• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭೂಕುಸಿತ ಅಧ್ಯಯನ ಸಮಿತಿ ವರದಿ ಸಲ್ಲಿಕೆ: ಶಿಫಾರಸುಗಳು

By ಕಾರವಾರ ಪ್ರತಿನಿಧಿ
|

ಕಾರವಾರ, ಏಪ್ರಿಲ್ 01; ಕರ್ನಾಟಕದ ಮಲೆನಾಡು ಹಾಗೂ ಕರಾವಳಿಯಲ್ಲಿ ನಡೆಯುತ್ತಿರುವ ಭೂಕುಸಿತಗಳನ್ನು ಅಧ್ಯಯನ ಮಾಡಿ, ಪರಿಹಾರ ಸೂಚಿಸುವ ಉದ್ದೇಶಕ್ಕಾಗಿ ಸರ್ಕಾರ ರಚಿಸಿದ್ದ ಉನ್ನತ ಅಧ್ಯಯನ ಸಮಿತಿಯು ಅಂತಿಮ ವರದಿಯನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಸಲ್ಲಿಕೆ ಮಾಡಿದೆ.

ಗುರುವಾರ ಗೃಹ ಕಛೇರಿ 'ಕೃಷ್ಣಾ'ದಲ್ಲಿ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹಾಗೂ ತಜ್ಞ ಸದಸ್ಯರು ವರದಿ ಸಲ್ಲಿಸಿದರು. ಭೂಕುಸಿತವಾದ ಪ್ರದೇಶ, ಭೂಕುಸಿತಕ್ಕೆ ಕಾರಣಗಳು ಹಾಗೂ ಇದನ್ನು ತಡೆಗಟಗ್ಟುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿಯಲ್ಲಿ ಹೇಳಲಾದ ಪ್ರಮುಖ ಅಂಶಗಳನ್ನು ಅನಂತ ಹೆಗಡೆ ಅಶೀಸರ ವಿವರಿಸಿದರು.

ಗಜಗಿರಿ ಬೆಟ್ಟ ಭೂಕುಸಿತ ಪ್ರದೇಶ ಪರಿಶೀಲಿಸಿದ ಕೇಂದ್ರ ತಂಡ

ವರದಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು, "ಮಲೆನಾಡು ಹಾಗೂ ಕರಾವಳಿಯಲ್ಲಿ ಭೂಕುಸಿತವಾಗದಂತೆ ತಡೆಯಲು ಬೇಕಾದ ಎಲ್ಲಾ ಕ್ರಮಗಳನ್ನು ಆದ್ಯತೆಯಲ್ಲಿ ಕೈಗೊಳ್ಳುವುದಾಗಿ" ಹೇಳಿದರು.

ಶಿವಮೊಗ್ಗ; ತೀವ್ರತರದ ಗುಡ್ಡ ಕುಸಿತ ಸಾಧ್ಯತೆ; ಸ್ಥಳಾಂತರಗೊಳ್ಳಲು ಸೂಚನೆ

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಡಾ. ಜಿ. ಎಸ್. ಶ್ರೀನಿವಾಸ ರೆಡ್ಡಿ, ಡಾ. ಮಾರುತಿ, ಡಾ. ಟಿ. ವಿ. ರಾಮಚಂದ್ರ, ಡಾ. ಸಿ. ವಿ. ರಾಮನ್, ಡಾ. ಕೇಶವಕೊರ್ಸೆ ಮುಂತಾದವರಿದ್ದರು.

ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿಯುವ ಸಂಪ್ರದಾಯ ಮುಂದುವರಿಕೆ

ಮಲೆನಾಡು, ಕರಾವಳಿಯಲ್ಲಿ ಭೂ ಕುಸಿತ

ಮಲೆನಾಡು, ಕರಾವಳಿಯಲ್ಲಿ ಭೂ ಕುಸಿತ

ಮಲೆನಾಡು, ಕರಾವಳಿ ಪ್ರದೇಶದಲ್ಲಿ ಕಳೆದ 3 ವರ್ಷಗಳಲ್ಲಿ ನಡೆದಿರುವ ಭಾರಿ ಭೂಕುಸಿತಗಳು, ಪ್ರಾಣಹಾನಿ ಆಗಿರುವ ಹಿನ್ನೆಲೆಯಲ್ಲಿ ಭೂ ಕುಸಿತ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು ಇತ್ಯಾದಿ ಕುರಿತು ಅಧ್ಯಯನ ಸಮಿತಿಯನ್ನು ಸರ್ಕಾರ 2020ರ ಏಪ್ರಿಲ್‌ನಲ್ಲಿ ರಚಿಸಿತ್ತು. ಈ ಅಧ್ಯಯನ ಸಮಿತಿ ಭೂ ಕುಸಿತವಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿತ್ತು. ಕಣಿವೆಗಳ ಕುಸಿತ, ಜೀವಹಾನಿಯಾದ ಹಳ್ಳಿಗಳಿಗೆ ಭೇಟಿ, ಕಣಿವೆಯ ಹೊಲ-ತೋಟಗಳ ನಾಶ ಪರಿಶೀಲನೆ, ಸ್ಥಳೀಯ ಆಡಳಿತ ಕೈಗೊಂಡ ಕ್ರಮ, ಭೂ ಕುಸಿತಕ್ಕೆ ಕಾರಣಗಳು, ಕೈಗೊಳ್ಳಬೇಕಾದ ಪ್ರತಿಬಂಧಕ ಕ್ರಮಗಳು, ನೀತಿ ನಿರೂಪಣೆಯಲ್ಲಿ ಆಗಬೇಕಾದ ಬದಲಾವಣೆ, ಮುಂತಾದ ವಿಷಯಗಳ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸಿತ್ತು. ಸ್ಥಳೀಯ ರೈತರು, ಜನರು, ಅಧಿಕಾರಿಗಳು ಸಂಘ ಸಂಸ್ಥೆ, ಜನಪ್ರತಿನಿಧಿಗಳು, ಹಲವು ತಜ್ಞರು ನೀಡಿರುವ ವರದಿಗಳ ಅಭಿಪ್ರಾಯ ಪಡೆದು ತಂಡ ವರದಿ ರಚಿಸಿದೆ.

ಸಮಿತಿಯಿಂದ ಕ್ರಿಯಾಶೀಲ ಕಾರ್ಯ

ಸಮಿತಿಯಿಂದ ಕ್ರಿಯಾಶೀಲ ಕಾರ್ಯ

"ಕಳೆದ 3 ವರ್ಷಗಳಿಂದ ಭೂ ಕುಸಿತ ಮಲೆನಾಡಿನಲ್ಲಿ ವ್ಯಾಪಕವಾಗಿ ಹಾನಿ ಮಾಡಿದೆ. ಈ ಕುರಿತು ಅಧ್ಯಯನ ಮಾಡಲು ಅನಂತ ಹೆಗಡೆ ಅಶೀಸರ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ನೇಮಕ ಮಾಡಿದ್ದೆವು. ಇದೀಗ ತಜ್ಞರ ಸಮಿತಿ ವರದಿ ಸಲ್ಲಿಸಿದೆ. ಎಲ್ಲೆಡೆ ತಿರುಗಾಟ ಮಾಡಿದ್ದಾರೆ, ಸಮೀಕ್ಷೆ ನಡೆಸಿದ್ದಾರೆ, ಸಮಿತಿ ಬಹಳ ಉತ್ತಮವಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದೆ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

"ಭೂ ಕುಸಿತ ತಡೆಗಟ್ಟಲು ಹಲವು ವೈಜ್ಞಾನಿಕ ಸಲಹೆ ನೀಡಿದ್ದೀರಿ. ನೀವು ಹಿಂದೆ ನೀಡಿದ ಮಧ್ಯಂತರ ವರದಿಯಲ್ಲೂ ನಮ್ಮನ್ನು ಎಚ್ಚರಿಸಿದ್ದೀರಿ. ಪುನಃ ಮಳೆಗಾಲ ಬರಲಿದೆ. ಭೂ ಕುಸಿತಗಳು ಆಗಬಹುದು. ವರದಿ ಆಧರಿಸಿ ಪ್ರತಿಬಂಧಕ ಕ್ರಮಕೈಗೊಳ್ಳಲು ಕಂದಾಯ ಇಲಾಖೆ, ವಿಪತ್ತು ನಿರ್ವಹಣಾ ಇಲಾಖೆ ವಿಶೇಷ ಗಮನ ನೀಡಬೇಕು ಎಂದು ಆದೇಶಿಸುತ್ತೇನೆ" ಎಂದರು.

