ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್ ಬಳಿಕ ಉತ್ತರ ಕನ್ನಡದಲ್ಲಿ 10ಕ್ಕೂ ಹೆಚ್ಚು ಪ್ರವಾಸಿಗರ ಸಾವು!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜನವರಿ 22; ಕೋವಿಡ್ ಹರಡದಂತೆ ಘೋಷಣೆ ಮಾಡಲಾಗಿದ್ದ ಲಾಕ್ ಡೌನ್ ತೆರವುಗೊಳಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ಉತ್ತರ ಕನ್ನಡ ಜಿಲ್ಲೆಯ ಕಡಲತೀರಗಳಲ್ಲಿ ಇದೀಗ ಸಾವಿನ ಸಂಖ್ಯೆ ಅಧಿಕವಾಗುತ್ತಿದೆ.

ಕೊರೋನಾ ಹಿನ್ನಲೆಯಲ್ಲಿ ಸ್ತಬ್ಧವಾಗಿದ್ದ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳು ಲಾಕ್‌ಡೌನ್ ತೆರವಿನ ನಂತರ ಪುನಃ ಆರಂಭವಾಗಿದೆ. ಲಾಕ್ ಡೌನ್ ತೆರವುಗೊಂಡ ಬಳಿಕ ಇಲ್ಲಿಯವರೆಗೆ ಹತ್ತಕ್ಕೂ ಅಧಿಕ ಪ್ರವಾಸಿಗರು ಕಡಲತೀರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

ಗೋಕರ್ಣ; ಕಡಲ ತೀರದಲ್ಲಿ ಬೆಂಗಳೂರಿನ ಮೂವರು ಸಾವು ಗೋಕರ್ಣ; ಕಡಲ ತೀರದಲ್ಲಿ ಬೆಂಗಳೂರಿನ ಮೂವರು ಸಾವು

ಜಿಲ್ಲೆಯ ಮುರಡೇಶ್ವರ ಹಾಗೂ ಗೋಕರ್ಣದ ಮುಖ್ಯ ಕಡಲತೀರ, ಕುಡ್ಲೆ ಕಡಲತೀರದಲ್ಲಿ ಪ್ರವಾಸಿಗರು ಈಜಲು ತೆರಳಿ ಸಾವನ್ನಪ್ಪುತ್ತಿರುವ ಪ್ರಕರಣ ಮರುಕಳಿಸುತ್ತಲೇ ಇದೆ. ಹೊರ ಊರುಗಳಿಂದ ಬರುವ ಪ್ರವಾಸಿಗರು ಕಡಲತೀರದಲ್ಲಿ ಆಳದ ಅರಿವಿಲ್ಲದೇ ಈಜಲು ತೆರಳಿ ಅಲೆಗಳ ಅಬ್ಬರಕ್ಕೆ ಸಿಲುಕಿ ತಮ್ಮ ಪ್ರಾಣವನ್ನು ಬಿಡುತ್ತಿದ್ದಾರೆ.

 ಗೋಕರ್ಣ ಈಗ ಟೆಕ್ಕಿಗಳ ಹೊಸ ಲಾಗ್ ಇನ್ ತಾಣ! ಗೋಕರ್ಣ ಈಗ ಟೆಕ್ಕಿಗಳ ಹೊಸ ಲಾಗ್ ಇನ್ ತಾಣ!

ಪ್ರವಾಸಿಗರು ಕಡಲ ತೀರದಲ್ಲಿ ಮುಳುಗಿ ಸಾವನ್ನಪ್ಪುವುದನ್ನು ತಡೆಯಲು ಲೈಫ್ ಗಾರ್ಡ್‌ಗಳನ್ನು ನೇಮಕ ಮಾಡಲಾಗಿತ್ತು. ಲಾಕ್ ಡೌನ್ ಅವಧಿಯಲ್ಲಿ ಅವರಿಗೆ ಅರ್ಧ ವೇತನ ನೀಡಲಾಗಿತ್ತು. ಲಾಕ್‌ಡೌನ್ ತೆರವಾದ ನಂತರ ಹಲವೆಡೆ ಲೈಫ್ ಗಾರ್ಡ್‌ಗಳು ತಮ್ಮ ಕೆಲಸವನ್ನು ಬಿಟಿದ್ದಾರೆ.

