ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂಡಗೋಡದಲ್ಲಿ ಟಿಬೆಟನ್ನರ ಲೋಸಾರ್ ಹಬ್ಬ ಆರಂಭ: ಈ ವರ್ಷದ ಪ್ರಾಣಿ ಹಂದಿ

|
Google Oneindia Kannada News

ಕಾರವಾರ, ಫೆಬ್ರವರಿ 06: ಟಿಬೆಟನ್ನರ ಕ್ಯಾಲೆಂಡರ್‌ ಪ್ರಕಾರ ಹೊಸ ವರ್ಷ 'ಲೋಸಾರ್' ಮಂಗಳವಾರ ಆರಂಭವಾಯಿತು. ಒಟ್ಟು 15 ದಿನಗಳನ್ನು ಮುಂಡಗೋಡದ ಟಿಬೆಟನ್ನರು ಹಬ್ಬದಂತೆ ಆಚರಿಸುತ್ತಾರೆ. ಹಂದಿ ಈ ವರ್ಷದ ಪ್ರಾಣಿಯಾಗಿದೆ.

ಲೋಸಾರ್ ಹಬ್ಬದಲ್ಲಿ 'ಚಾಂಗ್' ಎನ್ನುವ ಪಾನೀಯಕ್ಕೆ ಮುಖ್ಯ ಸ್ಥಾನವಿದೆ. ಪ್ರತಿ ಟಬೆಟನ್ನರ ಮನೆಯಲ್ಲಿ ಗೋಧಿ ಹಾಗೂ ಬಾರ್ಲಿಯಿಂದ ಚಾಂಗ್ ತಯಾರಿಸುತ್ತಾರೆ. ಹಬ್ಬದ ಎರಡನೇ ದಿನವನ್ನು 'ಕಿಂಗ್ಸ್ ಲೋಸಾರ'(ಗ್ಯಾಲ್ಪೋ ಲೋಸಾರ್) ಎಂದು ಕರೆಯುತ್ತಾರೆ.

ಇಸ್ಕಾನ್ ದೇಗುಲದ ಕೃಷ್ಣ-ಬಲರಾಮ ಉತ್ಸವ, ಕಣ್ಣಿಗೆ ಹಬ್ಬಇಸ್ಕಾನ್ ದೇಗುಲದ ಕೃಷ್ಣ-ಬಲರಾಮ ಉತ್ಸವ, ಕಣ್ಣಿಗೆ ಹಬ್ಬ

ಲೋಸಾರ್ ಹಬ್ಬವು ಚೈನಾ ದೇಶದವರ ಹಾಗೂ ಮಂಗೋಲಿಯನ್ನರ ಹೊಸ ವರ್ಷದ ಆಸುಪಾಸಿನಲ್ಲಿ ಅಥವಾ ಅದೇ ದಿನ ಶುರುವಾಗುತ್ತದೆ.

Losar festival started on Tuesday in Mundagoda

ಲೋಸಾರ್ ಹಬ್ಬದ ಅಂಗವಾಗಿ ಮನೆಯನ್ನು ಸುಣ್ಣ, ಬಣ್ಣಗಳಿಂದ ಸಿಂಗರಿಸಲಾಗುತ್ತದೆ. ಗೋಡೆಗಳ ಮೇಲೆ ಸೂರ್ಯ, ಚಂದ್ರ ಇತ್ಯಾದಿ ಶುಭಸೂಚಕಗಳ ಚಿಹ್ನೆಗಳನ್ನು ಬಿಡಿಸುವುದು ಸಂಪ್ರದಾಯ. ಹೊಸ ಬಟ್ಟೆಯೊಂದಿಗೆ ಸುವಾಸನೆಯುಕ್ತ ಹೂವುಗಳು, ಹಣ್ಣುಹಂಪಲು, ಕರಿದ ತಿನಿಸುಗಳು (ಖಾಪ್ಸ್), ಚಾಂಗ್, ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳು ಹಬ್ಬದಲ್ಲಿ ಪ್ರಮುಖವಾಗಿರುತ್ತವೆ ಎನ್ನುತ್ತಾರೆ ಕರ್ಮಾ ಯಾಂಗ್ಡುಪ್.