ಭೂ ಕುಸಿತ ತಡೆಯಲು ಕ್ರಮಗಳು

ಭೂ ಕುಸಿತ ತಡೆಯಲು ಕ್ರಮಗಳು

"ಕೇಂದ್ರ ಸರ್ಕಾರದ ಜಿ. ಎಸ್. ಐ ಲ್ಯಾಂಡ್ ಸ್ಲಿಪ್ ಯೋಜನೆಯಲ್ಲಿ ನಮ್ಮ ರಾಜ್ಯವನ್ನು ಸೇರ್ಪಡೆ ಮಾಡುವಂತೆ ಮನವಿ ಮಾಡುತ್ತೇವೆ. ಭೂ ಕುಸಿತ ಪರಿಹಾರ, ಪುನರ್ ವಸತಿ ಬಗ್ಗೆ ಮುಖ್ಯವಾದ ಶಿಫಾರಸು ನೀಡಿದ್ದೀರಿ. ಪ್ರಾಣಹಾನಿ, ಆಸ್ತಿ-ಪಾಸ್ತಿ ಹಾನಿ, ಪರಿಹಾರ ಪುನರ್‌ವಸತಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ. ಈ ಶಿಫಾರಸು ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರ ನೀಡುವ ಮಿಟಿಗೇಶನ್ ಫಂಡ್ ಮೂಲಕ ಭೂ ಕುಸಿತ ಪ್ರದೇಶ ಪುನರುತ್ಥಾನಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಲಿದೆ" ಎಂದು ಮುಖ್ಯಮಂತ್ರಿಗಳು ಹೇಳಿದರು.

ವರದಿ ಮುಖ್ಯಾಂಶಗಳು

ವರದಿ ಮುಖ್ಯಾಂಶಗಳು

* ಭೂ ಕುಸಿತ ಆಗಲಿರುವ ಪ್ರದೇಶ, ಈಗಾಗಲೇ ಭೂ ಕುಸಿತ ಆಗಿರುವ ಪ್ರದೇಶ, ಬರಲಿರುವ ವರ್ಷದಲ್ಲಿ ಭೂ ಕುಸಿತ ಸಾಧ್ಯತೆ ಪ್ರದೇಶಗಳನ್ನು ಎನ್‌ಆರ್‌ಎಸ್ಸಿ & ಜಿ.ಎಸ್.ಐ ಸಂಸ್ಥೆಗಳು ಗುರುತಿಸಿದ್ದು ರಾಜ್ಯ ಕೆ.ಎಸ್.ಎನ್‌ಡಿ.ಎಂ.ಸಿ 23 ತಾಲೂಕುಗಳನ್ನು ಗುರುತಿಸಿದೆ.

* ಅತಿಯಾದ ಮಳೆ ಮತ್ತು ಅರಣ್ಯ ನಾಶ ಎಂದು ಹೇಳಬಹುದು ತಾಂತ್ರಿಕ ಕಾರಣ ಹಲವು ಇವೆ. ವರದಿಯಲ್ಲಿ ವಿವರವಾಗಿ ಹೇಳಲಾಗಿದೆ. ಭಾರಿ ಭೂಕುಸಿತ ಪ್ರಕರಣಗಳನ್ನು ನೈಸರ್ಗಿಕ ವಿಪತ್ತು ವ್ಯಾಖ್ಯೆ ಅಡಿಯಲ್ಲಿ ತರಬೇಕು. ಡಿಆರ್‌ಎಫ್ ಫಂಡ್ ಡಿಎಂ.ಎಫ್ ಫಂಡ್ ಬಳಸಲು ಸಾಧ್ಯವಾಗುವಂತೆ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬೇಕು.

* ಜಿಲ್ಲಾ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ಬಲಗೊಳಿಸಬೇಕು. ಭೂಕುಸಿತ ನಿಯಂತ್ರಣ ಮಾರ್ಗೋಪಾಯಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಬೇಕು. ಭೂ ಕುಸಿತ ಸಾಧ್ಯತೆ ಇರುವ ಪ್ರದೇಶಗಳ ನಕ್ಷೆ ರಚಿಸಬೇಕು. ಮಲೆನಾಡು-ಕರಾವಳಿಯ ನೈಸರ್ಗಿಕ ಅರಣ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಸ್ಥಳೀಯ ಸಸ್ಯ ಪ್ರಬೇಧಗಳನ್ನೇ ಬೆಳೆಸಬೇಕು.

