ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋಕರ್ಣ ದೇವಾಲಯ: ಪಟ್ಟಭದ್ರ ಸ್ವಹಿತಾಸಕ್ತಿಗಳಿಗೆ ಮತ್ತೆಮತ್ತೆ ಮುಖಭಂಗ

|
Google Oneindia Kannada News

ಕಾರವಾರ, ಜ 12: ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯ ಹಾಗೂ ಪರಿವಾರ ದೇವಾಲಯಗಳಿಗೆ ಸಂಬಂಧಿಸಿದಂತೆ, ನ್ಯಾಯಾಲಯದಲ್ಲಿ ಶ್ರೀರಾಮಚಂದ್ರಾಪುರಮಠಕ್ಕೆ ಮತ್ತೊಂದು ಮಹತ್ವದ ಜಯ ಲಭಿಸಿದೆ.

ಮಹಾಬಲೇಶ್ವರ ದೇವಾಲಯದ ಪಾರ್ಶ್ವದಲ್ಲಿರುವ ಆದಿಗೋಕರ್ಣದ ಪುನರ್ನಿರ್ಮಾಣಕ್ಕೆ ತಡೆ ನೀಡಬೇಕು ಎಂದು ಮಾಡಲಾಗಿದ್ದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ನ್ಯಾಯಾಲಯದ ವೆಚ್ಚವನ್ನು ಶ್ರೀಮಠಕ್ಕೆ ಸಂದಾಯ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿ ಆದೇಶ ಹೊರಡಿಸಿದೆ.

ಆದಿಗೋಕರ್ಣ ದೇವಾಲಯ ಶಿಥಿಲವಾಗಿದ್ದ ಕಾರಣ, ಶ್ರೀರಾಮಚಂದ್ರಾಪುರಮಠದ ಶ್ರೀಗಳಾದ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಂತೆ ಪುನರ್ನಿರ್ಮಾಣದ ಕಾರ್ಯವನ್ನು 2014 ರಲ್ಲಿ ಆರಂಭಿಸಲಾಗಿತ್ತು.

ಮಹಾಬಲೇಶ್ವರ ದೇವಾಲಯವನ್ನು ಮಠಕ್ಕೆ ತಕ್ಷಣ ಹಸ್ತಾಂತರಿಸಿ: ಸರ್ವೋಚ್ಛ ನ್ಯಾಯಾಲಯ ಮಹಾಬಲೇಶ್ವರ ದೇವಾಲಯವನ್ನು ಮಠಕ್ಕೆ ತಕ್ಷಣ ಹಸ್ತಾಂತರಿಸಿ: ಸರ್ವೋಚ್ಛ ನ್ಯಾಯಾಲಯ

ಅಭಿವೃದ್ಧಿಯನ್ನು ಸಹಿಸದ ಕೆಲವು ಪಟ್ಟಭದ್ರ ಸ್ವಹಿತಾಸಕ್ತಿಗಳ ಕುಮ್ಮಕ್ಕಿನಿಂದ ಶ್ರೀಮಠದ ವ್ಯವಸ್ಥೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ, ಆದಿಗೋಕರ್ಣದ ಸಂರಕ್ಷಣೆಗಾಗಿ ನಡೆಯುತ್ತಿದ್ದ ಪುನರ್ನಿರ್ಮಾಣ ಕಾರ್ಯಕ್ಕೆ ತಡೆ ನೀಡುವಂತೆ ಅರ್ಜೀದಾರರು ನ್ಯಾಯಾಲಯವನ್ನು ಆಗ್ರಹಿಸಿದ್ದರು.

ಪುರಾತತ್ವ ಇಲಾಖೆ ಹಾಗೂ ಇತರ ಅಗತ್ಯ ಅನುಮತಿಯನ್ನು ಪಡೆದುಕೊಂಡೇ ಪುನರ್ನಿರ್ಮಾಣ ಕಾರ್ಯವನ್ನು ಶ್ರೀಮಠದ ಆಡಳಿತ ವ್ಯವಸ್ಥೆ ಕೈಗೆತ್ತಿಕೊಂಡಿತ್ತಾದರೂ, ನ್ಯಾಯಾಲಯದ ಮೆಟ್ಟಿಲೇರಿ ಅಭಿವೃದ್ಧಿಗೆ ತಡೆ ತರುವ ಪ್ರಯತ್ನಗಳನ್ನು ಮಾಡಿದ್ದರು.

ಕುಮಟಾದ ಸಿವಿಲ್ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಾಲಯ

ಕುಮಟಾದ ಸಿವಿಲ್ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಾಲಯ

ಈ ಸಂಬಂಧ ವಿಚಾರಣೆ ನಡೆಸಿದ ಕುಮಟಾದ ಸಿವಿಲ್ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಾಲಯ ತಡೆ ನೀಡುವಂತೆ ಮಾಡಲಾಗಿದ್ದ ಮೂಲ ದಾವೆಯನ್ನು ತಿರಸ್ಕರಿಸುವ ಜೊತೆಗೆ ಶ್ರೀಮಠಕ್ಕೆ ನ್ಯಾಯಾಲಯದ ವೆಚ್ಚವನ್ನೂ ನೀಡುವಂತೆ ಅರ್ಜಿದಾರರಿಗೆ ಆದೇಶ ಮಾಡಿದೆ. ಆ ಮೂಲಕ, ಪಟ್ಟಭದ್ರ ಹಿತಾಶಕ್ತಿಗಳಿಗೆ ಮತ್ತೆಮತ್ತೆ ಮುಖಭಂಗವಾಗಿದೆ.

