ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರದಲ್ಲಿದೆ ಅಭ್ಯರ್ಥಿ ಇಲ್ಲದ ಗ್ರಾಮ ಪಂಚಾಯತಿ!

By ದೇವರಾಜ್ ನಾಯ್ಕ್
|
Google Oneindia Kannada News

ಕಾರವಾರ, ಡಿಸೆಂಬರ್ 10: ಚುನಾವಣೆ ಎಂದರೆ ಸಾಕು, ತಾ ಮುಂದು ನಾ ಮುಂದು ಎಂದು ಜನ ಹಾತೊರೆಯುತ್ತಾರೆ. ಆದರೆ, ಕಾರವಾರ ತಾಲ್ಲೂಕಿನ ಕಿನ್ನರ ಗ್ರಾಮದಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿದ ಒಂದೇ ಒಂದು ಕುಟುಂಬವೂ ಇಲ್ಲದಿರುವುದಿಂದ ಮೀಸಲಾತಿ ಆಧಾರಲ್ಲಿ ಪ್ರತಿಬಾರಿ ಪಂಚಾಯತ್‌ನ ಒಂದು ಸ್ಥಾನ ಖಾಲಿಯಾಗಿಯೇ ಉಳಿಯುಂತಾಗಿದೆ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

ಹೀಗಾಗಿ ಕಿನ್ನರ ಗ್ರಾಮ ಪಂಚಾಯತಿಯಲ್ಲಿ ಪರಿಶಿಷ್ಟ ಪಂಗಡದ ಸ್ಥಾನಕ್ಕೆ ಕಳೆದ ಒಂದು ದಶಕದಿಂದ ಅಭ್ಯರ್ಥಿಯೇ ಇಲ್ಲವಾಗಿದ್ದಾರೆ. ಒಟ್ಟು 8 ವಾರ್ಡುಗಳನ್ನು ಕಿನ್ನರ ಗ್ರಾಮ ಪಂಚಾಯತಿ ಹೊಂದಿದ್ದು, ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಒಂದೊಂದು ಅವಧಿಗೆ ಒಂದೊಂದು ವಾರ್ಡ್ ಗೆ ನಿಗದಿಪಡಿಸಲಾಗುತ್ತದೆ.

ಈ ಗ್ರಾಮದ ರಸ್ತೆ ಸಂಚಾರವೇ ದುಸ್ತರ: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆಈ ಗ್ರಾಮದ ರಸ್ತೆ ಸಂಚಾರವೇ ದುಸ್ತರ: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ

ಯಾವೊಬ್ಬ ಅಭ್ಯರ್ಥಿಯೂ ಚುನಾವಣೆಗೆ ನಿಲ್ಲುತ್ತಿಲ್ಲ

ಯಾವೊಬ್ಬ ಅಭ್ಯರ್ಥಿಯೂ ಚುನಾವಣೆಗೆ ನಿಲ್ಲುತ್ತಿಲ್ಲ

ಕಿನ್ನರ ಗ್ರಾಮದಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿದ ಒಂದೇ ಒಂದು ಕುಟುಂಬವೂ ಇಲ್ಲದಿರುವುದಿಂದ ಮೀಸಲಾತಿ ಆಧಾರಲ್ಲಿ ಪ್ರತಿಬಾರಿ ಪಂಚಾಯತ್‌ನ ಒಂದು ಸ್ಥಾನ ಖಾಲಿಯಾಗಿಯೇ ಉಳಿಯುಂತಾಗಿದೆ. ಹೊರಗಿನಿಂದ ಬಂದು ಯಾರೇ ಸ್ಪರ್ಧಿಸಲು ಅವಕಾಶ ಇದ್ದರೂ ಸಹ ಯಾವೊಬ್ಬ ಅಭ್ಯರ್ಥಿಯೂ ಚುನಾವಣೆಗೆ ನಿಲ್ಲುತ್ತಿಲ್ಲ.

ಮೀಸಲಾತಿಯನ್ನು ಬದಲಾವಣೆ ಮಾಡಿ

ಮೀಸಲಾತಿಯನ್ನು ಬದಲಾವಣೆ ಮಾಡಿ

ಪರಿಣಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಮಂಜೂರಾಗುವ ಅನುದಾನದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಹಣ ಪ್ರತಿವರ್ಷ ಸರ್ಕಾರಕ್ಕೇ ವಾಪಸ್ಸಾಗುತ್ತಿದೆ. ಹೀಗಾಗಿ ನಿಗದಿತ ಮೀಸಲಾತಿಯನ್ನು ಸರ್ಕಾರ ಬದಲಾವಣೆ ಮಾಡಿ ಕೈಬಿಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪರಿಶಿಷ್ಟ ಪಂಗಡದ ಕುಟುಂಬ ಮಾತ್ರ ಇಲ್ಲ

ಪರಿಶಿಷ್ಟ ಪಂಗಡದ ಕುಟುಂಬ ಮಾತ್ರ ಇಲ್ಲ

ಕಿನ್ನರ ಪಂಚಾಯತಿ ವ್ಯಾಪ್ತಿಯಲ್ಲಿ 7 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, 5 ಸಾವಿರದಷ್ಟು ಮತದಾರರಿದ್ದಾರೆ. ಪಡ್ತಿ, ಕೋಮಾರಪಂತ, ಗುನಗಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪರಿಶಿಷ್ಟ ಪಂಗಡದ ಕುಟುಂಬ ಮಾತ್ರ ಇಲ್ಲ. ಈ ಹಿಂದೆ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳೂ ಸಹ ಇಲ್ಲದಿದ್ದರಿಂದ ಆ ಸ್ಥಾನವೂ ಖಾಲಿ ಉಳಿಯುತ್ತಿತ್ತು. ಆದರೆ ಕಳೆದೆರಡು ಅವಧಿಯಿಂದ ಕುಟುಂಬವೊಂದು ಗ್ರಾಮದಲ್ಲಿ ಬಂದು ನೆಲೆಸಿದ್ದರಿಂದ ಆ ಸ್ಥಾನ ಭರ್ತಿಯಾಗಿದೆ.

Recommended Video

Shimoga: ಗ್ರಾಮದಲ್ಲಿ ಪತ್ತೆಯಾಯ್ತು 8 ಅಡಿ ಉದ್ದದ ಕಾಳಿಂಗ ಸರ್ಪ! | Oneindia Kannada
ಒಂದು ಸ್ಥಾನ ಮಾತ್ರ ಖಾಯಂ ಖಾಲಿ

ಒಂದು ಸ್ಥಾನ ಮಾತ್ರ ಖಾಯಂ ಖಾಲಿ

ಉತ್ತರ ಕನ್ನಡ ಜಿಲ್ಲೆಯ ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ಮೀಸಲಾತಿ ನಿಗದಿಪಡಿಸಿದ ಜಾತಿ, ಜನಾಂಗದವರು ಇಲ್ಲದಿರುವುದು ಹೊಸದೇನಲ್ಲ. ಕೆಲವೆಡೆ ಬೇರೆ ಭಾಗದಿಂದ ಬಂದು ಸ್ಪರ್ಧಿಸುತ್ತಿದ್ದು, ಕಿನ್ನರ ಗ್ರಾಮದಲ್ಲಿ ಒಂದು ಸ್ಥಾನ ಮಾತ್ರ ಖಾಯಂ ಖಾಲಿ ಎನ್ನುವಂತಾಗಿದೆ.

English summary
For the last decade, there has been no candidate for the Scheduled Tribe Seat in the Kinnara Gram Panchayat of Karwar Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X