ಅವೈಜ್ಞಾನಿಕ ಕಾಮಗಾರಿ

ಅವೈಜ್ಞಾನಿಕ ಕಾಮಗಾರಿ

* ಶಿಖರ/ಇಳಿಜಾರು ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಗುಂಡಿ ತೋಡುವ ಹಾಗೂ ಕೆರೆ ನಿರ್ಮಿಸುವ ಕಾಮಗಾರಿ ಮಾಡಬಾರದು. ಹೊಳೆ, ತೊರೆ, ಕೆರೆಕೋಡಿ ಹರಿಯುವ ಜಲಮಾರ್ಗಗಳು ಹೂಳು ತುಂಬದತೆ, ಅತಿಕ್ರಮಣ ಆಗದಂತೆ ತಡೆಗಟ್ಟಬೇಕು.

* ಭೂ ಕುಸಿತ ಸಂಭಾವ್ಯ ಜಿಲ್ಲೆಗಳಲ್ಲಿ ಅನಧಿಕೃತ ಮರಕಡಿಯುವ ಯಂತ್ರಗಳು, ಭೂ ಕೊರೆತ ಯಂತ್ರ, ಸ್ಪೋಟಕ, ಭೂ ಅಗತ ಯಂತ್ರ ಇವನ್ನೆಲ್ಲ ಸೂಕ್ತ ಕಾನೂನು ಮೂಲಕ ನಿಯಂತ್ರಣಕ್ಕೆ ಒಳಪಡಿಸಬೇಕು. ಭೂ ಬಳಕೆ ಯೋಜನಾ ನಕ್ಷೆ ಸಿದ್ಧಪಡಿಸಿ ಅದರ ಆಧಾರದಲ್ಲಿ ನೆಲ-ಜಲ ನಿರ್ವಹಣೆಯ ನಿರ್ಧಾ ಕೈಗೊಳ್ಳಬೇಕು.

* ಸಂಭಾವ್ಯ ಭೂ ಕುಸಿತ ಜಿಲ್ಲೆಗಳ ಕಾವೇರಿ, ಭದ್ರಾ, ತುಂಗಾ, ಶರಾವತಿ, ಬೇಡ್ತಿ ಮುಂತಾದ ನದಿ ಕಣಿವೆಗಳ ಕಡಿದಾಗ ಗುಡ್ಡ, ಇಳಿಜಾರು ಪ್ರದೇಶವನ್ನು ಕತ್ತರಿಸಬಾರದು. ಮೇಲ್ಮಣ್ಣುಕೊಚ್ಚಿ ಹೋಗದಂತೆ, ಅತಿಕ್ರಮಣ ಆಗದಂತೆ ಕ್ರಮಬೇಕು. ಅಲ್ಲಿನ ಅರಣ್ಯಗಳಲ್ಲಿ ಮರಕಡಿತ ನಿಲ್ಲಿಸಬೇಕು.

* ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮಲೆನಾಡು ಜಿಲ್ಲೆಗಳ ಭೂ ಕುಸಿತ ಸಾಧ್ಯತೆ ಇರುವ ಪರಿಸರ ಸೂಕ್ಷ್ಮ ಪ್ರದೇಶಗಳ ಗುಡ್ಡ, ಕಣಿವೆ, ನದಿ ಪಾತ್ರದಲ್ಲಿ ಅನಧಿಕೃತ ಕ್ವಾರಿ-ಗಣಿಗಾರಿಕೆಗೆ ಅವಕಾಶ ನೀಡಬಾರದು. ಹೆದ್ದಾರಿ, ರೈಲು, ನೀರಾವರಿ ಕಾಲುವೆ, ಇತ್ಯಾದಿ ನಿರ್ಮಾಣ ಆಗಿರುವ ಪ್ರದೇಶದಲ್ಲಿ ಹೆಚ್ಚು ಭೂ ಕುಸಿತ ಆಗಿದೆ. ಘಟ್ಟ ಇಳಿಜಾರು ಪ್ರದೇಶವನ್ನು ಅವೈಜ್ಞಾನಿಕವಾಗಿ ಕತ್ತರಿಸದಂತೆ ಮಾರ್ಗದರ್ಶಿ ಸೂತ್ರ, ಆದೇಶ ಬೇಕು.

