• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೈಲ ಬೆಲೆ ಏರಿಕೆ: ಕರಾವಳಿಯಲ್ಲಿ ಮೀನುಗಾರಿಕೆ ಅಘೋಷಿತ ಬಂದ್

|

ಕಾರವಾರ, ಫೆಬ್ರವರಿ 18: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ. ಇದರ ಬಿಸಿ ಮೀನುಗಾರರಿಗೂ ತಟ್ಟಿದ್ದು, ಮೀನುಗಾರಿಕಾ ಬೋಟುಗಳು ಮತ್ಸ್ಯ ಶಿಕಾರಿಗೆ ತೆರಳದೇ ಬಂದರಿನಲ್ಲೇ ನಿಲ್ಲುವಂತಾಗಿದೆ.

ಯಾಂತ್ರಿಕ ಮೀನುಗಾರಿಕೆ ನಡೆಸುವ ಮೀನುಗಾರಿಕಾ ಬೋಟುಗಳಿಗೆ ಡೀಸೆಲ್ ಅತ್ಯಗತ್ಯವಾಗಿ ಬೇಕಾಗಿದ್ದು, ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಡೀಸೆಲ್ ದರ 86.07 ರೂ. ಗೆ ಏರಿಕೆಯಾಗಿದೆ. ಪ್ರತಿನಿತ್ಯ ನೂರಾರು ಲೀಟರ್ ಡೀಸೆಲ್‌ನ್ನು ಮೀನುಗಾರಿಕೆಗೆ ವ್ಯಯಿಸುವ ಮೀನುಗಾರರಿಗೆ ಇದೀಗ ಡೀಸೆಲ್ ಬೆಲೆ ಕೈಸುಡುವಂತಾಗಿದ್ದು, ಮೀನುಗಾರಿಕೆ ನಡೆಸೋದೇ ಕಷ್ಟಕರವಾಗಿ ಪರಿಣಮಿಸಿದೆ.

ಸತತ 10ನೇ ದಿನ ಕೂಡಾ ಪೆಟ್ರೋಲ್, ಡೀಸೆಲ್ ದರ ಏರಿಕೆ ಸತತ 10ನೇ ದಿನ ಕೂಡಾ ಪೆಟ್ರೋಲ್, ಡೀಸೆಲ್ ದರ ಏರಿಕೆ

ಒಂದು ಬಾರಿಗೆ ಮೀನುಗಾರಿಕೆಗೆ ತೆರಳಲು 10ರಿಂದ 30 ಸಾವಿರ ರೂಪಾಯಿಯಷ್ಟು ಡೀಸೆಲ್ ಅಗತ್ಯವಿದ್ದು, ಅಷ್ಟು ಪ್ರಮಾಣದ ಮೀನುಗಳು ಸಿಗದೇ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸಾಕಷ್ಟು ಮೀನುಗಾರರು ಬೋಟುಗಳನ್ನು ಬಂದರಿನಲ್ಲಿ ನಿಲ್ಲಿಸಿ ಮೀನುಗಾರಿಕೆಯನ್ನೇ ಸ್ಥಗಿತಗೊಳಿಸಿದ್ದಾರೆ.

ಕಾರವಾರ ನಗರದ ಬೈತಖೋಲ ಬಂದರಿನಲ್ಲಿ ಟ್ರಾಲರ್ ಹಾಗೂ ಪರ್ಸಿನ್ ಸೇರಿ ಒಟ್ಟೂ 200ಕ್ಕೂ ಅಧಿಕ ಬೋಟುಗಳಿದ್ದು, ಜಿಲ್ಲೆಯ ಕರಾವಳಿಯಲ್ಲಿ ಸಾವಿರಕ್ಕೂ ಅಧಿಕ ಮೀನುಗಾರಿಕಾ ಬೋಟುಗಳಿವೆ. ಟ್ರಾಲರ್ ಬೋಟೊಂದು ಮೀನುಗಾರಿಕೆಗೆ ತೆರಳಲು ಒಂದು ನೂರು ಲೀಟರ್ ಡೀಸೆಲ್ ಅಗತ್ಯವಿದ್ದು, ಪರ್ಸಿನ್ ಬೋಟುಗಳಿಗೆ ಐದು ನೂರು ಲೀಟರ್ ಡೀಸೆಲ್ ಅಗತ್ಯವಿದೆ.

ಹೀಗಾಗಿ ಮೀನುಗಾರಿಕೆ ನಡೆಸಲು ಡೀಸೆಲ್‌ಗೆ ಹೆಚ್ಚಿನ ಹಣವನ್ನ ವ್ಯಯಿಸಬೇಕಾಗಿದ್ದು, ಉತ್ತಮ ಮೀನುಗಾರಿಕೆ ನಡೆಯದಿದ್ದಲ್ಲಿ ಹಾಕಿದ ಹಣವೂ ನಷ್ಟವಾಗುವ ಸ್ಥಿತಿಯಿದೆ ಅನ್ನೋದು ಮೀನುಗಾರರ ಅಭಿಪ್ರಾಯ.

   ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ವಿಚಾರ-ಹೆಚ್ಡಿಕೆ,ಸಿದ್ದು ಆರೋಪಕ್ಕೆ ರೇಣುಕಾಚಾರ್ಯ ಟಾಂಗ್ | Oneindia Kannada

   ಇನ್ನು ಸರ್ಕಾರ ಮೀನುಗಾರರಿಗೆ ವಿವಿಧ ಯೋಜನೆಗಳನ್ನು ಘೋಷಿಸಿದ್ದಾಗಿ ಹೇಳುತ್ತಿದೆಯಾದರೂ ಯಾವೊಬ್ಬ ಮೀನುಗಾರರಿಗೂ ಇದರಿಂದ ಲಾಭವಾಗುತ್ತಿಲ್ಲ. ಹೀಗಾಗಿ ಡೀಸೆಲ್ ಬೆಲೆಯನ್ನೇ ಇಳಿಕೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ಮೀನುಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವು ನೀಡಬೇಕು ಎಂದು ಮೀನುಗಾರರ ಮುಖಂಡರು ಮನವಿ ಮಾಡಿದ್ದಾರೆ.

   English summary
   The price of petrol and diesel in the state is rising day by day, so that the fishing boats stay at the port without going fishing.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X