ಗೋಕರ್ಣ ಕಡಲತೀರದಲ್ಲಿ ಈಜಲು ತೆರಳಿದ್ದ ಯುವಕ ಸಾವು: ನಾಲ್ವರ ರಕ್ಷಣೆಗೋಕರ್ಣ ಕಡಲತೀರದಲ್ಲಿ ಈಜಲು ತೆರಳಿದ್ದ ಯುವಕ ಸಾವು: ನಾಲ್ವರ ರಕ್ಷಣೆ

ಲೈಫ್‌ ಗಾರ್ಡ್‌ಗಳ ನೇಮಕ

ಲೈಫ್‌ ಗಾರ್ಡ್‌ಗಳ ನೇಮಕ

ಕಾರವಾರ, ಅಂಕೋಲಾ, ಕುಮಟಾ, ಗೋಕರ್ಣ, ಹೊನ್ನಾವರ ಹಾಗೂ ಮುರಡೇಶ್ವರದ ಕಡಲ ತೀರದಲ್ಲಿ ಜೊತೆಗೆ ಕೆಲ ಜಲಪಾತಗಳು ಸೇರಿ ಒಟ್ಟು 24 ಲೈಫ್ ಗಾರ್ಡ್‌ಗಳನ್ನು ನೇಮಿಸಿಕೊಳ್ಳಲಾಗಿತ್ತು. ಕಡಲ ತೀರದಲ್ಲಿ ಟೂರಿಸ್ಟ್ ಮಿತ್ರಗಳನ್ನು ನೇಮಿಸಿ ಪ್ರವಾಸಿಗರು ಆಳ ಸಮುದ್ರಕ್ಕೆ ಈಜಲು ತೆರಳದಂತೆ ಜಾಗೃತ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿತ್ತು. ಇನ್ನು ಮುಳುಗುತ್ತಿದ್ದ ಹಲವು ಪ್ರವಾಸಿಗರನ್ನು ಲೈಫ್ ಗಾರ್ಡ್‌ಗಳು ರಕ್ಷಣೆ ಮಾಡುತ್ತಿದ್ದರಿಂದ ಪ್ರವಾಸಿಗರ ಸಾವಿನ ಸಂಖ್ಯೆ ಸಹ ಕಡಿಮೆಯಾಗಿತ್ತು.

ಪ್ರವಾಸಿಗರ ಸಾವು

ಪ್ರವಾಸಿಗರ ಸಾವು

ಸದ್ಯ, ಲಾಕ್‌ಡೌನ್ ನಂತರ ಪ್ರವಾಸಿಗರು ಕಡಲ ತೀರಗಳತ್ತ ಹೆಚ್ಚಿನ ಸಂಖ್ಯೆಯೇ ಆಗಮಿಸುತ್ತಿದ್ದು, ಸಮುದ್ರಕ್ಕೆ ಈಜಲು ಇಳಿಯುವ ಪ್ರವಾಸಿಗರು ನೀರಿನ ಆಳದ ಅರಿವಿಲ್ಲದೇ ಮುಳುಗಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಹಲವರು ಈಜಲು ತೆರಳಿ ಪ್ರಾಣ ಬಿಟ್ಟಿದ್ದಾರೆ. ಕಡಲ ತೀರಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದು ಪ್ರವಾಸಿಗರಿಗೆ ಎಷ್ಟು ಸುರಕ್ಷಿತ? ಎನ್ನುವ ಪ್ರಶ್ನೆ ಇದೀಗ ಎದುರಾಗುತ್ತಿದೆ.

