• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2018ನೇ ಸಾಲಿನ ಕೊಂಕಣಿ ಅಕಾಡೆಮಿ ಪ್ರಶಸ್ತಿ ಘೋಷಣೆ

By ಕಾರವಾರ ಪ್ರತಿನಿಧಿ
|

ಕಾರವಾರ, ಫೆಬ್ರವರಿ 10: 2018ನೇ ಸಾಲಿನ ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ 2018ನೇ ಸಾಲಿನ ಪುಸ್ತಕ ಬಹುಮಾನ ಘೋಷಣೆಯಾಗಿದೆ.

ಅಕಾಡೆಮಿಯ ಗೌರವ ಪ್ರಶಸ್ತಿಗೆ ಕೊಂಕಣಿ ಸಾಹಿತ್ಯದಲ್ಲಿ ಜೆ.ಎಫ್.ಡಿಸೋಜಾ, ಕೊಂಕಣಿ ಕಲೆಯಲ್ಲಿ ಕೂಡ್ಲ ಆನಂದು ಮಧುಕರ್ ಶ್ಯಾನಭಾಗ, ಕೊಂಕಣಿ ಜಾನಪದದಲ್ಲಿ ಡಾ.ವಸಂತ ಬಾಂದೇಕರ್ ಆಯ್ಕೆಯಾಗಿದ್ದಾರೆ.

ಫೆ.11ರಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿತರಣೆ

ಕೊಂಕಣಿ ಕವನದಲ್ಲಿ ರೋಶು ಬಜ್ಪೆ ಅವರ 'ತೀಂತ್ ಜಾಲೆಂ ರಗತ್', ಕೊಂಕಣಿ ಸಣ್ಣಕಥೆಯಲ್ಲಿ ಜೆಯಲ್ ಮಂಜರಪಲ್ಕೆ ಅವರ 'ಚಂದ್ರೆಮಾಚಿ ಖತಾಂ', ಕೊಂಕಣಿ ಕಾದಂಬರಿಯಲ್ಲಿ ಲವಿ ಗಂಜಿಮಠ ಅವರ 'ಚುಕ್‍ಲ್ಲಿಂ ಮೆಟಾಂ" ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ.

ಜೆ.ಎಫ್.ಡಿಸೋಜಾ

ಜೋಕಿಮ್ ಫೆಡ್ರಿಕ್ ಡಿ'ಸೋಜಾ ಇವರ ಜನನ ಮಂಗಳೂರು ಮಿಲಾಗ್ರಿಸ್ ನ ಅತ್ತಾವರದಲ್ಲಿ. 1961ರಲ್ಲಿ ಸರಕಾರಿ ಅರಣ್ಯ ಇಲಾಖೆಯಲ್ಲಿ ಸೇವೆಗೆ ಸೇರಿಕೊಂಡು 39 ವರ್ಷಗಳ ಸುದೀರ್ಘ ಸೇವೆ ನೀಡಿ, ಸುಪರಿಟೆಂಡೆಂಟ್ ಪದವಿಯೊಂದಿಗೆ ನಿವೃತ್ತಿ ಹೊಂದಿದ್ದಾರೆ. ಇವರು ಜೆ.ಎಫ್. ಡಿಸೋಜಾ ಅತ್ತಾವರ, ಜೆಫ್ರಿ ಕುಮಾರ್, ಜೆಪ್ಪು ಜೆಫ್ರಿ ಹೆಸರಿನಲ್ಲಿ ಮಕ್ಕಳ ಕತೆ, ಲೇಖನಗಳನ್ನು ಬರೆದಿದ್ದಾರೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕೊಂಕಣಿ, ತುಳು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಈ ರೀತಿ ಕೊಂಕಣಿ, ಕನ್ನಡ, ಇಂಗ್ಲಿಷ್, ತುಳು ಸಾಹಿತ್ಯದಲ್ಲಿಇವರ ಕೆಲಸ ಇಂದಿಗೂ ಸಾಗುತ್ತಲೇ ಇದೆ.

ಕೂಡ್ಲ ಆನಂದು ಮಧುಕರ್ ಶ್ಯಾನಭಾಗ

ಕೂಡ್ಲ ಆನಂದ ಮಧುಕರ್ ಶ್ಯಾನಭಾಗ ಇವರ ಜನನ 1953. ಸುಮಾರು 40 ಕ್ಕೂ ಹೆಚ್ಚು ನಾಟಕದ ನಿರ್ದೇಶನ ಮಾಡಿ ಪ್ರಮುಖ ನಗರ ಉತ್ಸವಗಳಲ್ಲಿ ಪ್ರದರ್ಶನ ನೀಡಿರುತ್ತಾರೆ. 2005-08 ನೇ ಸಾಲಿನಲ್ಲಿ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅನೇಕ ಯುವ ಕಲಾವಿದರನ್ನು ಒಟ್ಟುಗೂಡಿಸಿ ಕೊಂಕಣಿ ನಾಟಕ ಕಲಾ ತರಬೇತಿಯನ್ನು ನಡೆಸುತ್ತಿದ್ದಾರೆ.