  ವಿಜಯಪುರ: ಸಚಿವ ಈಶ್ವರಪ್ಪ ಪರ ಬ್ಯಾಟಿಂಗ್ ಮಾಡಿದ ಯತ್ನಾಳ್ | Oneindia Kannada
  ವಾಣಿಜ್ಯ ಚಟುವಟಿಕೆಗಳು

  ವಾಣಿಜ್ಯ ಚಟುವಟಿಕೆಗಳು

  * ಕಣಿವೆ ಇಳಿಜಾರು ಗುಡ್ಡ ಪ್ರದೇಶದಲ್ಲಿ ಯಾವುದೇ ವಾಣಿಜ್ಯಕ ಕಟ್ಟಡ,ರೆಸಾರ್ಟ ಇತ್ಯಾದಿ ಸ್ಥಾಪಿಸುವಾಗ,ಸರ್ಕಾರಿ ಯೋಜನೆಗೆ ಭೂಮಿ ನೀಡುವಾಗ ಮೇಲ್ಮಣ್ಣಿನ ಸ್ವರೂಪ ಘಾಸಿ ಆಗದಂತೆ ಮಾರ್ಗದರ್ಶಿ ಸೂತ್ರ, ಆದೇಶ ಬೇಕು. ಘಟ್ಟ ಪ್ರದೇಶದಲ್ಲಿ ಏಕಜಾತಿ ನೆಡುತೋಪು ನಿರ್ಮಾಣ ಕೈಬಿಟ್ಟು ಸ್ಥಳೀಯ ಮಿಶ್ರ ಪ್ರಬೇಧಗಳ ಅರಣ್ಯ ಬೆಳೆಸಬೇಕು.

  * ಭೂ ಕುಸಿತವಾದ ಪ್ರದೇಶದಲ್ಲಿ ತ್ವರಿತ ಸ್ಥಳಾಂತರ, ಪರಿಹಾರ, ಪುನರ್‌ವಸತಿ, ಕಾರ್ಯ ಯೋಜನೆ ರೂಪಿಸಬೇಕು. ಸಮಗ್ರ ಪರಿಹಾರ ನೀತಿ ರೂಪಿಸಬೇಕು. ಭೂ ಕುಸಿತ ಪ್ರದೇಶ ಪುನರುತ್ಥಾನಕ್ಕೆ ಅನುದಾನ ನೀಡಬೇಕು. ಆರ್ಥಿಕ ಪ್ಯಾಕೇಜ್ ನೀಡಬೇಕು. ಕೇಂದ್ರದಿಂದ ನೀಡುವ ಮಿಟಿಗೇಶನ್ ಫಂಡ್ 1000 ಕೋಟಿಯಲ್ಲಿ 100 ಕೋಟಿ ರೂ. ಈ ಪ್ಯಾಕೇಜ್‌ಗೆ ನೀಡಬೇಕು. ಜಿಲ್ಲಾ-ತಾಲೂಕು ಮಟ್ಟದಲ್ಲಿ ಭೂ ಕುಸಿತ ನಿರ್ವಹಣಾ ಮಾರ್ಗಸೂಚಿ ಇರಬೇಕು.

  * ಜನರ ಸಹಭಾಗಿತ್ವ ಪಡೆಯುವುದು ಬಹಳ ಮುಖ್ಯ. ಭೂ ಕುಸಿತ ಸಾಧ್ಯತೆ ಇರುವ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಕೃಷಿ ಭೂಮಿ ಪರಿವರ್ತನೆಗೆ ಮಿತಿ ಹಾಕಬೇಕು. ಜಿ. ಎಸ್. ಐ ನ ಲ್ಯಾಂಡ್ ಸ್ಲಿಪ್ ಯೋಜನೆ ವ್ಯಾಪ್ತಿಗೆ ಕರ್ನಾಟಕ ಸೇರ್ಪಡೆ ಆಗಬೇಕು ಎಂದು ಕೇಂದ್ರಕ್ಕೆ ಬೇಡಿಕೆ ಸಲ್ಲಿಸಬೇಕು.

  English summary
  High level committee submitted report to Karnataka government on landslide in Malenadu and Karavali region.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X