ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಡ್ಡ ಕುಸಿತ; 345 ಜನರ ಜೀವ ಉಳಿಸಿದ ರೈಲು ಸಿಬ್ಬಂದಿಗಳು

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ 26; ಭಾರೀ ಮಳೆಯ ಕಾರಣ ರೈಲು ಹಳಿಯ ಮೇಲೆ ಗುಡ್ಡದ ಮಣ್ಣು ಜಾರಿ ಬೀಳುತ್ತಿರುವುದನ್ನು ಗಮನಿಸಿದ ರೈಲು ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ 345 ಪ್ರಯಾಣಿಕರ ಜೀವ ಉಳಿದಿದೆ. ಅಪಾಯವನ್ನು ಊಹಿಸಿದ ಸಿಬ್ಬಂದಿಗಳು ತುರ್ತು ಬ್ರೇಕ್ ಉಪಯೋಗಿಸಿ ರೈಲು ನಿಲ್ಲಿಸಿದ್ದರು.

ಜುಲೈ 23ರಂದು ಕುಲೇಮ್‌ನಿಂದ ಕ್ಯಾಸೆಲ್ ರಾಕ್ ಕಡೆಗೆ ಸಂಚಾರ ನಡೆಸುತ್ತಿದ್ದ ರೈಲಿನ ಮೇಲೆ ಗುಡ್ಡ ಕುಸಿದು ಬಿದ್ದಿತ್ತು. ರೈಲು ಹಳಿ ತಪ್ಪಿತ್ತು. ಈ ಸಮಯದಲ್ಲಿದ್ದ ರೈಲಿನಲ್ಲಿದ್ದ ಸಿಬ್ಬಂದಿಯ ಕಾರ್ಯವನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಶ್ಲಾಘಿಸಿದ್ದಾರೆ. ಉತ್ತಮ ಕಾರ್ಯವನ್ನು ಗುರುತಿಸಿ ನಗದು ಬಹುಮಾನ ಘೋಷಿಸಿದ್ದಾರೆ.

 ಭಾರಿ ಮಳೆ: ಕರ್ನಾಟಕ-ಗೋವಾ ರೈಲು ಸಂಚಾರ ಸ್ಥಗಿತ ಭಾರಿ ಮಳೆ: ಕರ್ನಾಟಕ-ಗೋವಾ ರೈಲು ಸಂಚಾರ ಸ್ಥಗಿತ

ರೈಲು ಸಂಖ್ಯೆ 01134 ಮಂಗಳೂರು ಜಂಕ್ಷನ್-ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬೈ ರೈಲಿನ ಲೋಕೋ ಪೈಲಟ್, ಸಹಾಯಕ ಲೋಕೋ ಪೈಲಟ್ ಮತ್ತು ಗಾರ್ಡ್ ಗಳ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿತ್ತು. ಲೋಕೋ ಪೈಲಟ್ ರಣ್ ಜಿತ್ ಕುಮಾರ್, ಗಾರ್ಡ್ ಶೈಲೇಂದರ್ ಕುಮಾರ್ ಸಮಯ ಪ್ರಜ್ಞೆ ಪ್ರಯಾಣಿಕರ ಜೀವ ಉಳಿಸಿತು.

ತಾಳಗುಪ್ಪದಿಂದ ರೈಲು ಸಂಚಾರ ಪುನಾರಂಭ; ಹಳಿ ಪರಿಶೀಲನೆ ತಾಳಗುಪ್ಪದಿಂದ ರೈಲು ಸಂಚಾರ ಪುನಾರಂಭ; ಹಳಿ ಪರಿಶೀಲನೆ

ಕ್ಯಾಸೆಲ್ ರಾಕ್ ಮತ್ತು ಕುಲೇಮ್ ನಡುವೆ ಇರುವ ನಿಲ್ದಾಣಗಳಾದ ಕಾರಂಜೋಲ್, ದೂಧ್ ಸಾಗರ್ ಮತ್ತು ಸೋನಾಲಿಮ್ ಗಳನ್ನು ಕೇವಲ ರೈಲು ಮಾರ್ಗದ ಮೂಲಕ ತಲುಪಬಹುದಾಗಿದ್ದು, ರಸ್ತೆ ಸಂಪರ್ಕವಿಲ್ಲ.

