ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ: ಬರೋಬ್ಬರಿ 19 ಕೆ.ಜಿ ತೂಕದ ಕುರುಡೆ ಮೀನು ಏಂಡಿ ಬಲೆಗೆ!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ 19: ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ವೇಳೆ ಸೋಮವಾರ ಬರೋಬ್ಬರಿ 19 ಕೆ.ಜಿ ತೂಕದ ಕುರುಡೆ ಮೀನು ಏಂಡಿ ಬಲೆಗೆ ಬಿದ್ದಿದೆ.

ಕಾರವಾರ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಈ ಅವಧಿಯಲ್ಲಿ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಸೃಷ್ಟಿಯಾಗುತ್ತಿದ್ದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೂ ಸಹ ನಿಷೇಧ ಹೇರಿದ್ದರಿಂದಾಗಿ ಯಾವುದೇ ದೋಣಿಗಳು ಸಮುದ್ರಕ್ಕೆ ಇಳಿಯುತ್ತಿಲ್ಲ.

ಆದರೆ ಸೋಮವಾರ ಮಳೆ ಕೊಂಚ ವಿರಾಮ ನೀಡಿದ ವೇಳೆಯಲ್ಲಿ ಸ್ಥಳೀಯ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದರು. ದಡದಲ್ಲಿಯೇ ನಿಂತು ಬೀಸುವ ಏಂಡಿ ಬಲೆ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರ ಬಲೆಗೆ ಭಾರೀ ಗಾತ್ರದ ಕುರುಡೆ ಮೀನು ಸಿಲುಕಿದೆ.

Karwar: Kurude Fish Weighing 19Kg Sown In Trap At Ravindranath Tagore Beach

ಬಲೆಗೆ ಸಿಲುಕಿದ ಮೀನು ಬರೋಬ್ಬರಿ 18 ಕೆ.ಜಿ 710 ಗ್ರಾಂ ತೂಕವಿದ್ದು, ಬಲೆ ಬೀಸಿದ ಮೀನುಗಾರರು ಫುಲ್ ಖುಷ್ ಆಗಿದ್ದಾರೆ. ಈ ಮೀನು ಹಿಡಿಯುತ್ತಿದ್ದಂತೆ ಅದನ್ನು ಗಮನಿಸಿದವರು ಕೆ.ಜಿಗೆ 600 ರೂಪಾಯಿ ಮೊತ್ತದಲ್ಲಿ ಒಟ್ಟೂ 8 ಸಾವಿರ ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ.

Recommended Video

ಹುಟ್ಟೋ ಮಕ್ಕಳ ಅದ್ಭುತ ಭವಿಷ್ಯಕ್ಕಾಗಿ ಗರ್ಭ ಸಂಸ್ಕಾರ | Benefits of Garbha Sanskar | Oneindia Kannada

ಸಾಮಾನ್ಯವಾಗಿ ಕುರುಡೆ ಮೀನು 20 ರಿಂದ 25 ಕೆ.ಜಿ ವರೆಗೂ ಬೆಳವಣಿಗೆ ಹೊಂದುತ್ತದೆ. ಆದರೆ ದಡದಲ್ಲಿ ಇಷ್ಟು ದೊಡ್ಡ ಪ್ರಮಾಣದ ಮೀನು ಬಲೆಗೆ ಬೀಳುವುದು ಅಪರೂಪವಾಗಿದೆ.

English summary
Kurude Fish Weighing 19Kg Sown In Trap At Rabindranath Tagore in Uttara Kannada district centre Karwar city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X