ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉದ್ಯಮಿಗೆ ಜೀವ ಬೆದರಿಕೆ: ಭಟ್ಕಳದ ಉಗ್ರಗಾಮಿ ಪತ್ನಿಯ ಬಂಧನ!

|
Google Oneindia Kannada News

ಕಾರವಾರ, ಅಕ್ಟೋಬರ್ 22: ಪದೇಪದೇ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸುದ್ದಿಯಾಗುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಶಿವಮೊಗ್ಗ ಜಿಲ್ಲೆಯ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳದಲ್ಲಿ ಉಗ್ರಗಾಮಿಯ ಪತ್ನಿಯನ್ನು ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭಟ್ಕಳದ ಜಾಲಿ ಕ್ರಾಸ್ ನಿವಾಸಿ, ಉಗ್ರಗಾಮಿ ಸದ್ದಾಂ ಹುಸೇನ್ ಪತ್ನಿ ಸಾಯಿರಾಳನ್ನು ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸುಮಾರು ಹದಿನೈದು ದಿನದ ಮುನ್ನ ಶಿವಮೊಗ್ಗ ಮೂಲದ ಶರತ್ ಎಂಬ ಉದ್ಯಮಿಗೆ ಅಪರಿಚಿತರಿಂದ ಜೀವ ಬೆದರಿಕೆಯ ಕರೆ ಬಂದಿತ್ತು. ಹೆಬ್ಬೆಟ್ ಮಂಜನ ಹೆಸರಿನಲ್ಲಿ ಉದ್ಯಮಿಗೆ ಆನ್‌ಲೈನ್ ಕರೆ ಮಾಡಿದ್ದ ದುಷ್ಕರ್ಮಿಗಳು, ಜೀವ ಬೆದರಿಕೆಯೊಡ್ಡಿದ್ದರು.

ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ದುಷ್ಕರ್ಮಿಗಳು ಹೆದರಿಸಿದ್ದರು. ದುಷ್ಕರ್ಮಿಗಳ ಕರೆಗೆ ಹೆದರಿಕೊಂಡು ಉದ್ಯಮಿ ಶರತ್ ಈ ಹಿಂದೆ ಸುಮಾರು 1 ಲಕ್ಷ ರೂ.ವರೆಗೆ ಹಣ ವರ್ಗಾವಣೆ ಮಾಡಿದ್ದರು. ಆದರೆ, ಮತ್ತಷ್ಟು ಹಣಕ್ಕಾಗಿ ಟಾರ್ಚರ್ ಕೊಟ್ಟಾಗ ಉದ್ಯಮಿ ಪೊಲೀಸರ ಮೊರೆ ಹೋಗಿದ್ದರು. ದುಷ್ಕರ್ಮಿಗಳು ಹಣ ವರ್ಗಾವಣೆ ಮಾಡಲು ನೀಡಿದ್ದ ಖಾತೆಯನ್ನು ಪರಿಶೀಲಿಸಿದಾಗ ಭಟ್ಕಳದ ಲಿಂಕ್ ಬೆಳಕಿಗೆ ಬಂದಿತ್ತು.

Karwar: Life Threat To Businessman: Bhatkals Militant Wife Arrested By Shivamogga Police