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜು. 27ರ ತನಕ ಮಳೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜು. 27ರ ತನಕ ಮಳೆ

ಅಂದು ನಡೆದ ಘಟನೆ ವಿವರ

ಅಂದು ನಡೆದ ಘಟನೆ ವಿವರ

ಜುಲೈ 23ರ ಬೆಳಗ್ಗೆ ಸುಮಾರು 6.10ಕ್ಕೆ ಕುಲೇಮ್‌ನಿಂದ ಕ್ಯಾಸೆಲ್ ರಾಕ್ ಕಡೆಗೆ ರೈಲು ಸಂಚಾರ ನಡೆಸುತ್ತಿತ್ತು. ದೂದ್‌ ಸಾಗರ್-ಸೋನಾಲಿಮ್ ಭಾಗದ ಬಳಿ ಮುಂಭಾಗದ ಇಂಜಿನ್ ಲೋಕೋ ಪೈಲಟ್ ರಣ್ ಜಿತ್ ಕುಮಾರ್ ಮಳೆಯಿಂದಾಗಿ ಗುಡ್ಡದಿಂದ ರೈಲು ಹಳಿಯ ಮೇಲೆ ಮಣ್ಣು ಜಾರಿ ಬೀಳುತ್ತಿರುವುದನ್ನು ಗಮನಿಸಿದರು.

ಮುಂದಿನ ಅಪಾಯ ಉಹಿಸಿದರು

ಮುಂದಿನ ಅಪಾಯ ಉಹಿಸಿದರು

ಮುಂದಿನ ಅಪಾಯವನ್ನು ಊಹಿಸಿ ಕೂಡಲೇ ತುರ್ತು ಬ್ರೇಕ್ ಮೂಲಕ ರೈಲನ್ನು ನಿಲ್ಲಿಸಿದರು. ಹಳಿ ಮೇಲೆ ಕೆಸರು ಮಿಶ್ರಿತ ಬಂಡೆಗಳು ಬಿದ್ದಿದ್ದರಿಂದ ಬ್ರೇಕ್ ಹಾಕಿದ್ದರೂ ಇಂಜಿನ್ ಹಳಿ ತಪ್ಪಿತು. ಕೂಡಲೇ ದೂದ್‌ ಸಾಗರ್ ನಿಲ್ದಾಣದ ಸ್ಟೇಷನ್ ಮಾಸ್ಟರ್‌ಗೆ ವಿಷಯ ತಿಳಿಸಿ ಹುಬ್ಬಳ್ಳಿಯ ನಿಯಂತ್ರಣ ಕಛೇರಿಗೆ ಮಾಹಿತಿ ನೀಡುವಂತೆ ಹೇಳಿದರು. ತುರ್ತು ಬ್ರೇಕ್ ಪ್ರಯೋಗ ಗಮನಿಸಿದ ರೈಲಿನ ಗಾರ್ಡ್ ಶೈಲೇಂದರ್ ಕುಮಾರ್ ರೈಲಿನ ಕೊನೆಯಲ್ಲಿರುವ ಬ್ರೇಕ್ವ್ಯಾನ್‌ನ ಹ್ಯಾಂಡ್ ಬ್ರೇಕ್ ಪ್ರಯೋಗಿಸಿ ಇಂಜಿನ್ ಹತ್ತಿರ ಹೋದರು.

