ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಟ್ಕಳದಲ್ಲಿ ಮೋದಿ ಅಭಿಮಾನ; ಆಟೋದಲ್ಲಿ ಉಚಿತ ಪ್ರಯಾಣ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಮೇ 29: 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ದಾಖಲಿಸಿ ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಆಯ್ಕೆಯಾಗಿರುವುದು ಮೋದಿ ಅಭಿಮಾನಿಗಳಲ್ಲಿ ಹುರುಪು ಇಮ್ಮಡಿಗೊಳಿಸಿದೆ. ಇಡೀ ದೇಶದಲ್ಲೇ ಈ ಗೆಲುವಿನ ಸಂಭ್ರಮಾಚರಣೆ ವಿಧವಿಧವಾಗಿ ನಡೆಯುತ್ತಿದೆ.

ಬಿಜೆಪಿ ಪ್ರಚಂಡ ಬಹುಮತ, ಶಿವಮೊಗ್ಗದಲ್ಲಿ 1 ಲಕ್ಷ ಲಾಡು ಹಂಚಿಕೆಬಿಜೆಪಿ ಪ್ರಚಂಡ ಬಹುಮತ, ಶಿವಮೊಗ್ಗದಲ್ಲಿ 1 ಲಕ್ಷ ಲಾಡು ಹಂಚಿಕೆ

ಈ ಯಶಸ್ಸಿನಿಂದ ಮೋದಿ ಅಭಿಮಾನಿಗಳ ಸಂಖ್ಯೆಯಲ್ಲಿ ಮೊದಲಿಗಿಂತಲೂ ಏರಿಕೆಯಾಗಿದೆ ಎಂಬುದೂ ನಿಶ್ಚಿತ. ಕೆಲವೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಮತ್ತೂ ಕೆಲವರು ಸಿಹಿ ಹಂಚಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಲ್ಲೊಬ್ಬರು ಅಭಿಮಾನಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಮೋದಿ ಮೇಲಿನ ಅಭಿಮಾನ ಮೆರೆಯಲು ಮುಂದಾಗಿದ್ದಾರೆ.

ಉಚಿತ ಕ್ಷೌರ ಮಾಡಿ ಮೋದಿ ಅಭಿಮಾನ ಮೆರೆದ ಪುತ್ತೂರಿನ ಕ್ಷೌರಿಕಉಚಿತ ಕ್ಷೌರ ಮಾಡಿ ಮೋದಿ ಅಭಿಮಾನ ಮೆರೆದ ಪುತ್ತೂರಿನ ಕ್ಷೌರಿಕ

ಅವರೇ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಹನುಮಾನನಗರದ ಚಂದ್ರು ನಾಯ್ಕ. ಚಂದ್ರು ಅಪ್ಪಟ ಮೋದಿ ಅಭಿಮಾನಿ. ಹಾಗಾಗಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಿರುವುದನ್ನು ಅತ್ಯಂತ ವಿಭಿನ್ನ ರೀತಿಯಲ್ಲಿ ಸಂಭ್ರಮಿಸಲು ನಿರ್ಧರಿಸಿದ್ದಾರೆ. ಮೋದಿಯವರು ಪ್ರಮಾಣವಚನ ಸ್ವೀಕರಿಸುವ ದಿನ, ಅಂದರೆ ಮೇ 30ರಂದು ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೆ ತಮ್ಮ ಆಟೋದಲ್ಲಿ ಉಚಿತ್ರ ಪ್ರಯಾಣವನ್ನು ಘೋಷಣೆ ಮಾಡಿದ್ದಾರೆ. ನನ್ನ ಆಟೋ ಪ್ರಯಾಣಿಕರಿಗೆ ಏಳು ಕಿಲೋ ಮೀಟರ್ ವ್ಯಾಪ್ತಿಯೊಳಗೆ ಉಚಿತ ಸೇವೆ ಎಂದು ಬೋರ್ಡ್ ಕೂಡ ಹಾಕಿಕೊಂಡಿದ್ದಾರೆ.

modi fan announced free auto travel

ಈ ಕುರಿತಂತೆ ಮಾತನಾಡಿರುವ ಚಂದ್ರು, ಮೋದಿಯವರು ಎರಡನೆಯ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ನನಗೆ ತುಂಬಾ ಸಂತೋಷ ಮೂಡಿಸಿದೆ. ಹೀಗಾಗಿ, ಅವರು ಪ್ರಮಾಣವಚನ ಸ್ವೀಕಾರ ಮಾಡುವ ದಿನ ನನ್ನ ಆಟೋದಲ್ಲಿ ಎಲ್ಲರಿಗೂ ಉಚಿತ ಪ್ರಯಾಣ ಘೋಷಿಸಿದ್ದೇನೆ. ಈ ಮೂಲಕ ನಾನೂ ಒಂದು ರೀತಿ ದೇಶ ಸೇವೆಗೆ ನಿರ್ಧರಿಸಿದ್ದೇನೆ ಎಂದರು.

English summary
Narendra Modi has become the Prime Minister of India for the second time in an unprecedented victory in the Lok Sabha elections in 2019. The victory in the whole country is happening differently. some fans are celebrating by fireworks and some others sharing sweets. But chandru of uttarakannada district announced free auto travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X