ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರವನ್ನು ಅತಿದೊಡ್ಡ ನೌಕಾನೆಲೆಯನ್ನಾಗಿಸುವುದೇ ನನ್ನ ಹೆಬ್ಬಯಕೆ: ರಾಜನಾಥ್ ಸಿಂಗ್

|
Google Oneindia Kannada News

ಕಾರವಾರ, ಜೂನ್ 24: "ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸನ್ನದ್ಧತೆಯನ್ನು ಬಲಪಡಿಸುವ ಕಾರವಾರ ಏಷ್ಯಾದ ಅತಿದೊಡ್ಡ ನೌಕಾ ನೆಲೆಯಾಗಬೇಕೆಂಬುದು ನನ್ನ ಹೆಬ್ಬಯಕೆ. ಅದಕ್ಕಾಗಿ ಬಜೆಟ್‌ಅನ್ನು ಕೂಡ ಹೆಚ್ಚಿಸಲು ಪ್ರಯತ್ನಿಸುತ್ತೇನೆ," ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಪ್ರಗತಿಯಲ್ಲಿರುವ ಸೀಬರ್ಡ್ ಎರಡನೇ ಹಂತದ ಯೋಜನೆಯ ಮೂಲಸೌಕರ್ಯ ಅಭಿವೃದ್ಧಿಯ ಪ್ರಗತಿ ಹಾಗೂ ವಿಸ್ತರಣೆ ಹಂತದಲ್ಲಿರುವ ನೌಕಾನೆಲೆಯನ್ನು ಪರಿಶೀಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಡಲ ಮತ್ತು ರಾಷ್ಟ್ರೀಯ ಭದ್ರತೆಗೆ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿರುವ ಸಶಸ್ತ್ರ ಪಡೆಗಳಿಗೆ ಭಾರತೀಯ ನೌಕಾಪಡೆಯು ತೋಳ್ಬಲದಂತಿದೆ. ತನ್ನ ಕಾರ್ಯತಂತ್ರದ ಮೂಲಕ ರಾಜತಾಂತ್ರಿಕ ಮತ್ತು ವಾಣಿಜ್ಯ ಮಟ್ಟಗಳಲ್ಲಿ ಭಾರತದ ಸ್ಥಾನವನ್ನು ಇದು ಬಲಪಡಿಸಿದೆ,'' ಎಂದರು.

 ನೆರೆಹೊರೆಯ ದೇಶಗಳೊಂದಿಗೆ ಬಾಂಧವ್ಯ ಹೆಚ್ಚುತ್ತಿದೆ

ನೆರೆಹೊರೆಯ ದೇಶಗಳೊಂದಿಗೆ ಬಾಂಧವ್ಯ ಹೆಚ್ಚುತ್ತಿದೆ

"7,500 ಕಿ.ಮೀ ಗಿಂತಲೂ ಹೆಚ್ಚು ಕರಾವಳಿಯ ಮೂಲಕ ಸುಮಾರು 1,300 ದ್ವೀಪಗಳು ಮತ್ತು 2.5 ದಶಲಕ್ಷ ಚದರ ಕಿ.ಮೀ.ನ ವಿಶೇಷ ಆರ್ಥಿಕ ವಲಯದ ಮೂಲಕ ದೇಶವನ್ನು ರಕ್ಷಿಸುವ ನೌಕಾಪಡೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ರೂಪಿಸಿರುವ ‘ಸಾಗರ್' (SAGAR/ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ)ನತ್ತ ಗಮನಹರಿಸಿ, ನೌಕಾಪಡೆಯು ತನ್ನ ಕಡಲ ನೆರೆಹೊರೆಯವರೊಂದಿಗೆ ಭಾರತದ ಸಂಬಂಧವನ್ನು ನಿರಂತರವಾಗಿ ಬಲಪಡಿಸುತ್ತಿದೆ,'' ಎಂದು ಹೇಳಿದರು.

ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಘೋಷಿಸಿನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಘೋಷಿಸಿ

 ಕೋವಿಡ್‌ನಲ್ಲಿ ದಣಿವರಿಯದೆ ದುಡಿದಿದೆ

ಕೋವಿಡ್‌ನಲ್ಲಿ ದಣಿವರಿಯದೆ ದುಡಿದಿದೆ

"ದೇಶಕ್ಕೆ ಮಾತ್ರವಲ್ಲ, ಜಗತ್ತಿಗೆ ವಿಶೇಷವಾಗಿ ಕೋವಿಡ್- 19 ಸಾಂಕ್ರಾಮಿಕ ಸಮಯದಲ್ಲಿ ಮಾನವೀಯ ನೆರವು ನೀಡುವ ಭಾರತೀಯ ನೌಕಾಪಡೆಯ ಪ್ರಯತ್ನಗಳನ್ನು ರಾಜನಾಥ್ ಸಿಂಗ್ ಶ್ಲಾಘಿಸಿದರು. ಕೋವಿಡ್ ಪೀಡಿತ ದೇಶಗಳಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳನ್ನು ರಕ್ಷಿಸುವುದರಿಂದ ಹಿಡಿದು, ವಿದೇಶದಿಂದ ಆಮ್ಲಜನಕ ಸಿಲಿಂಡರ್‌ಗಳು ಸೇರಿದಂತೆ ನಿರ್ಣಾಯಕ ವೈದ್ಯಕೀಯ ಸಾಧನಗಳನ್ನು ಸಾಗಿಸುವವರೆಗೆ ಭಾರತೀಯ ನೌಕಾಪಡೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ದಣಿವರಿಯದೆ ಕೆಲಸ ಮಾಡಿದೆ. ಅಲ್ಲದೇ ವಿವಿಧ ದೇಶಗಳಿಗೂ ತನ್ನ ನೆರವನ್ನು ಚಾಚಿದೆ,'' ಎಂದು ಹೇಳಿದರು.

