ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ: ಬಾಗಿಲು ಮುಚ್ಚಿದ ಗೋವಾ ಗಡಿಯ ಮದ್ಯದಂಗಡಿಗಳು!

|
Google Oneindia Kannada News

ಕಾರವಾರ, ಅಕ್ಟೋಬರ್ 12: ಕರ್ನಾಟಕ ಗಡಿ- ಗೋವಾದ ಪೋಳೆಂ ಪ್ರದೇಶದಲ್ಲಿ ಈಗ ಅಕ್ಷರಶಃ ಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಬರುವ ಪ್ರವಾಸಿಗರಿಂದಲೇ ನಡೆಯುತ್ತಿದ್ದ ಗಡಿಭಾಗದ ಬಾರ್‌ಗಳು ಸದ್ಯ ಗ್ರಾಹಕರಿಲ್ಲದೇ ನಷ್ಟ ಅನುಭವಿಸಿ ಸಂಪೂರ್ಣವಾಗಿ ಬಾಗಿಲು ಮುಚ್ಚಿವೆ.

ಕಾರವಾರದ ಗಡಿ ಭಾಗವಾಗಿರುವ ಪೋಳೆಂನಲ್ಲಿ 50ಕ್ಕೂ ಹೆಚ್ಚು ಬಾರ್‌ಗಳಿವೆ. ಇಲ್ಲಿನ ವ್ಯಾಪಾರ ವಹಿವಾಟನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದ್ದುದು ಪ್ರವಾಸಿಗರು. ಅದರಲ್ಲೂ ಕಾರವಾರದ ಮದ್ಯ ಪ್ರಿಯರು. ಆದರೆ ಕೊರೊನಾ ಲಾಕ್‌ಡೌನ್ ತೆರವಾದ ಬಳಿಕವೂ ಗಡಿ ನಿರ್ಬಂಧದಿಂದಾಗಿ ಶೇ.90ಕ್ಕೂ ಹೆಚ್ಚು ಬಾರ್‌ಗಳು ಈಗ ಬಾಗಿಲು ಮುಚ್ಚಿವೆ.

 ಬಾರ್ ಕೆಲಸಗಾರರಿಗೆ ಕೆಲಸವಿಲ್ಲ

ಬಾರ್ ಕೆಲಸಗಾರರಿಗೆ ಕೆಲಸವಿಲ್ಲ

ಇಲ್ಲಿನ ಬಾರ್‌ಗಳಲ್ಲಿ ಕಾರವಾರ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶದವರು ಕೆಲಸ ಕಾರ್ಯ ಮಾಡುತ್ತಿದ್ದರು. ಅವರಿಗೂ ಈಗ ಕೆಲಸವಿಲ್ಲದಂತಾಗಿದೆ. ಗೋವಾ ಗಡಿ ಸುಮಾರು 15 ಕಿ.ಮೀ. ದೂರದಲ್ಲಿರುವ ಕಾರಣ ಹಾಗೂ ಪೆಟ್ರೋಲ್ ದರದಲ್ಲೂ ಹೆಚ್ಚಿನ ವ್ಯತ್ಯಾಸ ಇದ್ದಿದ್ದರಿಂದ ಕಾರವಾರದ ಹೆಚ್ಚಿನ ಜನರು ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳುವುದಷ್ಟೇ ಅಲ್ಲದೆ ಇಲ್ಲಿ ಬಾರ್‌ಗಳಿಗೆ ತೆರಳಿ ಪಾರ್ಟಿ, ಮದ್ಯಪಾನ ಮಾಡುವುದರಿಂದ ಇಲ್ಲಿನ ಬಾರ್‌ಗಳಿಗೆ ಉತ್ತಮ ಆದಾಯವಿತ್ತು.

