ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಟ್ಕಳದಲ್ಲಿ ಮತ್ತೆ ಕೇಸ್; ಕಂಟೈನ್ಮೆಂಟ್, ಬಫರ್ ಝೋನ್ ಗುರುತು

|
Google Oneindia Kannada News

ಭಟ್ಕಳ, ಮೇ 06: ಪಟ್ಟಣದಲ್ಲಿ ಮಂಗಳವಾರ ಕೊರೊನಾ ಸೋಂಕಿತ ಪ್ರಕರಣವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ಝೋನ್ ಹಾಗೂ ಬಫರ್ ಝೋನ್ ವ್ಯಾಪ್ತಿಯನ್ನು ಗುರುತಿಸಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶ ಹೊರಡಿಸಿದ್ದಾರೆ.

Recommended Video

BSY 1610 ಕೋಟಿ ಪ್ಯಾಕೇಜ್ ಘೋಷಣೆ , ಕೊರೊನ ಪರಿಹಾರದಲ್ಲಿ ರಾಜ್ಯವೇ ನಂಬರ್ ಒನ್ | Yediyurappa | Karnataka

ಪಟ್ಟಣದ ಪೂರ್ವ ಭಾಗದಲ್ಲಿ ರೈಲ್ವೆ ನಿಲ್ದಾಣ ರಸ್ತೆ, ಬೆಳಲಖಂಡದವರೆಗೆ, ಪಶ್ಚಿಮದಲ್ಲಿ ತಲಗೇರಿ ರಸ್ತೆ, ಉತ್ತರದಲ್ಲಿ ವೆಂಕಟಾಪುರ ನದಿ ಹಾಗೂ ದಕ್ಷಿಣದಲ್ಲಿ ಮುಂಡಳ್ಳಿ ಗ್ರಾಮದ ಗಡಿಯವರೆಗೆ ಸಂಪೂರ್ಣ ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ 10,806 ಮನೆಗಳಿದ್ದು, 2,057 ಅಂಗಡಿಗಳು ಹಾಗೂ 65 ಕಚೇರಿಗಳಿವೆ. 51 ಸಾವಿರ ಜನಸಂಖ್ಯೆ ಇದೆ.

 ನಿಶ್ಚಿಂತವಾಗಿದ್ದ ಉತ್ತರ ಕನ್ನಡದಲ್ಲೀಗ ಮತ್ತೆ ಢವಢವ; ಭಟ್ಕಳ ಯುವತಿಗೆ ಸೋಂಕು ನಿಶ್ಚಿಂತವಾಗಿದ್ದ ಉತ್ತರ ಕನ್ನಡದಲ್ಲೀಗ ಮತ್ತೆ ಢವಢವ; ಭಟ್ಕಳ ಯುವತಿಗೆ ಸೋಂಕು

ಕಂಟೈನ್ಮೆಂಟ್ ಝೋನ್ ನಿಂದ 5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಗುರುತಿಸಲಾಗಿದ್ದು, ಪೂರ್ವ ಭಾಗದಲ್ಲಿ ಕೋಣಾರ ಗ್ರಾಮ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಉತ್ತರದಲ್ಲಿ ಶಿರಾಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದಕ್ಷಿಣದಲ್ಲಿ ಹಡೀನ್ ‍ನ ಬೆಳಕೆ ಗ್ರಾಮ ಪಂಚಾಯತಿ ಕಚೇರಿಯವರೆಗೆ ಒಳಪಡಲಿದೆ. ಉಪವಿಭಾಗಾಧಿಕಾರಿ ಭರತ್ ಎಸ್. ಅವರಿಗೆ ಈ ವಲಯಗಳಲ್ಲಿ ಕೊರೊನಾ ಸೋಂಕು ವ್ಯಾಪಿಸದಂತೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿಲಾಗಿದೆ.

Marking Of Continement And Buffer Zone In Bhatkal

ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲು ಆದೇಶ: ಮಂಗಳವಾರ ಕೊರೊನಾ ಸೋಂಕಿತ ಪ್ರಕರಣವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲು ತಹಶೀಲ್ದಾರ್ ರವಿಚಂದ್ರ ಆದೇಶಿಸಿದ್ದಾರೆ. ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯತಿ ಹಾಗೂ ಹೆಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ, ಒಪಿಡಿ ಹಾಗೂ ಖಾಸಗಿ ಕ್ಲಿನಿಕ್ ಗಳನ್ನು ಮುಂದಿನ ಆದೇಶದವರೆಗೆ ಮುಚ್ಚುವಂತೆ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಯಾವುದೇ ತುರ್ತು ಅನಾರೋಗ್ಯ ಸಂದರ್ಭದಲ್ಲಿ ಶಿರಾಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದಾರೆ.

English summary
DC Harishkumar has ordered for marking continement and buffer zone as one coronavirus positive case found on tuesday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X