ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷಾಚರಣೆ: ಟ್ಯಾಗೋರ್ ತೀರದಲ್ಲಿ ಡ್ರೋನ್ ಕಣ್ಗಾವಲು

|
Google Oneindia Kannada News

ಕಾರವಾರ, ಡಿಸೆಂಬರ್ 31: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಇದರ ಭಾಗವಾಗಿ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ಪೊಲೀಸ್ ಇಲಾಖೆ ಡ್ರೋನ್ ಕಣ್ಗಾವಲು ಇರಿಸಲು ಸಜ್ಜಾಗಿದೆ.

ಕಾರವಾರ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಡಿ.31 ರಂದು ಸಂಜೆ 4 ಗಂಟೆಯಿಂದ ಜನ ಸೇರುವಂತಿಲ್ಲ. ಮುಖ್ಯವಾಗಿ ಕಾರವಾರ ನಗರದ ರವೀಂದ್ರನಾಥ ಕಡಲತೀರದಲ್ಲಿ ಯಾರೂ ಆಗಮಿಸದಂತೆ ಸೂಚಿಸಲಾಗಿದೆ.

ಹೊಸ ವರ್ಷಾಚರಣೆ: ಕರಾವಳಿಯಲ್ಲಿ ಸಂಜೆಯಿಂದ ನಿಷೇಧಾಜ್ಞೆಹೊಸ ವರ್ಷಾಚರಣೆ: ಕರಾವಳಿಯಲ್ಲಿ ಸಂಜೆಯಿಂದ ನಿಷೇಧಾಜ್ಞೆ

ಹೀಗಾಗಿ ಕಡಲತೀರಕ್ಕೆ ಆಗಮಿಸುವವರನ್ನು ಪತ್ತೆ ಹಚ್ಚಲು ಡ್ರೋನ್ ಬಳಸಲಾಗುತ್ತಿದ್ದು, ಗುರುವಾರ ಸಂಜೆ 4 ಗಂಟೆಯಿಂದ ಬೀಚ್‌ನಲ್ಲಿ ಪೊಲೀಸರು ಗಸ್ತು ತಿರುಗಲಿದ್ದಾರೆ. ಜೊತೆಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ.

New Year Event: Drone Surveillance On The Tagore Beach In Karwar

ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ನಡೆಸುವವರು ಮೀನುಗಾರಿಕೆಗೆ ಹೊರತುಪಡಿಸಿ ಬೇರೆ ಯಾರೂ ಹೊಸ ವರ್ಷಾಚರಣೆಗೆ ಅಥವಾ ಇನ್ಯಾವುದೇ ಕಾರಣದ ಮೋಜು- ಮಸ್ತಿಗೆ ಕಡಲತೀರದತ್ತ ಬರಕೂಡದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

New Year Event: Drone Surveillance On The Tagore Beach In Karwar

ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.

Recommended Video

ಮಕ್ಕಳನ್ನು ಶಾಲೆಗೆ ಕಳುಹಿಸೋದು ಎಷ್ಟರ ಮಟ್ಟಿಗೆ ಸುರಕ್ಷಿತ | Oneindia Kannada

English summary
The police department has set up drone surveillance on the beach of Rabindranath Tagore as part of a ban on the Uttara Kannada district coastline during the New Year .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X