 ಪ್ರವಾಸಿಗರು, ಕಾರವಾರದವರಿಗೆ ಪ್ರವೇಶ ನಿರ್ಬಂಧ

ಪ್ರವಾಸಿಗರು, ಕಾರವಾರದವರಿಗೆ ಪ್ರವೇಶ ನಿರ್ಬಂಧ

ಆದರೆ ಕೊರೊನಾ ಲಾಕ್‌ಡೌನ್ ಆದ ಬಳಿಕ ಪ್ರವಾಸಿಗರು, ಕಾರವಾರದವರಿಗೆ ಪ್ರವೇಶ ನಿರ್ಬಂಧ ಮಾಡಿದ್ದರಿಂದ ಬಾಗಿಲು ಮುಚ್ಚಿದ್ದ ಬಾರ್‌ಗಳು ಈವರೆಗೂ ತೆರೆದಿಲ್ಲ. ಗೋವಾ- ಕಾರವಾರ ರಾಷ್ಟ್ರೀಯ ಹೆದ್ದಾರಿಯ ಅಕ್ಕ- ಪಕ್ಕದಲ್ಲಿರುವ ಅನೇಕ ಬಾರ್, ರೆಸ್ಟೋರೆಂಟ್‌ಗಳಲ್ಲಿ ಯಾವುದೇ ವ್ಯವಹಾರ ಇಲ್ಲದಿರುವುದರಿಂದ ಶೇ.90ಕ್ಕೂ ಹೆಚ್ಚು ಕಡೆಗಳ ಬಾರ್ ಮಾಲೀಕರು ಈವರೆಗೆ ಬಾಗಿಲು ತೆರೆಯುವ ಉತ್ಸಾಹ ತೋರುತ್ತಿಲ್ಲ. ಹೆದ್ದಾರಿ ಪಕ್ಕದಲ್ಲಿರುವ ಭಾಗಶಃ ಬಾರ್ ಮುಚ್ಚಿರುವ ದೃಶ್ಯ ಸಾಮಾನ್ಯವಾಗಿದ್ದು, ಕೆಲವು ಬಾರ್‌ಗಳು ನಷ್ಟದಲ್ಲೇ ನಡೆಯುತ್ತಿವೆ.

 ಈಗಷ್ಟೇ ಆರಂಭವಾದ ಗಡಿ ಪ್ರವೇಶ

ಈಗಷ್ಟೇ ಆರಂಭವಾದ ಗಡಿ ಪ್ರವೇಶ

ಕೊರೊನಾ ಲಾಕ್‌ಡೌನ್ ಮುಕ್ತಾಯದ ಬಳಿ ಕರ್ನಾಟಕ- ಗೋವಾ ಗಡಿ ಪ್ರದೇಶಕ್ಕೆ ಸಂಪೂರ್ಣವಾಗಿ ನಿಷೇಧವಿತ್ತು. ಕೊರೊನಾ ಆರ್‌ಟಿ೦-ಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ಗಡಿ ಪ್ರದೇಶದ ನಿಯಮ ಎರಡೂ ರಾಜ್ಯದ ಗಡಿಯಲ್ಲಿತ್ತು. ಮಹಾರಾಷ್ಟ್ರದಲ್ಲಿ ಕೊರೊನಾ ಹಾಗೂ ಡೆಲ್ಟಾ ಪ್ಲಸ್ ಸೋಂಕು ಹೆಚ್ಚಾಗಿದ್ದರಿಂದ ಹಾಗೂ ಗೋವಾ ಮೂಲಕ ಕರ್ನಾಟಕಕ್ಕೆ ಬರುವ ಸಾಧ್ಯತೆ ಇದ್ದಿದ್ದರಿಂದ ಕಾರವಾರ ಹಾಗೂ ಗೋವಾ ಗಡಿಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗಿತ್ತು.

ಸದ್ಯ ಕೊರೋನಾ ಸೋಂಕಿನ ಎರಡೂ ಲಸಿಕೆ ಪಡೆದುಕೊಂಡವರಿಗೆ ಮಾತ್ರ ಗೋವಾ ಗಡಿಯೊಳಗೆ ಪ್ರವೇಶ ನೀಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಗೋವಾಕ್ಕೆ ತೆರಳಬೇಕಾದರೆ ಗಡಿಯಲ್ಲಿರುವ ಪೊಲೀಸ್ ಅಧಿಕಾರಿಗಳು ಕೊರೊನಾ ಲಸಿಕೆಯ ಪ್ರಮಾಣ ಪತ್ರ ಪರಿಶೀಲನೆ ನಡೆಸಿದ ಬಳಿಕವೇ ಗಡಿಯೊಳಗೆ ಬಿಡುತ್ತಿದ್ದಾರೆ. ಇಲ್ಲದಿದ್ದರೆ ಪ್ರವೇಶವಿಲ್ಲ. ಅನಿವಾರ್ಯವಿದ್ದರೆ ಆರ್‌ಟಿ- ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಗೋವಾದಿಂದ ಕರ್ನಾಟಕಕ್ಕೆ ಬರುವವರಿಗೂ ಇದೇ ನಿಮಯಗಳ ಪಾಲನೆ ಮಾಡಲಾಗುತ್ತಿದೆ.

