನಿರ್ಮಾಣಕ್ಕೆ ನೌಕಾನೆಲೆ ಮುಂದಾಗಿದ್ದು, ಈ ಕಾಮಗಾರಿಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬೈತಖೋಲ್ ಗುಡ್ಡ ವ್ಯಾಪ್ತಿಯ ವಾಚ್ ಟವರ್‌ಗೆ ಸಂಪರ್ಕ ಕಲ್ಪಿಸಲು ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಹಾಗೂ ಗಡಿಯುದ್ದಕ್ಕೂ ಗೋಡೆ ಕಟ್ಟಲು ನೌಕಾನೆಲೆ ಮುಂದಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳ ಹಿಂದೆ ತಡರಾತ್ರಿಯಲ್ಲಿ ಬೈತಖೋಲ್ ಬಂದರು ವ್ಯಾಪ್ತಿಯಲ್ಲಿ ಜೆಸಿಬಿಗಳನ್ನು ತಂದು ಕಾಮಗಾರಿ ನಡೆಸಲು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಜೆಸಿಬಿಗಳು ವಾಪಸ್ಸು ಕೂಡ ಕಳುಹಿಸಿದ್ದರು.

ಇದೀಗ ಸೋಮವಾರ ಸರ್ವೆಗೆ ಆಗಮಿಸಿದ್ದ ನೌಕಾನೆಲೆಯ ಲೆಫ್ಟಿನೆಂಟ್ ಕಮಾಂಡರ್ ರವಿ ಪಾಲ್ ನೇತೃತ್ವದ ತಂಡ ಸ್ಥಳೀಯರೊಂದಿಗೆ ಸಭೆ ನಡೆಸಿದ್ದು, ವಾಚ್ ಟವರ್‌ಗೆ ಸಂಪರ್ಕ ಕಲ್ಪಿಸಲು ಬೈತಖೋಲ್ ಕಡಲತೀರದಿಂದ ಗುಡ್ಡದ ಮೇಲೆ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಹಾಗೂ ಗೋಡೆ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಆದರೆ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಸ್ಥಳೀಯರಿಗೆ ತೊಂದರೆಯಾಗುವಂತಹ ಕಾಮಗಾರಿ ನಡೆಸುವುದಕ್ಕೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.

Karwar: Opposition Of The Locals To Construction Of Road And Wall From The Naval Base At Baitakhol

2009ರಲ್ಲಿ ನೌಕಾನೆಲೆಯಿಂದ ಇದೇ ಪ್ರದೇಶದಲ್ಲಿ ಗುಡ್ಡ ತೆರವು ಮಾಡಿದ ಗುಡ್ಡದ ನೀರು ಹರಿದು ಹೋಗಲು ಸಾಧ್ಯವಾಗದೇ ಮಳೆಗಾಲದಲ್ಲಿ ಗುಡ್ಡ ಕುಸಿದು 8-10 ಮನೆಗಳಿಗೆ ಹಾನಿಯಾಗಿತ್ತು. ಆದರೆ ಇದೀಗ ಮತ್ತೆ ಈ ಭಾಗದಲ್ಲಿ ಗೋಡೆ ನಿರ್ಮಾಣದ ಜೊತೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ನೌಕಾನೆಲೆ ಮುಂದಾಗಿದ್ದು, ಇದರ ನೇರ ಪರಿಣಾಮ ಮೀನುಗಾರ ಕುಟುಂಬಗಳಿಗೆ ತಟ್ಟಲಿದೆ.

ಈ ಭಾಗದಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಗಳಿದ್ದು, ಗೋಡೆ ನಿರ್ಮಾಣವಾದರೇ ನೀರು ಸರಾಗವಾಗಿ ಹರಿದು ಹೋಗಲಾಗದೇ ಗುಡ್ಡದಲ್ಲಿ ಇಂಗಿ ಎಂದಾದರೂ ಕುಸಿಯುವ ಭೀತಿ ಇದೆ ಎಂದು ಸ್ಥಳೀಯರಾದ ವಿಲ್ಸನ್ ಫರ್ನಾಂಡಿಸ್ ಆತಂಕ ವ್ಯಕ್ತಪಡಿಸಿದರು.

