ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮುದ್ರದಿಂದ ಬರ್ಖಾ ರಕ್ಷಿಸಿದ ಕರಾವಳಿ ಕಾವಲು ಪೊಲೀಸರು

|
Google Oneindia Kannada News

ಕಾರವಾರ, ಏಪ್ರಿಲ್ 22: ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗುತ್ತಿದೆ ಎಂಬ ಮಾಹಿತಿ ಆಧಾರದಲ್ಲಿ ಸಮುದ್ರದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಕರಾವಳಿ ಕಾವಲು ಪೊಲೀಸರು ಬರ್ಖಾವೊಂದನ್ನು (Mouse Deer) ರಕ್ಷಣೆ ಮಾಡಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಗೋವಾದಿಂದ ಸಮುದ್ರ ಮಾರ್ಗದ ಮೂಲಕ ಅಕ್ರಮ ಮದ್ಯ ಸಾಗಾಟವಾಗುವ ಹಿನ್ನೆಲೆಯಲ್ಲಿ ಬೇಲೇಕೇರಿ ಕರಾವಳಿ ಕಾವಲು ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಧರ್ ಎಸ್.ಆರ್. ನೇತೃತ್ವದ ತಂಡ ಗಸ್ತು ತಿರುಗಾಟ ನಡೆಸುತ್ತಿತ್ತು. ಆದರೆ, ಇದೇ ವೇಳೆ ಅಂಕೋಲ ತಾಲೂಕಿನ ಹಾರವಾಡದ ಕೋಡಾರ ಗುಡ್ಡದ ಬಳಿಯ ಸಮುದ್ರದಲ್ಲಿ ಏನೋ ಹೊಳೆಯುತ್ತಿದ್ದಂತೆ ಗಮನಕ್ಕೆ ಬಂದು ತಕ್ಷಣ ಸ್ಥಳಕ್ಕೆ ತೆರಳಿದಾಗ ಪೊಲೀಸರಿಗೆ ಬರ್ಖಾ ಕಣ್ಣಿಗೆ ಬಿದ್ದಿದೆ.

ಉಡುಪಿಯಲ್ಲಿ ಬೃಹತ್ ಗಾತ್ರದ ತಿಮಿಂಗಲ ಪ್ರತ್ಯಕ್ಷಉಡುಪಿಯಲ್ಲಿ ಬೃಹತ್ ಗಾತ್ರದ ತಿಮಿಂಗಲ ಪ್ರತ್ಯಕ್ಷ

Mouse Deer Rescued From Sea In Ankola

ಸಮುದ್ರದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸುಮಾರು ಎರಡು ವರ್ಷದ ಈ ಬರ್ಖಾವನ್ನು ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿ, ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ಹಸ್ತಾಂತರಿಸಿದ್ದಾರೆ. ಯಾವುದೋ ಪ್ರಾಣಿ ದಾಳಿಯಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರಿರಬಹುದು ಎಂದು ಶಂಕಿಸಲಾಗಿದೆ.

English summary
Mouse deer rescued from sea near harawada kodara gudda in ankola of karwar district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X