ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡ ಜಿಲ್ಲೆ; ಈ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಚಿಕಿತ್ಸೆ ಲಭ್ಯ

|
Google Oneindia Kannada News

ಕಾರವಾರ, ಜೂನ್ 24: ಕೊರೊನಾ ವೈರಸ್ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್- 19 ಚಿಕಿತ್ಸೆಗೆ ಅವಕಾಶ ನೀಡಿದೆ. ಅದರಂತೆ, ‌ಜಿಲ್ಲೆಯ 14 ಆಸ್ಪತ್ರೆಗಳಲ್ಲಿ ಇನ್ಮುಂದೆ ಚಿಕಿತ್ಸೆ ಪಡೆಯಬಹುದಾಗಿದೆ.

ಕುಮಟಾದ ಕೆನರಾ ಹೆಲ್ತ್ ಕೇರ್ ಸೆಂಟರ್, ಡಾ.ಜಾನು ಮಣಕೀಕರ್ಸ್ ಮೆಟರ್ನಿಟಿ ಆಂಡ್ ನರ್ಸಿಂಗ್ ಹೋಮ್, ಅಚ್ಯುತ್ ಪಂಡಿತ್ ಹಾಸ್ಪಿಟಲ್, ರಾಮಲೀಲಾ ಹಾಸ್ಪಿಟಲ್, ಹೈಟೆಕ್ ಲೈಫ್ ಲೈನ್, ಹೊನ್ನಾವರದ ಶ್ರೀದೇವಿ ನರ್ಸಿಂಗ್ ಹೋಮ್, ಸೇಂಟ್ ಇಗ್ನೇಷಿಯಸ್ ಹಾಸ್ಪಿಟಲ್, ಡಾ.ವಿ.ಕೆ.ಬಿ ಬಳ್ಕೂರ್ ಮೆಮೋರಿಯಲ್ ಹಾಸ್ಪಿಟಲ್, ಶಿರಸಿಯ ವಿಶ್ವ ಸೇವಾ ಸಮಿತಿ ರೋಟರಿ ಚಾರಿಟೇಬಲ್ ಆಸ್ಪತ್ರೆ, ಟಿ.ಎಸ್.ಎಸ್ ಆಸ್ಪತ್ರೆ, ಕಾರವಾರದ ಶೆಟ್ಟಿ ಕಣ್ಣಿನ ಆಸ್ಪತ್ರೆ, ಮುರುಡೇಶ್ವರದ ಆರ್.ಎನ್.ಎಸ್. ಹಾಸ್ಪಿಟಲ್, ಯಲ್ಲಾಪುರದ ಸಾಯಿ ನೇತ್ರಾಲಯದಲ್ಲಿ ಕೋವಿಡ್- 19 ಚಿಕಿತ್ಸೆ ಪಡೆಯಬಹುದಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಚಿಕಿತ್ಸೆಗೆ ದರ ನಿಗದಿಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಚಿಕಿತ್ಸೆಗೆ ದರ ನಿಗದಿ

ಚಿಕಿತ್ಸೆಗೆ ಹಣ ಕೊಡಬೇಕು: ರಾಜ್ಯ ಸರ್ಕಾರ ಈವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೋವಿಡ್- 19 ಸೋಂಕಿತರಿಗೆ ಚಿಕಿತ್ಸೆ ನೀಡಿತ್ತು. ಆದರೆ, ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯ ಅಡಿ ಈ ಸಾಂಕ್ರಾಮಿಕ ರೋಗವನ್ನು ಸೇರ್ಪಡೆ ಮಾಡಲಾಗುತ್ತದೆ ಎನ್ನಲಾಗಿದೆ.

List Of Private Hospitals To Treat Coronavirus Infected In Uttara Kannada District

ನಿಗದಿತ ದರಕ್ಕಿಂತ ಹೆಚ್ಚು ಪಡೆದರೆ ಕ್ರಮ: ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಚಿಕಿತ್ಸೆಗೆ ದರ ನಿಗದಿ ಮಾಡಿದ್ದು, ಸೂಚಿತ ದರ ಮೀರಿ ಸುಲಿಗೆ ಮಾಡುವ ಆಸ್ಪತ್ರೆಗಳ ವಿರುದ್ಧ ಹಾಗೂ ಚಿಕಿತ್ಸೆಗೆ ಯಾವುದೇ ಆಸ್ಪತ್ರೆ ನಿರಾಕರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ನೂತನ ಮಾರ್ಗಸೂಚಿಯಂತೆ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಒಂದೇ ಒಂದು ನಯಾ ಪೈಸೆ ಹೆಚ್ಚುವರಿ ಹಣ ಪಡೆಯುವಂತಿಲ್ಲ. ಒಂದು ವೇಳೆ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆದರೆ ಅಂತಹ ಆಸ್ಪತ್ರೆಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶ ನೂತನ ಮಾರ್ಗಸೂಚಿಯಲ್ಲಿದೆ.

English summary
Government gave permission to give treatment for coronavirus in private hospitals. Here is a list of private hospitals in uttara kannada district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X