• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ವಿಡಿಯೋ; ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಸಖತ್ ಡ್ಯಾನ್ಸ್!

By ದೇವರಾಜ್ ನಾಯ್ಕ್
|

ಕಾರವಾರ, ಮಾರ್ಚ್ 23: ಕಾರವಾರ ನಗರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಅವರು ಡ್ಯಾನ್ಸ್ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳಾ ದಿನಾಚರಣೆ ಅಂಗವಾಗಿ ನಮಿತಾಸ್ ಫೆಮ್ಮಿ ಫಿಟ್ನೆಸ್ ಸಂಸ್ಥೆಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಮಾರ್ಚ್ 8ರಂದು ಮಹಿಳೆಯರಿಗಾಗಿ ಮೆಹಂದಿ, ಮೇಕಪ್ ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಿದ್ದ ಸಂಸ್ಥೆಯು ಮಾ.20 ಹಾಗೂ 21ರಂದು ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಡ್ಯಾನ್ಸ್, ಫ್ಯಾಷನ್ ಶೋ ಆಯೋಜಿಸಿತ್ತು.

ವಿಡಿಯೋ; ಗ್ರಾಮ ವಾಸ್ತವ್ಯದಲ್ಲಿ ಬಂಗಾರಪೇಟೆ ತಹಶೀಲ್ದಾರ್ ಡ್ಯಾನ್ಸ್! ವಿಡಿಯೋ; ಗ್ರಾಮ ವಾಸ್ತವ್ಯದಲ್ಲಿ ಬಂಗಾರಪೇಟೆ ತಹಶೀಲ್ದಾರ್ ಡ್ಯಾನ್ಸ್!

ಗ್ರೂಪ್ ಡ್ಯಾನ್ಸ್ ವಿಭಾಗದಲ್ಲಿ ನಮಿತಾ ಫೆಮ್ಮಿ ಫಿಟ್ನೆಸ್ ಸಂಸ್ಥೆಯ ಸದಸ್ಯರೇ ಹೆಜ್ಜೆ ಹಾಕಿದ್ದಾರೆ‌. ಈ ವೇಳೆ ಶಾಸಕಿ ರೂಪಾಲಿ ನಾಯ್ಕ ಕೂಡ ಜೊತೆಯಾಗಿದ್ದು, ಒಂದೂವರೆ ನಿಮಿಷಗಳ ಹಾಡಿಗೆ ಕೊನೆಯವರೆಗೂ ಡ್ಯಾನ್ಸ್ ಮಾಡಿದ್ದಾರೆ. ಶಾಸಕಿಯ ಈ ಡ್ಯಾನ್ಸ್‌ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಿಂದೆಯೂ ಡ್ಯಾನ್ಸ್ ಮಾಡಿದ್ದರು; ಶಾಸಕಿ ಹಾಡಿಗೆ ಹೆಜ್ಜೆ ಹಾಕಿದ್ದು ಇದೇ ಮೊದಲೇನಲ್ಲ. ಈ ಹಿಂದೆ 2018ರಲ್ಲಿ ಕಾರವಾರದ ಮಯೂರವರ್ಮ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಕರಾವಳಿ ಉತ್ಸವದ ಮೊದಲ ದಿನದ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ವೇದಿಕೆಯ ಕೆಳಭಾಗದಲ್ಲಿ ಕುಳಿತಿದ್ದವರು ಸೈರಾಟ್ ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದ್ದರು.

ಎರಡನೇ ದಿನದ ಕಾರ್ಯಕ್ರಮದಲ್ಲಿ ಡಾನ್ಸ್ ಇಂಡಿಯಾ ಡಾನ್ಸ್ ಖ್ಯಾತಿಯ ಸಂಕೇತ್ ಗಾಂವಕರ್ ಜೊತೆಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದರು. ಇನ್ನು ಅದೇ ವರ್ಷ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಸಮಯದಲ್ಲೂ ಜನರೊಂದಿಗೆ ಶಾಸಕಿ ಡ್ಯಾನ್ಸ್ ಮಾಡಿದ್ದರು.

   ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 3ನೇ ಸ್ಥಾನ! | Oneindia Kannada

   2019ರಲ್ಲಿ ದೇಶದಲ್ಲಿ ಬಿಜೆಪಿಯ ಜಯಭೇರಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ ಹೆಗಡೆ ದಾಖಲೆಯ ಮತಗಳ ಅಂತರದಿಂದ ಆಯ್ಕೆಯಾಗಿರುವ ನಿಮಿತ್ತ ಬಿಜೆಪಿ ಕಾರ್ಯಕರ್ತರು ಕಾರವಾರದಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲೂ ಕಾರ್ಯಕರ್ತೆಯರೊಂದಿಗೆ ಬ್ಯಾಂಡ್ ಗಳ ಸದ್ದಿಗೆ ಶಾಸಕಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು.

   English summary
   Bharatiya Janata Party Karwar Ankola MLA Roopali Naik dance for the song in the women's day celebration function in Karwar. MLA dance video went viral on social media.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X