ಡಾ.ವಸಂತ ಬಾಂದೇಕರ್

ಡಾ. ವಸಂತ ಬಾಂದೇಕರ್ ರವರ ಜನನ 1947. ಕೊಂಕಣಿ ಏಕ್‍ವ್ಯಕ್ತಿ ಸೇವೆಯ ಜೊತೆಗೆ ನಶಿಸಿ ಹೋಗುತ್ತಿರುವ ಕೊಂಕಣಿ ಜಾನಪದ ಕಲೆಗಳನ್ನು, ಸಾಹಿತ್ಯವನ್ನು ಲಿಖಿತವಾಗಿ ಛಾಯಾ ಚಿತ್ರದ ಮುಖಾಂತರ ಆಡಿಯೋ-ವೀಡಿಯೋ ಮೂಲಕ ಸಂಗ್ರಹಿಸಿ ಯುವಕ ಯುವತಿಯರಿಗೆ ತರಬೇತಿ ನೀಡಿ ವಿವಿಧ ಕಲಾತಂಡಗಳನ್ನು ಕಾರವಾರ ಕರಾವಳಿ ಉತ್ಸವ- ಕೊಂಕಣಿ ಸಾಹಿತ್ಯ ಅಕಾಡೆಮಿ ಉತ್ಸವ-ಜಾಗೃತಿ ಅಭಿಯಾನ-ಮಾಂಡ ಸೋಬಾಣ ಆಯೋಜಿತ ಉತ್ಸವ ಹೀಗೆ ಹಲಾವಾರು ಉತ್ಸವಗಳಲ್ಲಿ ಇವರ ನೇತೃತ್ವದ ಜೊತೆಗೆ ಕಲಾತಂಡಗಳ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೀಡಿರುತ್ತಾರೆ.

ಪುಸ್ತಕ ಬಹುಮಾನ ಪುರಸ್ಕೃತರು

ರೋಶು ಬಜ್ಪೆ ಎಂ.ಕಾಮ್. ಪದವೀಧರಾಗಿದ್ದು, ಸಣ್ಣ ಕತೆ, ವಿನೋದ, ವಿಡಂಬನಾ, ಲೇಖನಾಂ ಲಲಿತಪ್ರಬಂಧಗಳನ್ನು ಬರೆದಿದ್ದಾರೆ.

ಜೆಯಲ್ ಮಂಜರಪಲ್ಕೆ ಹೆಸರಲ್ಲಿ ಕೊಂಕಣಿಯಲ್ಲಿ ಬರೆಯುತ್ತಿರುವ ಜ್ಯೋತಿ ಲೊರಿನ್ ಡಿಸಿಲ್ವಾ ಮೂಲತ: ಬೆಳ್ಮಣ್ಣಿನವರು. ಎಂ.ಎ. ಬಿ.ಎಡ್ ಮಾಡಿ ಕುಂದಾಪುರದ ಸಂತ ಮೇರಿಸ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಅವರ ಕಥೆಗಳು ಕೊಂಕಣಿಯ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿವೆ.

ತಾರಾ ಲವೀನಾ ಫೆರ್ನಾಂಡಿಸ್, ಎಂ.ಎ. ಬಿ.ಎಡ್ ಪದವೀಧರೆಯಾಗಿದ್ದು, ಕಿನ್ನಿಕಂಬಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಲವಿ ಗಂಜಿಮಠ ಹೆಸರಿನಲ್ಲಿ ಕೊಂಕಣಿ ಸಾಹಿತ್ಯ ರಚನೆ ಮಾಡುತ್ತಿರುವ ಇವರು ಅಮ್ಚೊ ಯುವಕ್ ಪತ್ರಿಕೆಯಲ್ಲಿ ಪ್ರಕಟವಾದ ವಿಧಿಚಿ ದಾವ್ಲಿ ಎನ್ನುವ ಸಣ್ಣ ಕಥೆಯ ಮೂಲಕ ಸಾಹಿತ್ಯ ಸಂಸಾರಕ್ಕೆ ಕಾಲಿಟ್ಟರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Konkani Academy Award -2018 was announced. J.F.Disoja (Konkani literature ), Kudla Anand Madhukar Shayan bagh (Konkani art), Dr Vasantha Bandhekar is selected in Konkani folklore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more