ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನಂದ್ ಅಸ್ನೋಟಿಕರ್‌ಗೆ ಮಹತ್ವದ ಸಲಹೆ ನೀಡಿದ ಮಧು ಬಂಗಾರಪ್ಪ

|
Google Oneindia Kannada News

ಕಾರವಾರ, ಜುಲೈ 2: ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಸೇರಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಪುತ್ರ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪನವರನ್ನು ಗುರುವಾರ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಭೇಟಿ ಮಾಡಿ ರಾಜಕೀಯ ಚರ್ಚೆ ನಡೆಸಿದ್ದಾರೆ.

ಬಿಜೆಪಿಯಲ್ಲಿದ್ದ ಆನಂದ್ ಅಸ್ನೋಟಿಕರ್ ಕಳೆದ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್ ಪಕ್ಷಕ್ಕೆ ಸೇರಲು ಮಧು ಬಂಗಾರಪ್ಪ ಪ್ರಮುಖ ಕಾರಣವಾಗಿದ್ದರು. ಚುನಾವಣೆಯಲ್ಲಿ ಸೋಲಿನ ನಂತರವೂ ಇಬ್ಬರು ನಾಯಕರು ಉತ್ತಮ ಸಂಬಂಧವನ್ನು ಹೊಂದಿದ್ದು, ಕೆಲ ದಿನದ ಹಿಂದೆ ಮಧು ಬಂಗಾರಪ್ಪ ಜೆಡಿಎಸ್ ತೊರೆದು, ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಇದೇ ಹಿನ್ನಲೆಯಲ್ಲಿ ಚರ್ಚೆ ನಡೆಸಲು ಆನಂದ್ ಅಸ್ನೋಟಿಕರ್ ಅವರನ್ನು ಭೇಟಿಗೆ ಆಹ್ವಾನಿಸಿದ್ದರು.

ಬೆಂಗಳೂರಿನ ಮಧು ಬಂಗಾರಪ್ಪನವರ ಮನೆಗೆ ಭೇಟಿ ನೀಡಿದ ಆನಂದ್ ಅಸ್ನೋಟಿಕರ್, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ರಾಜಕೀಯಕ್ಕೂ, ಉತ್ತರ ಕನ್ನಡದ ರಾಜಕೀಯಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಅದರಲ್ಲೂ ಕಾರವಾರ- ಅಂಕೋಲಾ ಕ್ಷೇತ್ರದ ರಾಜಕೀಯ ಸಾಕಷ್ಟು ವಿಭಿನ್ನವಾಗಿರುವುದರಿಂದ ಡಿಸೆಂಬರ್‌ವರೆಗೆ ಕಾದು, ನಂತರ ಹೆಜ್ಜೆ ಇಡುವಂತೆ ಮಧು ಬಂಗಾರಪ್ಪ ಈ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Karwar: Madhu Bangarappa Gave Advice To Former Minister Anand Asnotikar

ತಂದೆಯ ಕಾಲದಿಂದಲೂ ಅಸ್ನೋಟಿಕರ್ ಕುಟುಂಬದ ಜೊತೆ ಉತ್ತಮ ಒಡನಾಟ ಹೊಂದಿದ್ದು, ಸದಾ ನಿಮ್ಮೊಂದಿಗೆ ಇರುತ್ತೇನೆ. ಯಾವತ್ತೂ ಕೈಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಮುಂದಿನ ದಿನದಲ್ಲಿ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಒಳ್ಳೆಯ ಅವಕಾಶಗಳು ಬರಲಿದ್ದು, ಕಾದು ಕ್ಷೇತ್ರದ ಜನರ ಸಲಹೆಯನ್ನೂ ಪಡೆದು ಹೆಜ್ಜೆ ಇಡುವಂತೆ ಮಧು ಬಂಗಾರಪ್ಪ ಆನಂದ್ ಅಸ್ನೋಟಿಕರ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಸೇರಲಿಕ್ಕೆ ಭೇಟಿಯಾಗಿದ್ದಲ್ಲ
"ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಅವರೊಟ್ಟಿಗೆ ಸೇರುವ ನಿಟ್ಟಿನಲ್ಲಿ ಭೇಟಿ ಮಾಡಿಲ್ಲ, ಇದೊಂದು ಸೌಹಾರ್ದಯುತ ಭೇಟಿಯಷ್ಟೇ,'' ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ತಿಳಿಸಿದ್ದಾರೆ.

"ರಾಜಕೀಯವಾಗಿ ಮಧು ಬಂಗಾರಪ್ಪ ಸಹೋದರನ ಸ್ಥಾನದಲ್ಲಿದ್ದು, ಇದೇ ಕಾರಣಕ್ಕೆ ಮುಂದಿನ ರಾಜಕೀಯ ಹೆಜ್ಜೆಯ ಕುರಿತು ಸಲಹೆ ಪಡೆಯಲು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಕೇವಲ ಕಾಂಗ್ರೆಸ್ ಮಾತ್ರವಲ್ಲದೇ, ಬಿಜೆಪಿ ಪಕ್ಷದಲ್ಲಿರುವ ಹತ್ತಿರದ ನಾಯಕರ ಮನೆಗಳಿಗೂ ಭೇಟಿ ನೀಡಿ ಚರ್ಚೆ ನಡೆಸಿದ್ದೇನೆ,'' ಎಂದು ತಿಳಿಸಿದ್ದಾರೆ.

Recommended Video

ಸಿದ್ದರಾಮಯ್ಯ ಮುಂದೆ ನಡೀಲಿಲ್ಲ ಡಿಕೆಶಿ ಆಟ | Karnataka Congress Inside Politics | Oneindia Kannada

"ಸದ್ಯ ನಾನು ಜೆಡಿಎಸ್ ಪಕ್ಷದಲ್ಲಿಯೇ ಇದ್ದು, ಕುಮಾರಸ್ವಾಮಿಯವರ ಒಡನಾಟದಲ್ಲಿದ್ದೇನೆ. ಕ್ಷೇತ್ರದ ಜನರೊಂದಿಗೆ ಸದಾ ಇದ್ದು, ರಾಜಕೀಯೇತರವಾಗಿ ಅವರ ಸೇವೆಯನ್ನು ಮಾಡುತ್ತಾ ಸಾಗುತ್ತೇನೆ. ಜನರ ಅಭಿಪ್ರಾಯ ಕೂಡ ಪಡೆದು ಮುಂದಿನ ಹೆಜ್ಜೆ ಇಡುತ್ತೇನೆ,'' ಎಂದು ತಿಳಿಸಿದ್ದಾರೆ.

English summary
Former minister Anand Asnotikar met former MLA Madhu Bangarappa on Thursday for political discussion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X