ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಇಂದಿನಿಂದ ಈದ್‌ ಉಲ್ ಫಿತರ್ ಆಚರಣೆ

ಕರಾವಳಿಯಲ್ಲಿ ಇಂದಿನಿಂದ ಈದ್‌ ಉಲ್ ಫಿತರ್ ಆಚರಣೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್.15 ಗುರುವಾರ ರಾತ್ರಿ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಕರಾವಳಿಯಲ್ಲಿ ಮುಸಲ್ಮಾನ ಸಮುದಾಯದವರು ಶುಕ್ರವಾರ ಈದ್‌ ಉಲ್ ಫಿತರ್ ಹಬ್ಬವನ್ನು ಆಚರಿಸಲಿದ್ದಾರೆ.

ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕೇರಳ ಒಳಗೊಂಡಂತೆ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ ಹಾಗೂ ಭಟ್ಕಳ ತಾಲೂಕಿನಲ್ಲಿ ಹಬ್ಬವನ್ನು ಶುಕ್ರವಾರ ಆಚರಿಸಲಾಗುತ್ತಿದೆ. ಈ ಕುರಿತು ಆಯಾ ಮಸೀದಿಗಳ ಖಾಜಿಗಳು ಪ್ರಕಟಣೆ ನೀಡಿದ್ದು, ಮುಸ್ಲಿಂ ಸಮುದಾಯದವರಲ್ಲಿ ಸಂಭ್ರಮ ಮನೆ ಮಾಡಿದೆ.

ಈದ್ 2018: ಕೇರಳದಲ್ಲಿ ಶುಕ್ರವಾರ, ಇತರೆಡೆ ಶನಿವಾರ ಆಚರಣೆಈದ್ 2018: ಕೇರಳದಲ್ಲಿ ಶುಕ್ರವಾರ, ಇತರೆಡೆ ಶನಿವಾರ ಆಚರಣೆ

ಶುಕ್ರವಾರ ವಿವಿಧೆಡೆ ಮಸೀದಿಗಳಿಗೆ ತೆರಳಿ ಮುಸ್ಲಿಂ ಸಮುದಾಯ ವಿಶಿಷ್ಟ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಭಟ್ಕಳದಲ್ಲಿ ಪ್ರತಿವರ್ಷ ಈದ್ಗಾ ಮೈದಾನದಲ್ಲಿ ಮಾಡಲಾಗುತ್ತಿದ್ದ ಪ್ರಾರ್ಥನೆಯನ್ನು ರದ್ದುಗೊಳಿಸಲಾಗಿದೆ.

Muslim community will celebrate Eid ul Fitr festival on Friday

ಮಳೆ ಇರುವುದರಿಂದ ಆಯಾ ಮಸೀದಿಗಳಲ್ಲಿ ಪ್ರಾರ್ಥನೆ ನಡೆಸುವಂತೆ ಭಟ್ಕಳದ ಖಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಟ್ಕಳದಲ್ಲಿ ಕಳೆದ ಇಪ್ಪತ್ತು ದಿನಗಳಿಂದ ರಂಗೇರಿದ್ದ ರಂಜಾನ್ ಪೇಟೆಗೆ ಇಂದು ತೆರೆ ಬಿದ್ದಿದೆ. ಹಣ್ಣು ಹಂಪಲು, ಖರ್ಜೂರ ಸೇರಿದಂತೆ ಬಟ್ಟೆ ಖರೀದಿಯು ನಗರದಲ್ಲಿ ಇಂದು ಹೆಚ್ಚಾಗಿ ಕಂಡುಬಂತು.

ಪುರುಷರು ಟೋಪಿಗಳ ಖರೀದಿಯಲ್ಲಿ ನಿರತರಾಗಿದ್ದರೆ ಮಹಿಳೆಯರು ಮೆಹಂದಿ, ಬಳೆ ಮತ್ತು ಸುಗಂಧ ದ್ರವ್ಯಗಳ ಖರೀದಿಯಲ್ಲಿ ನಿರತರಾಗಿದ್ದರು.

English summary
Muslim community will celebrate Eid ul Fitr festival on Friday. Festival is celebrated at Dakshina Kannada, Udupi, Kundapur and Bhatkal taluk. Muslim community will submit a special prayer to the mosques on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X