ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರನೇ ಬಾರಿ ಚುನಾವಣಾ ಅಖಾಡಕ್ಕೆ ಇಳಿದ ‘ಲೋಕಲ್ ಎಂಎಲ್‌ಎ ಲೀಲಾವತಿ’

|
Google Oneindia Kannada News

ಕಾರವಾರ, ಡಿಸೆಂಬರ್ 17: ಬರೋಬ್ಬರಿ ಐದು ಬಾರಿ ಗ್ರಾಮ ಪಂಚಾಯತಿಗೆ ಸದಸ್ಯರಾಗಿ ಆಯ್ಕೆಯಾಗಿರುವ ವೃದ್ಧೆಯೊಬ್ಬರು ಇದೀಗ ಆರನೇ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಅಂಕೋಲಾ ತಾಲ್ಲೂಕಿನ ಮಂಜುಗುಣಿ ಗ್ರಾಮದ ವೃದ್ಧೆ ಲೀಲಾವತಿ ನಾಯ್ಕ ಆರನೇಯ ಬಾರಿಗೆ ಲೋಕಲ್ ಅಖಾಡದಲ್ಲಿ ಸ್ಪರ್ಧೆಗಿಳಿದಿದ್ದಾರೆ. 1993ರಲ್ಲಿ ಮೊದಲ ಬಾರಿಗೆ ಮಂಜುಗುಣಿ ಪಂಚಾಯಿತಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಸಚಿವ ಶಿವರಾಮ್ ಹೆಬ್ಬಾರ್‌ಗೆ ಪ್ರತಿಷ್ಠೆಯಾದ ಲೋಕಲ್ ಫೈಟ್!ಸಚಿವ ಶಿವರಾಮ್ ಹೆಬ್ಬಾರ್‌ಗೆ ಪ್ರತಿಷ್ಠೆಯಾದ ಲೋಕಲ್ ಫೈಟ್!

ಇದಾದ ಬಳಿಕ ಇದುವರೆಗೆ ಸತತ ಐದು ಬಾರಿಯೂ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದು, ಒಮ್ಮೆ ಪಂಚಾಯಿತಿ ಉಪಾಧ್ಯಕ್ಷೆಯಾಗಿ, ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.

 Karwar: Leelavati Who Is Contesting For The Sixth Time Consecutive Gram Panchayat Election

ಪಂಚಾಯತಿ ಸದಸ್ಯೆಯಾಗಿ ತಮ್ಮ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸಿಕೊಂಡು ಬಂದಿದ್ದು, ಇದರಿಂದಾಗಿ ಗ್ರಾಮದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಸಹ ಗಳಿಸಿಕೊಂಡು 'ಲೋಕಲ್ ಎಂಎಲ್‌ಎ' ಎನಿಸಿಕೊಂಡಿದ್ದಾರೆ. ಈ ಬಾರಿ ಸಹ ಮತ್ತೊಮ್ಮೆ ಪಂಚಾಯತಿ ಅಖಾಡಕ್ಕೆ ಇಳಿದಿರುವ ಲೀಲಾವತಿ ಗ್ರಾಮದಲ್ಲಿ ಆಗಬೇಕಾಗಿರುವ ಸಾಕಷ್ಟು ಕೆಲಸಗಳು ಬಾಕಿ ಉಳಿದುಕೊಂಡಿದ್ದು, ಮತ್ತೆ ಆಯ್ಕೆಯಾದಲ್ಲಿ ಅವುಗಳನ್ನು ಪೂರೈಸುವ ಗುರಿ ಇಟ್ಟುಕೊಂಡಿದ್ದಾರೆ.

ಇನ್ನು ಹೆಚ್ಚಿನ ಅಕ್ಷರಾಭ್ಯಾಸ ಪಡೆಯದ ಲೀಲಾವತಿ ಮೂರನೇ ತರಗತಿವರೆಗೆ ಓದಿದ್ದಾರೆ. ಈ ಹಿಂದೆ ಬೆಳಂಬಾರ ಗ್ರಾಮ ಪಂಚಾಯತಿ ಇದ್ದಾಗ 1993ರಲ್ಲಿ ಮಂಜುಗುಣಿ ಭಾಗದ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 2015ರಲ್ಲಿ ಊರ ಹತ್ತಿರವೇ ಹೊನ್ನೆಬೈಲ್ ಗ್ರಾಮ ಪಂಚಾಯತಿ ಆಗುವಲ್ಲಿ ಈಕೆಯ ಶ್ರಮ ಕೂಡ ಇದೆ ಎಂದು ಸ್ಥಳೀಯರು ಹೇಳುತ್ತಾರೆ.

 Karwar: Leelavati Who Is Contesting For The Sixth Time Consecutive Gram Panchayat Election

ಗ್ರಾಮಕ್ಕೆ ಬೇಕಾಗುವ ರಸ್ತೆ, ವಿದ್ಯುತ್, ಬಸ್ ವ್ಯವಸ್ಥೆ ಸೇರಿದಂತೆ ಊರ ನಾಗರೀಕರ ಬೇಡಿಕೆಗಳಿಗೆ ಈಕೆ ಸ್ಪಂದಿಸಿದ ಕಾರಣಕ್ಕೆ ಊರಲ್ಲಿಯೇ ಲೀಲಾವತಿ ಅಚ್ಚು ಮೆಚ್ಚಿನವಳಾಗಿದ್ದಾರೆ. ಗ್ರಾಮಕ್ಕೆ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಸದಸ್ಯರು ಬರುವುದು ಅಪರೂಪವೇ ಆಗಿದ್ದು, ಗ್ರಾಮಸ್ಥರ ಬಹುತೇಕ ಸಮಸ್ಯೆಗಳಿಗೆ ಲೀಲಾವತಿ ನೆರವಾಗಿದ್ದಾರೆ. ಹೀಗಾಗಿ ತಮ್ಮ "ಎಂಎಲ್‌ಎ ಲೀಲಾವತಿ' ಈ ಬಾರಿಯೂ ಗೆಲುವು ಸಾಧಿಸುತ್ತಾರೆ ಎನ್ನುತ್ತಾರೆ ಸ್ಥಳೀಯರು.

Recommended Video

ಭಾರತದಲ್ಲಿ ಅತಿ ಹೆಚ್ಚು ಮದ್ಯಪ್ರಿಯರು ಇರುವುದು ಯಾವ ರಾಜ್ಯದಲ್ಲಿ | Oneindia Kannada

ಇನ್ನು ಐದು ಬಾರಿ ಗ್ರಾಮ ಪಂಚಾಯತಿ ಸದಸ್ಯೆಯಾದರೂ ಸ್ವಂತ ಮನೆ ಹೊಂದಿಲ್ಲದ ಲೀಲಾವತಿ ಚಿಕ್ಕದಾದ ಮನೆಯಲ್ಲಿಯೇ ವಾಸವಾಗಿದ್ದಾರೆ. ಯಾವುದೇ ಸ್ವಾರ್ಥ ಹೊಂದದೇ ಗ್ರಾಮದವರಿಗೆ ಸಿಗುವ ಯೋಜನೆಗಳನ್ನು ತಲುಪಿಸುವ ಮೂಲಕ ನಿಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ ಅನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

English summary
An elderly woman, who has been elected to the five-time Gram Panchayath, is now contesting the elections for the sixth time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X