ಸಿಬ್ಬಂದಿಗಳ ಸಮಯ ಪ್ರಜ್ಞೆ

ಸಿಬ್ಬಂದಿಗಳ ಸಮಯ ಪ್ರಜ್ಞೆ

ಇದೇ ಸಮಯದಲ್ಲಿ ಗಾರ್ಡ್ ಮತ್ತು ಲೋಕೋಪೈಲಟ್‌ಗಳು ಮುಂದಿನ ಮತ್ತು ಹಿಂಭಾಗದ ಇಂಜಿನ್‌ಗಳ ಸಹಾಯಕ ಲೋಕೋ ಪೈಲಟ್‌ಗಳಿಗೆ ಹಳಿಯ ಎರಡೂ ದಿಕ್ಕಿನಲ್ಲಿ ನಿಗದಿತ ಅಂತರದಲ್ಲಿ ಡೆಟೋನೇಟರ್ ಇಡುವಂತೆ ಸೂಚಿಸಿದರು. ರೈಲನ್ನು ಸರಪಳಿಯ ಮೂಲಕ ಹಳಿಗಳೊಂದಿಗೆ ಬಂಧಿಸಿ ಭದ್ರಪಡಿಸಿದರು. ಮುಂಭಾಗದ ಇಂಜಿನ್‌ ಹಿಂದಿನ ಮೊದಲ ಬೋಗಿಯ ಮೇಲೆ ಗುಡ್ಡದಿಂದ ಕೆಸರು, ಮಣ್ಣು ಬೀಳುತ್ತಿರುವುದನ್ನು ಗಮನಿಸಿ ಮೊದಲ 3 ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಬೇರೆ ಬೋಗಿಗಳಿಗೆ ಸ್ಥಳಾಂತರಿಸಿ ಈ ಮೂರು ಬೋಗಿಗಳನ್ನು ರೈಲಿನ ಉಳಿದ ಬೋಗಿಗಳಿಂದ ಪ್ರತ್ಯೇಕಿಸಿದರು.

Recommended Video

ನೆಕ್ಸ್ಟ್ CM ಯಾರು ಅಂತ ಬಿಜೆಪಿ ಹೈಕಮಾಂಡ್ ನಾಳೆ ಅನೌನ್ಸ್ ಮಾಡುತ್ತಾ? | Oneindia Kannada
ಏಕಪಥದ ಮಾರ್ಗವಿದು

ಏಕಪಥದ ಮಾರ್ಗವಿದು

ಹಿಂಭಾಗದಲ್ಲಿ ಅಳವಡಿಸಲಾಗಿದ್ದ ಬ್ಯಾಂಕಿಂಗ್ ಇಂಜಿನ್‌ಗಳ ಸಹಾಯದಿಂದ 345 ಪ್ರಯಾಣಿಕರಿದ್ದ ರೈಲನ್ನು ಕುಲೇಮ್ ನಿಲ್ದಾಣಕ್ಕೆ ಮರಳಿ ಕಳುಹಿಸಿದರು.

ಕ್ಯಾಸೆಲ್ ರಾಕ್-ಕುಲೇಮ್ ಘಟ್ಟ ಪ್ರದೇಶದ ಮಾರ್ಗವು 27 ಕಿ.ಮೀ. ಉದ್ದವಿದೆ. ಪಶ್ಚಿಮಘಟ್ಟದ ಜನವಸತಿರಹಿತ ಕಾಡಿನ ಮೂಲಕ ಸಾಗುವ ಏಕಪಥ ಮಾರ್ಗವಿದು. ಇಡೀ ಘಟ್ಟದ ಮಾರ್ಗವು ಕಡಿದಾದ ಇಳಿಜಾರು ಹೊಂದಿದೆ. ಮುಂಭಾಗದ ಜೊತೆಗೆ ರೈಲಿಗೆ ಹಿಂಭಾಗದಲ್ಲೂ ಇಂಜಿನ್ ಅಳವಡಿಸುವ ಮೂಲಕ ಹೆಚ್ಚಿನ ಶಕ್ತಿಯನ್ನು ಒದಗಿಸಲಾಗುತ್ತದೆ.

English summary
Land slide on railway track on July 23 at Kulem towards Castle Rock. Presence of mind and swift action by the loco pilot, assistant loco pilot and guard save the passengers lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X