 ಕಾರವಾರ ನೌಕಾನೆಲೆಯ ಕುರಿತು ವಿಶ್ವಾಸ ಹೆಚ್ಚಿದೆ

ಕಾರವಾರ ನೌಕಾನೆಲೆಯ ಕುರಿತು ವಿಶ್ವಾಸ ಹೆಚ್ಚಿದೆ

"ನಾನು ಸೀಬರ್ಡ್ ಯೋಜನೆಯನ್ನು ವೀಕ್ಷಿಸಲು ಮತ್ತು ಅದನ್ನು ಅರ್ಥೈಸಿಕೊಳ್ಳಲು ಯಾವಾಗಲೂ ಕುತೂಹಲ ಹೊಂದಿದ್ದೆ. ಒಮ್ಮೆ ನಾನು ಈ ಹಿಂದೆ ಇಲ್ಲಿನ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಒಂದು ರಾತ್ರಿ ತಂಗಿದ್ದೆ. ನಾನು ಮತ್ತು ಅಡ್ಮಿರಲ್ ಕರಂಬೀರ್ ಸಿಂಗ್ ಹೆಲಿಕಾಪ್ಟರ್‌ನಲ್ಲಿ ಹಿಂದಿರುಗುತ್ತಿದ್ದಾಗ ಅವರು ನನಗೆ ಆಕಾಶದಿಂದ ಯೋಜನೆಯ ಬಗ್ಗೆ ತೋರಿಸಿದ್ದರು. "ಇದು ಕಾರವಾರ' ಎಂದು ಆ ದಿನ ನಾನು ಕಾರವಾರವನ್ನು ಆಕಾಶದಿಂದ ನೋಡಿದ್ದೆ. ಆದರೆ ಇಂದು ಅದನ್ನು ಹತ್ತಿರದಿಂದ ನೋಡಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿ, ಈ ನೌಕಾನೆಲೆಯ ಬಗ್ಗೆ ನನ್ನ ವಿಶ್ವಾಸ ಹೆಚ್ಚಾಗಿದೆ,'' ಎಂದು ನಾನು ಹೇಳಬಲ್ಲೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಕಾರವಾರ: ಕದಂಬ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಕಾರವಾರ: ಕದಂಬ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ಈ ಯೋಜನೆ ಪೂರ್ಣಗೊಂಡ ನಂತರ ನಾವು ಭದ್ರತೆಗೆ ಸಂಬಂಧಿಸಿದಂತೆ ಯಾವೆಲ್ಲ ಸಿದ್ಧತೆಗಳನ್ನು ಮಾಡುತ್ತಿದ್ದೇವೆಯೋ, ಅದು ಬಲಗೊಳ್ಳುವುದಷ್ಟೇ ಅಲ್ಲದೇ, ವ್ಯಾಪಾರ, ಆರ್ಥಿಕತೆ ಮತ್ತು ನಾವು ಒದಗಿಸುವ ಮಾನವೀಯ ನೆರವಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

 ಏನಿದು ಪ್ರಾಜೆಕ್ಟ್ ಸೀಬರ್ಡ್?

ಏನಿದು ಪ್ರಾಜೆಕ್ಟ್ ಸೀಬರ್ಡ್?

ಪ್ರಾಜೆಕ್ಟ್ ಸೀಬರ್ಡ್ ಎಂಬ ಹೆಸರಿನ ಮೊದಲ ಹಂತದ ಯೋಜನೆಯು 2005ರಲ್ಲಿ ಪೂರ್ಣಗೊಂಡಿತು. ಆಗಸ್ಟ್ 1, 2002ರಂದು ಪ್ರಾಜೆಕ್ಟ್ ಸೀಬರ್ಡ್‌ನ ಮೊದಲ ಹಂತದ ಕಾರ್ಯಗತಗೊಳಿಸಲು ಭಾರತ ಸರ್ಕಾರವು 1995ರಲ್ಲಿ 1294.41 ಕೋಟಿ ರೂ.ಗೆ ಅನುಮೋದನೆ ನೀಡಿತ್ತು. ಈ ಯೋಜನೆಯು 10 ಹಡಗುಗಳು ಮತ್ತು 10 ಗಜದ ಕರಕುಶಲ ವಸ್ತುಗಳನ್ನು ಮರುಹೊಂದಿಸಲು ಮತ್ತು ನಿರ್ವಹಿಸಲು ಅನುವು ಮಾಡಿಕೊಟ್ಟಿದೆ. ಎರಡನೇ ಹಂತದ ಅಭಿವೃದ್ಧಿ 2011ರಲ್ಲಿ ಪ್ರಾರಂಭವಾಯಿತು. ಐಎನ್ಎಸ್ ಕದಂಬ ಪ್ರಸ್ತುತ ಭಾರತದ ಮೂರನೇ ಅತಿದೊಡ್ಡ ನೌಕಾನೆಲೆಯಾಗಿದೆ ಮತ್ತು ಇದರ ವಿಸ್ತರಣೆ ಹಂತ II ಪೂರ್ಣಗೊಂಡ ನಂತರ ಪೂರ್ವ ಗೋಳಾರ್ಧದಲ್ಲೇ ಅತಿದೊಡ್ಡ ನೌಕಾನೆಲೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Recommended Video

ಕಾರವಾರಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ | Oneindia Kannada

English summary
Defence Minister Rajnath Singh has said that more funds will be allocated in the budget for the development of the Seabird Shipyard at Karwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X