ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಟಾದಲ್ಲಿ ‘ಲೈಫ್ ಲೈನ್ ಎಕ್ಸ್‌ಪ್ರೆಸ್‌', 20 ದಿನಗಳ ಕಾಲ ಉಚಿತ ಚಿಕಿತ್ಸೆ

By Sachhidananda Acharya
|
Google Oneindia Kannada News

ಕಾರವಾರ, ಅಕ್ಟೋಬರ್ 30: ದೇಶದ ಪ್ರಖ್ಯಾತ ಸಂಚಾರಿ ರೈಲು ಆಸ್ಪತ್ರೆ 'ಲೈಫ್ ಲೈನ್ ಎಕ್ಸ್‌ಪ್ರೆಸ್‌' ಉತ್ತರ ಕನ್ನಡ ಜಿಲ್ಲೆಯ ಕುಮಟಾಗೆ ಆಗಮಿಸಿದೆ. ಇಂದು ಕುಮಟಾ ರೈಲು ನಿಲ್ದಾಣಕ್ಕೆ ಆಗಮಿಸಿದ 'ಲೈಫ್ ಲೈನ್ ಎಕ್ಸ್‌ಪ್ರೆಸ್‌'ಗೆ ಕೇಂದ್ರ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಸ್ವಾಗತ ಕೋರಿದರು.

ಎಲ್ಲಾ ರೈಲುಗಳಲ್ಲಿ ಆಕ್ಸಿಜನ್ ಸಿಲಿಂಡರ್ ಕಡ್ಡಾಯ : ಸುಪ್ರಿಂ ಕೋರ್ಟ್ಎಲ್ಲಾ ರೈಲುಗಳಲ್ಲಿ ಆಕ್ಸಿಜನ್ ಸಿಲಿಂಡರ್ ಕಡ್ಡಾಯ : ಸುಪ್ರಿಂ ಕೋರ್ಟ್

ಅ.31ರಿಂದ ನ.19ರವರೆಗೆ 20 ದಿನಗಳ ಕಾಲ ಈ ಸಂಚಾರಿ ರೈಲು ಕುಮಟಾ ರೈಲ್ವೆ ನಿಲ್ದಾಣದಲ್ಲಿ ಇರಲಿದೆ. ಈ ಅವಧಿಯಲ್ಲಿ ದೇಶದ ಸುಪ್ರಸಿದ್ಧ ತಜ್ಞ ವೈದ್ಯರು ಶುಲ್ಕ ರಹಿತ ತಪಾಸಣೆ ಜತೆಗೆ ಚಿಕಿತ್ಸೆಯನ್ನೂ ನೀಡಲಿದ್ದಾರೆ. ಅಗತ್ಯವಿದ್ದಲ್ಲಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗುತ್ತದೆ.

Lifeline Express offers treatment at Kumata station till November 19

ಈ ಸೇವೆ ಅವಶ್ಯವಿರುವ ಬಡವರ್ಗ ಹಾಗು ಅಶಕ್ತ ವರ್ಗದ ಜನರಿಗೆ ವರದಾನವಾಗಿದೆ. ಹಲವು ರೋಗಗಳಿಗೆ ಈ 'ಲೈಫ್ ಲೈನ್ ಎಕ್ಸ್‌ಪ್ರೆಸ್‌'ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನೀಡಲಾಗುವ ಚಿಕಿತ್ಸೆಗಳ ಪಟ್ಟಿ ಈ ಕೆಳಗಿನಂತಿದೆ.

ಈ ಎಲ್ಲ ತಪಾಸಣೆ ಮತ್ತು ಹೆಚ್ಚಿನ ಚಿಕಿತ್ಸೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕುಮಟಾದಲ್ಲಿರುವ ಭಾರತೀಯ ವೈದ್ಯಕೀಯ ಸಂಘ, ರೋಟರಿ ಲಯನ್ಸ್ ಸಂಸ್ಥೆ, ಜಿಲ್ಲಾ ವೈದ್ಯಕೀಯ ಪ್ರಕೋಷ್ಠಗಳನ್ನು (9448206380) ಸಂಪರ್ಕಿಸಬಹುದಾಗಿದೆ.

English summary
Lifeline Express, the hospital on wheels of Impact India Foundation, stationed at Kumta Railway Station in Uttara Kannada district. It will offer free consultation, treatment and surgeries in various specialties from October 31 to November 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X