ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದೆಂಥಾ ಪ್ರಶ್ನೆ: ಆರೋಗ್ಯ ಸಲಹೆ ಪಡೆಯೋಕೂ ಜಾತಿ ಹೇಳ್ಬೇಕಾ?

By ಡಿಪಿ ನಾಯ್ಕ
|
Google Oneindia Kannada News

Recommended Video

ಕಾರವಾರದಲ್ಲಿ ಅರೋಗ್ಯ ಸಲಹೆ ಪಡೆಯೋಕೆ ನಿಮ್ಮ ಜಾತಿ ಹೇಳಬೇಕಂತೆ | Oneindia Kannada

ಕಾರವಾರ, ಜೂನ್.25 : ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ಸೌಲಭ್ಯಗಳು ಸುಲಭವಾಗಿ ದೊರೆಯಬೇಕೆಂಬ ಉದ್ದೇಶದೊಂದಿಗೆ ಸರ್ಕಾರ ಸಾರ್ವಜನಿಕರಿಗಾಗಿ ಆರಂಭಿಸಿರುವ '104 ಆರೋಗ್ಯ ವಾಣಿ'ಗೆ ಕರೆ ಮಾಡುವವರಿಗೆ ಪ್ರತಿನಿಧಿಗಳು ಜಾತಿಯ ಮಾಹಿತಿ ಕೇಳುತ್ತಿರುವುದು ಇದೀಗ ಆಕ್ಷೇಪಕ್ಕೆ ಕಾರಣವಾಗಿದೆ.

ಆರೋಗ್ಯ ಚಿಕಿತ್ಸೆಗಾಗಿ ಸಕಾಲದಲ್ಲಿ ಆಸ್ಪತ್ರೆಗಳನ್ನು ತಲುಪಲು ಸಾಧ್ಯವಾಗದ ಗ್ರಾಮೀಣ ಜನರು ದೂರವಾಣಿ ಮೂಲಕ ತಜ್ಞ ವೈದ್ಯರ ಸಲಹೆ ಪಡೆಯಲು 104 ಆರೋಗ್ಯ ವಾಣಿ ಯೋಜನೆಯನ್ನು ಪ್ರಾರಂಭಿಸಲಾಗಿತ್ತು.

ಎಲ್ಲಾ ಶಾಲೆಗಳಲ್ಲಿ ಮಾದಕ ವಸ್ತುಗಳ ಜಾಗೃತಿಗೆ ಸಹಾಯವಾಣಿಎಲ್ಲಾ ಶಾಲೆಗಳಲ್ಲಿ ಮಾದಕ ವಸ್ತುಗಳ ಜಾಗೃತಿಗೆ ಸಹಾಯವಾಣಿ

ಆರೋಗ್ಯ ಸಲಹೆ, ಆಪ್ತ ಸಮಾಲೋಚನೆ, ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ, ಆರೋಗ್ಯ ಸಂಸ್ಥೆ ಅಥವಾ ಸಿಬ್ಬಂದಿಯ ವಿರುದ್ಧ ದೂರು ದಾಖಲು ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಹಾಗೂ ಸಾಮಾನ್ಯ ಕಾಯಿಲೆಗಳಾದ ಕೆಮ್ಮು, ಶೀತ, ಜ್ವರ, ಭೇದಿ, ಹೊಟ್ಟೆ ನೋವು, ಸಕ್ಕರೆ ಕಾಯಿಲೆ, ಮೊಡವೆ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಔಷಧ ಶಿಫಾರಸ್ಸು ಹಾಗೂ ಅವುಗಳ ಸೇವನೆಯ ಬಗ್ಗೆ ದೂರವಾಣಿ ಮೂಲಕವೇ ಇಲ್ಲಿ ಸಲಹೆಗಳನ್ನು ನೀಡಲಾಗುತ್ತದೆ.

Listening to caste information is now objectionable by public

ಇದಕ್ಕಾಗಿ ಕರೆ ಮಾಡುವ ಸಾರ್ವಜನಿಕರ ಕರೆ ಸ್ವೀಕರಿಸುವ ಪ್ರತಿನಿಧಿಯು ಕರೆ ಮಾಡಿದವರ ಹೆಸರು ಹಾಗೂ ಜಿಲ್ಲೆಯನ್ನು ಕೇಳಿ ತಮ್ಮಲ್ಲಿ ನೋಂದಾಯಿಸಿಕೊಳ್ಳುತ್ತಾರೆ. ಬಳಿಕ ಕರೆ ಮಾಡಿದವರಿಗೆ ನೋಂದಾವಣಿ ಸಂಖ್ಯೆಯೊಂದನ್ನು ನೀಡುತ್ತಾರೆ.

ಎರಡನೇ ಬಾರಿಗೆ ಸಹಾಯವಾಣಿಗೆ ಕರೆ ಮಾಡಿದರೆ ಈ ಸಂಖ್ಯೆಯನ್ನು ಹೇಳಿದರೆ ಸಾಕು, ಸಂಪೂರ್ಣ ಮಾಹಿತಿ ಪ್ರತಿನಿಧಿಗಳಿಗೆ ಲಭ್ಯವಾಗಲಿದೆ.

ಇವಿಷ್ಟನ್ನು ಕೇಳಿದ ಪ್ರತಿನಿಧಿಗಳು ಕರೆಯನ್ನು ಇನ್ನೊಬ್ಬ ಪ್ರತಿನಿಧಿಗೆ ವರ್ಗಾಯಿಸುತ್ತಾರೆ. ಈ ಪ್ರತಿನಿಧಿ ಕರೆ ಮಾಡಿದವರಿಗೆ ಸಲಹೆಗಳನ್ನು ನೀಡುತ್ತಾರೆ. ಸಲಹೆ ನೀಡಿದ ಬಳಿಕ, 'ಈ ಉಚಿತ ಸಹಾಯವಾಣಿಯು ರಾಜ್ಯ ಸರ್ಕಾರ ಹಾಗೂ ಪಿಎಸ್ಎಂಆರ್ ಐ ಸಹಯೋಗದಲ್ಲಿ ನಡೆಯುತ್ತಿರುವುದರಿಂದ ಸರ್ಕಾರದ ಮಾಹಿತಿಗಾಗಿ, ನಿಮ್ಮ ಆಕ್ಷೇಪಣೆ ಇಲ್ಲದಿದ್ದರೆ ನಿಮ್ಮ ಜಾತಿ ಯಾವುದೆಂದು ತಿಳಿದುಕೊಳ್ಳಬಹುದೆ' ಎಂದು ಪ್ರಶ್ನಿಸುತ್ತಿದ್ದಾರೆ.

Listening to caste information is now objectionable by public

ಸರ್ಕಾರದ ಸಹಾಯವಾಣಿಯಾಗಿಯೂ ಸಾರ್ವಜನಿಕರ ಜಾತಿಯನ್ನು ಕೇಳುತ್ತಿರುವುದು ಆಕ್ಷೇಪಾರ್ಹವಾಗಿದ್ದು, ಇದು ಸರ್ಕಾರದಿಂದಲೇ ಆಗುತ್ತಿದೆಯೇ ಅಥವಾ ಪ್ರತಿನಿಧಿಗಳು ವೈಯಕ್ತಿಕ ಹಿತಾಸಕ್ತಿಯಿಂದ ಮಾಡುತ್ತಿದ್ದಾರೆಯೇ ಎನ್ನುವುದು ತಿಳಿದುಬರಬೇಕಿದೆ.

English summary
Listening to caste information by representatives to call 104 health workers is now a matter of objection. As a government helpline listening to caste information is now objectionable by public
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X