ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈದ್: ಭಟ್ಕಳದ ಪ್ರಮುಖ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್.15 : ಭಟ್ಕಳ ಪಟ್ಟಣದಲ್ಲಿ ಶುಕ್ರವಾರ ಈದ್ ಉಲ್ ಫಿತರ್ ಅನ್ನು ಮುಸ್ಲಿಂ ಸಮುದಾಯ ಸಂಭ್ರಮದಿಂದ ಆಚರಿಸಿತು.

ಒಂದು ತಿಂಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿ, ಹಬ್ಬದ ಸಂಭ್ರಮದಲ್ಲಿದ್ದ ಭಟ್ಕಳ ಮುಸ್ಲಿಂ ಸಮುದಾಯ ಮಳೆ ಇದ್ದುದ್ದರಿಂದ ಇಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿಲ್ಲ.

ಎಲ್ಲೆಡೆ ಈದ್ ಸಡಗರ: ದಾನದ ಹಬ್ಬದ ಮಹತ್ವವೇನು ಗೊತ್ತೆ? ಎಲ್ಲೆಡೆ ಈದ್ ಸಡಗರ: ದಾನದ ಹಬ್ಬದ ಮಹತ್ವವೇನು ಗೊತ್ತೆ?

ಬದಲಾಗಿ ಬೆಳಗ್ಗೆ 7.45ಕ್ಕೆ ಮುಸ್ಲಿಮರು ನಗರದ ಪ್ರಮುಖ ಮಸೀದಿಗಳಾದ ಜಾಮೀಯಾ ಮಸ್ಜೀದ್, ಖಲೀಫಾ ಮಸ್ಜೀದ್, ಮಗ್ದುಂ ಕಾಲೋನಿ ಮಸ್ಜೀದ್ ಹಾಗೂ ನೂರ್ ಮಸ್ಜೀದ್ ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

Muslim community celebrated Eid ul Fitr on Friday in Bhatkal town.

ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರಾದ ಮೌಲಾನಾಗಳು ರಂಜಾನ ಉಪವಾಸ ಹಾಗೂ ಈದ್-ಉಲ್-ಫಿತರ್ ಹಬ್ಬದ ಮಹತ್ವದ ಬಗ್ಗೆ ಪ್ರವಚನ ನೀಡಿದರು. ಪ್ರಾರ್ಥನೆ ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.

ಗುರುವಾರ ರಾತ್ರಿ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಕರಾವಳಿಯಲ್ಲಿ ಮುಸಲ್ಮಾನ ಸಮುದಾಯದವರು ಶುಕ್ರವಾರ ಈದ್‌ ಉಲ್ ಫಿತರ್ ಹಬ್ಬವನ್ನು ಆಚರಿಸಲಿದ್ದಾರೆ.

ಕೇರಳ ಒಳಗೊಂಡಂತೆ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ ಹಾಗೂ ಭಟ್ಕಳ ತಾಲೂಕಿನಲ್ಲಿ ಹಬ್ಬವನ್ನು ಆಚರಿಸಲಾಗುತ್ತಿದೆ.

English summary
Muslim community celebrated Eid ul Fitr on Friday in Bhatkal town. Praying at major mosques in the city. After praying, they interacted with each other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X