Karwar: Opposition Of The Locals To Construction Of Road And Wall From The Naval Base At Baitakhol

ಈಗಾಗಲೇ ನೌಕಾನೆಲೆ ಸಿಬ್ಬಂದಿಗೆ ಸಂಬಂಧವೇ ಇಲ್ಲದ ಲೇಡಿಸ್ ಬೀಚ್ ಬಳಿ ಮೀನುಗಾರಿಕೆಗೆ ತೆರಳುವ ಸ್ಥಳೀಯ ಮೀನುಗಾರರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಆದರೆ ಇದೀಗ ಗೋಡೆ ನಿರ್ಮಾಣ ಮಾಡಿಕೊಂಡು ಕಾಂಪೌಂಡ್ ಕಟ್ಟಿಕೊಂಡರೆ ಮತ್ತೆ ಸುತ್ತಮುತ್ತ ಸುಳಿಯುವುದಕ್ಕೂ ಬಿಡುವುದಿಲ್ಲ. ನೌಕಾನೆಲೆಗೆ ಈಗಾಗಲೇ ವಶಪಡಿಸಿಕೊಂಡ ನೂರಾರು ಎಕರೆ ಭೂಮಿ ಖಾಲಿ ಬಿದ್ದಿದ್ದು, ಅಂತಹ ಪ್ರದೇಶದಲ್ಲಿ ಕಾಮಗಾರಿ ನಡೆಸಲಿ. ಆದರೆ ಮೀನುಗಾರಿಕಾ ಬಂದರು ಪ್ರದೇಶದ ಬಳಿ ಕಾಮಗಾರಿ ನಡೆಸಿ ಮೀನುಗಾರರಿಗೆ ತೊಂದರೆ ನೀಡುವುದಕ್ಕೆ ಮೀನುಗಾರರ ವಿರೋಧ ಇದೆ ಸ್ಥಳೀಯ ಮೀನುಗಾರ ಮುಖಂಡ ಚೇತನ್ ಹರಿಕಂತ್ರ ಹೇಳಿದರು.

ಕೊನೆಗೆ ಸ್ಥಳೀಯರಾದ ವಿಕಾಶ್ ತಾಂಡೇಲ್, ರಾಜೇಶ ಮಾಜಾಳಿಕರ್ ಲೆಫ್ಟಿನೆಂಟ್ ಕಮಾಂಡರ್ ಬಳಿ ಸ್ಥಳೀಯರ ಸಮಸ್ಯೆ ಹಾಗೂ ವಿರೋಧದ ಬಗ್ಗೆ ತಿಳಿಸಿ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆಯುವಂತೆ ಆಗ್ರಹಿಸಿದರು. ಇದಕ್ಕೆ ಒಪ್ಪಿದ ಲೆಫ್ಟಿನೆಂಟ್ ಕಮಾಂಡರ್ ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿ ವಾಪಸ್ ತೆರಳಿದರು. ಸಭೆಯಲ್ಲಿ ಸ್ಥಳೀಯರಾದ ವಿನಾಯಕ ಹರಿಕಂತ್ರ, ತುಕಾರಾಮ್ ಹರಿಕಂತ್ರ, ಶ್ಯಾಮ್ ಕಿಂದಳಕರ್ ಇನ್ನಿತರರು ಇದ್ದರು.

Karwar: Opposition Of The Locals To Construction Of Road And Wall From The Naval Base At Baitakhol

ಮೊದಲು ಪುನರ್ ವಸತಿ ಕಲ್ಪಿಸಿ
ಸುಮಾರು 60 ವರ್ಷಗಳ ಹಿಂದೆ ಈಗಿನ ಬಂದರು ಪ್ರದೇಶದಲ್ಲಿದ್ದ ಮೀನುಗಾರರನ್ನು ಬಂದರು ಇಲಾಖೆ ಒಕ್ಕಲೆಬ್ಬಿಸಿ ಜಾಗವನ್ನು ವಶಪಡಿಸಿಕೊಂಡಿದೆ. ಆದರೆ ಅದರಲ್ಲಿ 70 ಕುಟುಂಬಗಳ ಹೊರತಾಗಿ ಯಾರಿಗೂ ಕೂಡ ಈವರೆಗೂ ಸೂಕ್ತ ಪರಿಹಾರ ಇಲ್ಲವೇ, ಪುನರ್ ವಸತಿ ಕಲ್ಪಿಸಿಲ್ಲ. ಇಂದಿಗೂ ಕೂಡ ನೆಲೆ ಕಳೆದುಕೊಂಡವರು ಬಂದರು ಪ್ರದೇಶದಲ್ಲಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಇಂತಹ ಯೋಜನೆ ಕೈಗೊಳ್ಳುವ ಮೊದಲು ನಿರಾಶ್ರಿತರಿಗೆ ಪುನರ್ ವಸತಿ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Recommended Video

ಚೀನಾ ಗಡಿಯಲ್ಲಿ ಕಟ್ಟೆಚ್ಚರ:ಭಾರತ ಸೇನೆಗೆ ಆಪದ್ಭಾಂದವನಾದ ಹೆರಾನ್ ಡ್ರೋನ್ | Oneindia Kannada

English summary
The construction of a concrete road and wall near the Baitakhol hill, has been met with fierce opposition from locals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X