 ಕರಾವಳಿಯಲ್ಲಿ ಜಲ ಪ್ರವಾಸೋದ್ಯಮಕ್ಕೆ ಸಾಧ್ಯತೆಗಳನ್ನು ತೆರೆದಿಟ್ಟ ರಿವರ್ ಫೆಸ್ಟ್ ಕರಾವಳಿಯಲ್ಲಿ ಜಲ ಪ್ರವಾಸೋದ್ಯಮಕ್ಕೆ ಸಾಧ್ಯತೆಗಳನ್ನು ತೆರೆದಿಟ್ಟ ರಿವರ್ ಫೆಸ್ಟ್

'ಹಬ್ಬದ ಮುನ್ನಾ ದಿನ ಇಲ್ಲಿನ ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರದಲ್ಲಿ ಸಂಜೆಯಿಂದ ಬೆಳಿಗ್ಗೆವರೆಗೆ ಪಾಲ್ಡೆನ್ ಲ್ಹಾಮು ಫುನಸ್ತೋಕ್ (ವಿಶೇಷ ಪೂಜೆ) ನಡೆಯುತ್ತದೆ. ಒಂಬತ್ತು ಬೌದ್ಧ ಮಂದಿರಗಳ ಪ್ರಮುಖರು, ಕ್ಯಾಂಪ್‌ ಮುಖಂಡರು, ಬಿಕ್ಕುಗಳು ಪಾಲ್ಗೊಳ್ಳುತ್ತಾರೆ. ಟಿಬೆಟನ್ನರು ಹಬ್ಬದ ಶುಭಾಶಯ (ತಾಶಿ ಡೆಲೆಕ್) ವಿನಿಮಯ ಮಾಡಿಕೊಳ್ಳುತ್ತಾರೆ' ಎಂದು ಟಿಬೆಟನ್ ಮುಖಂಡ ಜಂಪಾ ಲೋಬ್ಸಂಗ್ ಒನ್ ಇಂಡಿಯಾಗೆ ತಿಳಿಸಿದರು.

Losar festival started on Tuesday in Mundagoda

 ಕೊಡಗು ಪ್ರವಾಸಿ ಉತ್ಸವ: ಜನಮನ ಸೆಳೆದ ಓಪನ್ ಸ್ಟ್ರೀಟ್ ಫೆಸ್ಟಿವಲ್ ಕೊಡಗು ಪ್ರವಾಸಿ ಉತ್ಸವ: ಜನಮನ ಸೆಳೆದ ಓಪನ್ ಸ್ಟ್ರೀಟ್ ಫೆಸ್ಟಿವಲ್

'ಪ್ರತಿ ವರ್ಷ ಒಂದೊಂದು ಪ್ರಾಣಿಯಿಂದ ವರ್ಷವನ್ನು ಗುರುತಿಸಲಾಗುತ್ತದೆ. ಟಿಬೆಟ್‌ನಲ್ಲಿ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ದೇವತೆಗಳನ್ನು ಸಂತೃಪ್ತಿಗೊಳಿಸಲು ಧೂಪದೊಂದಿಗೆ ವಿಶೇಷ ಪೂಜೆ ಮಾಡಲಾಗುತ್ತಿತ್ತು. ಚಳಿಗಾಲದಲ್ಲಿ ನಡೆಯುತ್ತಿದ್ದ ಇದು ವರ್ಷಗಳು ಉರುಳಿದಂತೆ ಬೌದ್ಧ ಉತ್ಸವವಾಗಿ ಮಾರ್ಪಾಡುಗೊಂಡಿತು. ಟಿಬೆಟ್‌ನ ಒಂಬತ್ತನೇ ರಾಜ ಪ್ಯೂಡಿ ಗುಂಗಲ್ ಆಳ್ವಿಕೆಯಲ್ಲಿ ಇದು ಆರಂಭವಾಯಿತು ಎನ್ನಲಾಗಿದೆ. ಬೆಲ್ಮಾ ಎಂಬ ಹಿರಿಯ ಮಹಿಳೆ ಚಂದ್ರನ ಹಂತಗಳನ್ನು ಆಧರಿಸಿ ಸಮಯದ ಮಾಪಕವನ್ನು ಪರಿಚಯಿಸಿದರು. ಅಂದು ಈ ಉತ್ಸವ (ಲೋಸಾರ್ ) ಆರಂಭವಾಯಿತು' ಎಂದು ಜಂಪಾ ಲೋಬ್ಸಂಗ್ ತಿಳಿಸಿದರು.

English summary
'Losar' festival started on Tuesday in Mundagoda.Tibetans will celebrate this festival 15 days. Here is a brief description of this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X