ಗೋಕರ್ಣ ದೇಗುಲ ಹಸ್ತಾಂತರದ ವೇಳೆ ಬಂದ ಫೋನ್ ಕರೆ, ಪ್ರಕ್ರಿಯೆ ಸ್ಥಗಿತ ಗೋಕರ್ಣ ದೇಗುಲ ಹಸ್ತಾಂತರದ ವೇಳೆ ಬಂದ ಫೋನ್ ಕರೆ, ಪ್ರಕ್ರಿಯೆ ಸ್ಥಗಿತ

ಆದಿಗೋಕರ್ಣದ ಪುನರ್ನಿರ್ಮಾಣ

ಆದಿಗೋಕರ್ಣದ ಪುನರ್ನಿರ್ಮಾಣ

ಆದಿಗೋಕರ್ಣದ ಪುನರ್ನಿರ್ಮಾಣಕ್ಕೆ ತಡೆಕೋರಿದವರಿಗೆ ಸಂರಕ್ಷಣೆಯ ಯಾವ ಉದ್ದೇಶವೂ ಇಲ್ಲ, ಶ್ರೀಮಠದ ಆಡಳಿತಕ್ಕೆ ತೊಂದರೆ ಕೊಡುವುದಷ್ಟೇ ಅರ್ಜಿದಾರರ ಉದ್ದೇಶವಾಗಿತ್ತು. ಶ್ರೀಮಠದ ಆಡಳಿತದ ವಿರುದ್ಧ ಇರುವ ದುರುದ್ದೇಶವೇ ಈ ಅರ್ಜಿಗೆ ಮೂಲ ಕಾರಣ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ದಿನಾಂಕ 05.12.2018 ರಂದು ಅರ್ಜಿದಾರರು ತಮ್ಮ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಸಲ್ಲಿಸಿದ್ದ ಮನವಿಯಲ್ಲಿ ಈ ದುರುದ್ದೇಶ ಸಾಬೀತಾಗಿದೆ.

ಗೋಕರ್ಣ ದೇವಾಲಯವನ್ನು ಮಠಕ್ಕೆ ಸರ್ಕಾರ ಶೀಘ್ರವಾಗಿ ಹಸ್ತಾಂತರಿಸಲಿಗೋಕರ್ಣ ದೇವಾಲಯವನ್ನು ಮಠಕ್ಕೆ ಸರ್ಕಾರ ಶೀಘ್ರವಾಗಿ ಹಸ್ತಾಂತರಿಸಲಿ

ಶ್ರೀಮಹಾಬಲೇಶ್ವರ ದೇವಾಲಯ

ಶ್ರೀಮಹಾಬಲೇಶ್ವರ ದೇವಾಲಯ

ಶ್ರೀಮಹಾಬಲೇಶ್ವರ ದೇವಾಲಯವು 2008 ರಲ್ಲಿ ಶ್ರೀಮಠಕ್ಕೆ ಪುನರ್ಹಸ್ತಾಂತರವಾದ ನಂತರ ಪ್ರತಿ ಹಂತದಲ್ಲು ಕೆಲವು ಸ್ವಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಿದ್ದು, ಗೋಕರ್ಣದ ಸಮಗ್ರ ಅಭಿವೃದ್ಧಿಗೆ ತಡೆಯುಂಟುಮಾಡುವ ಪ್ರಯತ್ನ ಮಾಡುತ್ತಿದ್ದಾರೆ. 2008 ಕ್ಕೂ ಮೊದಲು ಯಾತ್ರಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ.

ನ್ಯಾಯಾಲಯದಿಂದ ತಡೆ ತರುವ ಪ್ರಯತ್ನ

ನ್ಯಾಯಾಲಯದಿಂದ ತಡೆ ತರುವ ಪ್ರಯತ್ನ

ಶ್ರೀಮಠ ಉಚಿತ ಪ್ರಸಾದ ಭೋಜನದ ವ್ಯವಸ್ಥೆಯನ್ನು ಮಾಡಲು ಆರಂಭಿಸಿದಾಗ, ಅದಕ್ಕೂ ನ್ಯಾಯಾಲಯದಿಂದ ತಡೆ ತರುವ ಪ್ರಯತ್ನ ನಡೆದಿತ್ತು. ಆದರೆ ನ್ಯಾಯಾಲಯ ಆ ಅರ್ಜಿಯನ್ನೂ ತಿರಸ್ಕರಿಸಿ, ಎರಡು ಹೊತ್ತು ಉಚಿತ ಪ್ರಸಾದ ಭೋಜನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇಂದು ಶ್ರೀಮಠದ ಆಡಳಿತದಿಂದ ಆರಂಭವಾದ ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆ ನಾಡಿನ ಪ್ರಶಂಸೆಗೆ ಪಾತ್ರವಾಗಿದೆ.

ಶ್ರೀಕ್ಷೇತ್ರ ಗೋಕರ್ಣ

ಶ್ರೀಕ್ಷೇತ್ರ ಗೋಕರ್ಣ

ಆದಿಗೋಕರ್ಣ ದೇವಾಲಯದ ಪುನರ್ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಶ್ರೀಮಠಕ್ಕೆ ಮಹತ್ವದ ಜಯ ಲಭಿಸಿರುವುದು, ಶ್ರೀಕ್ಷೇತ್ರ ಗೋಕರ್ಣವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರೀಮಠಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಿದಂತಾಗಿದೆ.

English summary
Kumta Civil and JMFC Court given green signal to Ramachandrapura Math to reconstruct the Adi Gokarna temple. Ramachandrapura Math started the reconstruction work during 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X