ಹಣ ವರ್ಗಾವಣೆಗೆ ದುಷ್ಕರ್ಮಿಗಳು ಭಟ್ಕಳದ ಸಾಯಿರಾಳ ಖಾತೆಯ ವಿವರ ನೀಡಿದ್ದರು. ಜೀವ ಭಯದಿಂದ ದುಷ್ಕರ್ಮಿಗಳು ನೀಡಿದ್ದ ಸಾಯಿರಾಳ ಬ್ಯಾಂಕ್ ಖಾತೆಗೆ ಉದ್ಯಮಿಯು ಹಣ ವರ್ಗಾವಣೆ ಮಾಡಿದ್ದ. ಖಾತೆಯ ಮಾಹಿತಿ ಆಧರಿಸಿ ತನಿಖೆ ಪ್ರಾರಂಭಿಸಿದ್ದ ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು, ಖಾತೆಯ ಪಕ್ಕಾ ಮಾಹಿತಿ ಪಡೆದು ಭಟ್ಕಳದ ಸಾಯಿರಾಳನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗದಿಂದ ಭಟ್ಕಳಕ್ಕೆ ಬಂದಿದ್ದ ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು, ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ದಿದ್ದಾರೆ. ಪ್ರಸ್ತುತ ಮಹಿಳೆಗೂ ಹಾಗೂ ಜೀವ ಬೆದರಿಕೆ ನೀಡಿದ ದುಷ್ಕರ್ಮಿಗಳಿರುವ ಸಂಬಂಧದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮುಂದುವರಿದ ತನಿಖೆ
ಇನ್ನು ಶಿವಮೊಗ್ಗದ ಉದ್ಯಮಿಗೆ ಬೆಂಗಳೂರಿನಿಂದ ಆನ್‌ಲೈನ್ ಕರೆ ಹೋಗಿತ್ತೆನ್ನಲಾಗಿದ್ದು, ಈ ಬಗ್ಗೆ ಪೊಲೀಸರ ಬಲವಾದ ಸಂಶಯದಿಂದ ತಂಡ ರಚಿಸಿ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಉದ್ಯಮಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ. ಪ್ರಕರಣದ ಹಿಂದೆ ಬೃಹತ್ ಜಾಲವಿರುವುದರಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಯಾರು ಸದ್ದಾಂ ಹುಸೇನ್?
2015ರಲ್ಲಿ ಬೆಂಗಳೂರಿನ ಪುಲಕೇಶಿ ನಗರ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಬ್ ಬ್ಲಾಸ್ಟ್ ಆರೋಪಿಯಾಗಿರುವ ಉಗ್ರಗಾಮಿ ಸದ್ದಾಂ ಹುಸೇನ್, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಈತ 35 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿ ನಗರ ವ್ಯಾಪ್ತಿಯಲ್ಲಿ ಕುಟುಂಬ ಸಮೇತ ಮನೆ ಮಾಡಿಕೊಂಡು ವಾಸಿಸುತ್ತಿದ್ದ.

ಸ್ಥಳೀಯವಾಗಿ ಗುಜರಿ ವ್ಯಾಪಾರಿಯಂತೆ ಗುರುತಿಸಿಕೊಂಡಿದ್ದ ಈತ, ಬ್ಲಾಸ್ಟಿಂಗ್‌ಗೆ ಬಾಂಬ್ ತಯಾರಿಸಲು ಜಿಲೆಟಿನ್‌ಗಳನ್ನು ಪೂರೈಸುತ್ತಿದ್ದ. ಈ ಆರೋಪದ ಮೇರೆಗೆ ಸಿಸಿಬಿ ಪೊಲೀಸರು 2015ರಲ್ಲಿ ಭಟ್ಕಳದಲ್ಲಿ ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಉಗ್ರ ಸಂಘಟನೆಗಳ ಸಂಬಂಧದ ಬಗ್ಗೆ‌ ಬಾಯ್ಬಿಟ್ಟಿದ್ದ.

ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸದ್ದಾಂ ಹುಸೇನ್ ಕಂಬಿ ಎಣಿಸುತ್ತಿದ್ದಾನೆ. ಸದ್ದಾಂಗೆ ಪತ್ನಿ ಸಾಯಿರಾ ಹಾಗೂ ಮೂವರು ಮಕ್ಕಳಿದ್ದರು. ತಂದೆ, ತಾಯಿ, ತಂಗಿಯರು ಕೂಡ ಭಟ್ಕಳದಲ್ಲೇ ವಾಸ ಮಾಡುತ್ತಿದ್ದಾರೆ.

Recommended Video

ಪಾಕಿಸ್ತಾನದ ಈ ಆಟಗಾರರ ಮೇಲೆ ಒಂದು ಕಣ್ಣಿಡಿ | Oneindia Kannada

English summary
Shivamogga cyber crime police have arrested the wife of a militant in Bhatkal in connection with a life-threatening case of Shivamogga district-based businessman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X