ಜಲಸಾಹಸ ಕ್ರೀಡೆ

ಜಲಸಾಹಸ ಕ್ರೀಡೆ

ಲಾಕ್‌ಡೌನ್ ವೇಳೆ ಕಡಲತೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಇರದೇ ಇರುವ ಹಿನ್ನಲೆಯಲ್ಲಿ ಲೈಫ್ ಗಾರ್ಡ್‌ಗಳಿಗೆ ಅರ್ಧ ವೇತನ ನೀಡಲಾಗಿತ್ತು. ಲಾಕ್‌ಡೌನ್ ತೆರವಾದ ನಂತರ ಹಲವೆಡೆ ಅವರು ತಮ್ಮ ಕೆಲಸವನ್ನು ಬಿಟ್ಟಿದ್ದಾರೆ. ಇನ್ನು ಜಿಲ್ಲಾಡಳಿತ ಗೋಕರ್ಣ ಹಾಗೂ ಮುರಡೇಶ್ವರದಲ್ಲಿ ಜಲಸಾಹಸ ಕ್ರೀಡೆ ಟೆಂಡರ್ ಪಡೆದವರೇ ಲೈಫ್ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವಂತೆ ಸೂಚನೆ ನೀಡಿದ್ದು, ಇದರನ್ವಯ ಕಡಲತೀರದಲ್ಲಿ ಕೆಲ ಲೈಫ್ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದರು. ಆದರೂ ಸಹ ಪ್ರವಾಸಿಗರು ಸಾವನ್ನಪ್ಪುತ್ತಿದ್ದು ಜಿಲ್ಲಾಡಳಿತ ಪ್ರವಾಸಿಗರ ರಕ್ಷಣೆ ಹಿನ್ನಲೆಯಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು.

Recommended Video

ಹುಣಸೋಡು ಕ್ರಷರ್ ನಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ-ಮೃತ ಕಾರ್ಮಿಕರ ಕುಟುಂಬಕ್ಕೆ ಐದು ಲಕ್ಷ ಪರಿಹಾರ | Oneindia Kannada
ಅಧಿಕಾರಿಗಳು ಹೇಳುವುದೇನು?

ಅಧಿಕಾರಿಗಳು ಹೇಳುವುದೇನು?

"ಜಿಲ್ಲೆಯ ಮುರಡೇಶ್ವರ ಹಾಗೂ ಗೋಕರ್ಣದ ಕಡಲತೀರದಲ್ಲಿ ಜಲಸಾಹಸ ಕ್ರೀಡೆ ನಡೆಸುವವರೇ ಲೈಫ್ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವಂತೆ ಸೂಚನೆ ನೀಡಿದ್ದು, ಅದರನ್ವಯ ನೇಮಕ ಮಾಡಿಕೊಳ್ಳಲಾಗಿದೆ" ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪುರುಷೋತ್ತಮ ತಿಳಿಸಿದ್ದಾರೆ.

ಈ ಹಿಂದೆ ತರಬೇತಿ ಪಡೆದ ಲೈಫ್ ಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳುವಂತೆ ಜಲಸಾಹಸ ಕ್ರೀಡೆಗಳ ಟೆಂಡರ್ ಪಡೆದವರಿಗೆ ತಿಳಿಸಲಾಗಿತ್ತು. ಕೆಲವರು ಹೆಚ್ಚಿನ ವೇತನ ಡಿಮ್ಯಾಂಡ್ ಮಾಡಿದ್ದು, ಅನಿವಾರ್ಯವಾಗಿ ಬೇರೆಯವರನ್ನ ನೇಮಕ ಮಾಡಿಕೊಳ್ಳಲಾಗಿದೆ. ಗೋಕರ್ಣದಲ್ಲಿ ಗುರುವಾರ ನಡೆದ ಘಟನೆಯಲ್ಲಿ ಇಬ್ಬರು ಪ್ರವಾಸಿಗರನ್ನು ಲೈಫ್ ಗಾರ್ಡ್‌ಗಳೇ ರಕ್ಷಣೆ ಮಾಡಿದ್ದಾರೆ.

English summary
Uttara Kannada major tourist hub in Karnataka. More than 10 tourist died in the district after lifting the lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X