ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಳಿ ನದಿಯಲ್ಲಿ ಮೊಸಳೆ ದಾಳಿ, ಪವಾಡ ಸದೃಶ ರೀತಿಯಲ್ಲಿ ವ್ಯಕ್ತಿ ಪಾರು

|
Google Oneindia Kannada News

ಕಾರವಾರ, ಡಿಸೆಂಬರ್ 08: ಕಾಳಿ ನದಿಗೆ ಸ್ನಾನಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಮೊಸಳೆ ಬಾಯಿಯಿಂದ ಪವಾಡ ಸದೃಶ ರೀತಿಯಲ್ಲಿ ಬಚಾವಾದ ಘಟನೆ ಶುಕ್ರವಾರ (ಡಿ.07) ಬೆಳಕಿಗೆ ಬಂದಿದೆ.

ಇಂಡೋನೇಷ್ಯಾದಲ್ಲಿ ವ್ಯಕ್ತಿಯನ್ನು ಕೊಂದ ಪ್ರತೀಕಾರಕ್ಕೆ 292 ಮೊಸಳೆ ಹತ್ಯೆ ಇಂಡೋನೇಷ್ಯಾದಲ್ಲಿ ವ್ಯಕ್ತಿಯನ್ನು ಕೊಂದ ಪ್ರತೀಕಾರಕ್ಕೆ 292 ಮೊಸಳೆ ಹತ್ಯೆ

ಇದು ಆಶ್ಚರ್ಯವೆನಿಸಿದರೂ ಸತ್ಯ. ಮೊಸಳೆಯೊಂದಿಗೆ ಹೋರಾಡಿ ಪಾರಾಗಿ ಬಂದ ವ್ಯಕ್ತಿಯ ಹೆಸರು ನಾಗೇಶ್ ಈಶ್ವರ ಬಳ್ಳಾರಿ(43). ಇವರು ದಾಂಡೇಲಿಯ ನಿರ್ಮಲ ನಗರ ನಿವಾಸಿಯಾಗಿದ್ದು, ಅಯ್ಯಪ್ಪ ಮಾಲಾಧಾರಿಯಾಗಿದ್ದ ಕಾರಣ ಕಾಳಿ ನದಿ ನೀರಿನಲ್ಲಿ ಸ್ನಾನಕ್ಕಾಗಿ ಇಳಿದಿದ್ದರು. ಆಗ ನೀರಿನ ಆಳದಲ್ಲಿ ಅಡಗಿದ್ದ ಮೊಸಳೆಯೊಂದು ಈತನ ಕಾಲಿಗೆ ಕಚ್ಚಿ ಎಳೆದೊಯ್ದಿದೆ.

 ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ವ್ಯಕ್ತಿ ಮೊಸಳೆಗೆ ಬಲಿ ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ವ್ಯಕ್ತಿ ಮೊಸಳೆಗೆ ಬಲಿ

ಆದರೆ ಧೃತಿಗಡೆದ ನಾಗೇಶ್ ಮೊಸಳೆಯೊಂದಿಗೆ ಹೋರಾಡಿ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ. ಮೊಸಳೆ ಜೊತೆ ನಾಗೇಶ್ ಹೋರಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

Man attacked by crocodile in Kali river

ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ದ ಆಸ್ಪತ್ರೆಗೆ ಸಾಗಿಸಿದ್ದಾರೆ.ಈ ಕುರಿತು ದಾಂಡೇಲಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 ಅರಣ್ಯ ಇಲಾಖೆಯವರ ಕೈಗೆ ಸಿಗದ ಮೊಸಳೆ ಮೀನುಗಾರರಿಗೆ ಸಿಕ್ಕಿತು! ಅರಣ್ಯ ಇಲಾಖೆಯವರ ಕೈಗೆ ಸಿಗದ ಮೊಸಳೆ ಮೀನುಗಾರರಿಗೆ ಸಿಕ್ಕಿತು!

ಮೊಸಳೆ ದಾಳಿಯಿಂದ ನಾಗೇಶ್ ಎದೆ, ಕೈ ಹಾಗೂ ಕಾಲಿನ ಸ್ಪಲ್ಪಭಾಗ ಗಾಯವಾಗಿದೆ. ಮೊಸಳೆ ಜೊತೆ ಸೆಣಸಾಟದಿಂದ ಶಾಕ್ ಗೆ ಒಳಗಾದ ನಾಗೇಶ್ ಮಾತನಾಡದ ಸ್ಥಿತಿಗೆ ತಲುಪಿರುವುದು ತಿಳಿದು ಬಂದಿದೆ.

English summary
On Friday, a man from Dandeli in Karnataka was attacked by a crocodile at Kali river.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X