 ಆರಂಭವಾದ ಪ್ರವಾಸಿಗರ ಆಗಮನ

ಆರಂಭವಾದ ಪ್ರವಾಸಿಗರ ಆಗಮನ

ಗಡಿ ನಿರ್ಬಂಧದ ಸಂದರ್ಭದಲ್ಲಿ ಕಾರವಾರ- ಗೋವಾ ಗಡಿಯಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಬಾರ್‌ಗಳು ಕಾರವಾರದ ಮದ್ಯ ಪ್ರಿಯರು, ಪ್ರವಾಸಿಗರಿಲ್ಲದೇ ನಷ್ಟದಲ್ಲಿ ಬಾಗಿಲು ಮುಚ್ಚಿವೆ. ಅಲ್ಲದೆ ಸದ್ಯ ಲಸಿಕೆ ಪಡೆದವರಿಗೆ ಪ್ರವೇಶ ಕಲ್ಪಿಸಿ ನಿಯಮ ಸಡಿಲಿಸಿದರೂ ಸಹ, ಬಾರ್ ಮಾಲೀಕರು ನಷ್ಟದ ಭೀತಿಯಿಂದ ಮದ್ಯದಂಗಡಿ ಬಾಗಿಲು ತೆರೆಯಲು ಮುಂದಾಗುತ್ತಿಲ್ಲ. ಬೆರಳೆಣಿಕೆಯಷ್ಟು ಬಾರ್ ಮಾತ್ರ ಬಾಗಿಲು ತೆರಿದಿವೆ.

ಕೊರೊನಾ ನಿಯಮಗಳನ್ನು ಎಲ್ಲೆಡೆ ಸಡಿಲಿಕೆ ಮಾಡಿದ ಬಳಿಕ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಗೋವಾದತ್ತ ಕೂಡ ತೆರಳುತ್ತಿದ್ದಾರೆ. ಇದರಿಂದ ಪ್ರವಾಸೋದ್ಯಮ ಕ್ಷೇತ್ರ ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿದೆ. ಬೇರೆ ಬೇರೆ ಜಿಲ್ಲೆಯವರು ಗೋವಾಕ್ಕೆ ತೆರಳಲು ಎರಡು ಡೋಸ್ ಲಸಿಕೆ ಕಡ್ಡಾಯವಾಗಿದೆ. ಇಲ್ಲದಿದ್ದರೆ ಗಡಿಯಲ್ಲೇ ಇರುವ ಕೋವಿಡ್ ತಪಾಸಣಾ ಕೇಂದ್ರದಲ್ಲಿ ಕೊರೊನಾ ಆ್ಯಂಟಿಜನ್ ತಪಾಸಣೆ ಮಾಡಿಸಿಕೊಂಡು ಗಡಿ ಪ್ರವೇಶ ಮಾಡಬೇಕು. ನಿಯಮಗಳನ್ನು ಕೊಂಚ ಸಡಿಲಿಕೆ ಮಾಡಿದ್ದರಿಂದ ಗೋವಾದತ್ತ ಪ್ರವಾಸಿಗರು ತೆರಳುತ್ತಿದ್ದರಿಂದ ಇಲ್ಲಿನ ಬಾರ್, ರೆಸ್ಟೋರೆಂಟ್‌ಗಳ ವ್ಯವಹಾರದಲ್ಲೂ ಚೇತರಿಕೆ ಕಾಣುವ ಸಾಧ್ಯತೆಗಳಿವೆ.

Recommended Video

ನಾಯಕತ್ವ ಬಿಟ್ರೂ RCB ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ವಿರಾಟ್ | Oneindia Kannada

English summary
Goa- Karawr border's Liquor Shops have been closed due to the lack of tourists from various parts of the state, including Uttara Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X