ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಂಕಣ ರೈಲ್ವೆ ಮಾರ್ಗ ವಿದ್ಯುದೀಕರಣ ಬಹುತೇಕ ಪೂರ್ಣ: ಲೋಕೋ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

|
Google Oneindia Kannada News

ಕಾರವಾರ, ಮಾರ್ಚ್ 10: ಮಹಾರಾಷ್ಟ್ರದ ರೋಹಾದಿಂದ ದಕ್ಷಿಣ ಕನ್ನಡ ಜಿಲ್ಲೆಯ ಥೋಕೂರಿನವರೆಗಿನ 738.94 ಕಿ.ಮೀ ಕೊಂಕಣ ರೈಲ್ವೆ ಮಾರ್ಗದಲ್ಲಿ ಈಗಾಗಲೇ 441.52 ಕಿ.ಮೀ ಮಾರ್ಗದ ವಿದ್ಯುದೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ರತ್ನಗಿರಿಯಿಂದ ಕಾರವಾರದವರೆಗಿನ 297.421 ಕಿ.ಮೀ.ನಲ್ಲಿ ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡಿರುವಲ್ಲಿ ಲೋಕೋ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದೆ.

ಸೊಲ್ಲಾಪುರ-ಧಾರವಾಡ ಪ್ಯಾಸೆಂಜರ್ ರೈಲು ಓಡಿಸಿದ ಮಹಿಳೆಯರುಸೊಲ್ಲಾಪುರ-ಧಾರವಾಡ ಪ್ಯಾಸೆಂಜರ್ ರೈಲು ಓಡಿಸಿದ ಮಹಿಳೆಯರು

ಎಲೆಕ್ಟ್ರಿಕ್ ರೈಲು ಭಾನುವಾರ ತನ್ನ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಮುಗಿಸಿದೆ. ಬೆಳಿಗ್ಗೆ 9.40 ಕ್ಕೆ ಥೋಕೂರಿನಿಂದ ಹೊರಟು ಮಧ್ಯಾಹ್ನ 12.44ಕ್ಕೆ ಕಾರವಾರ ತಲುಪಿದೆ. ಮಧ್ಯಾಹ್ನ 1.40ಕ್ಕೆ ಕಾರವಾರ ಬಿಟ್ಟ ರೈಲು ಸಂಜೆ 4 ಗಂಟೆಗೆ ಥೋಕೂರ್ ಗೆ ಹಿಂತಿರುಗಿದೆ. ಈ ವರ್ಷ ಜೂನ್ ವೇಳೆಗೆ ವಿದ್ಯುತ್ ಚಾಲಿತ ರೈಲುಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಪ್ರಾಯೋಗಿಕ ಸಂಚಾರ ನಡೆಸಿ ಪರೀಕ್ಷೆ

ಪ್ರಾಯೋಗಿಕ ಸಂಚಾರ ನಡೆಸಿ ಪರೀಕ್ಷೆ

ಕಾಮಗಾರಿ ಪೂರ್ಣಗೊಂಡಿರುವ ರೋಹಾದಿಂದ ರತ್ನಗಿರಿಯವರೆಗಿನ 202.78 ಕಿ.ಮೀ, ಕಾರವಾರದಿಂದ ಕುಂದಾಪುರದ ಬಿಜೂರಿನ 131 ಕಿ.ಮೀ ನವರೆಗೆ ವಿದ್ಯುತ್ ಚಾಲಿತ ಲೋಕೋದ (ಎಂಜಿನ್ ಬೋಗಿ) ಪ್ರಾಯೋಗಿಕ ಸಂಚಾರ ನಡೆಸಿ ಪರೀಕ್ಷಿಸಲಾಗಿದೆ.

ಇನ್ನು ಬಿಜೂರಿನಿಂದ ಥೋಕೂರಿನ 107.40 ಕಿ.ಮೀ ವ್ಯಾಪ್ತಿಯಲ್ಲೂ ಲೋಕೋ ಪ್ರಾಯೋಗಿಕ ಸಂಚಾರದ ಜೊತೆಗೆ ರೈಲ್ವೆ ಸುರಕ್ಷತಾ ಆಯೋಗ (ಸಿಆರ್ಎಸ್)ದ ತಪಾಸಣೆ ಕೂಡ ಪೂರ್ಣಗೊಂಡಿದೆ.

ಗಂಟೆಗೆ 110 ಕಿ.ಮೀ. ವೇಗದಲ್ಲಿ ಲೋಕೋ ಓಡಾಟ

ಗಂಟೆಗೆ 110 ಕಿ.ಮೀ. ವೇಗದಲ್ಲಿ ಲೋಕೋ ಓಡಾಟ

ಕಾರವಾರದಿಂದ ಥೋಕೂರಿನವರೆಗೆ ಗಂಟೆಗೆ 110 ಕಿ.ಮೀ. ವೇಗದಲ್ಲಿ ಲೋಕೋ ಓಡಾಟ ನಡೆಸಿದ್ದು, ಯಾವುದೇ ತಾಂತ್ರಿಕ ಸಮಸ್ಯೆ ಉಂಟಾಗಿಲ್ಲ. ಇದು ಕೊಂಕಣ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಬೆಂಗಳೂರಿನ ಸಬ್‌ಅರ್ಬನ್ ರೈಲು ಕಾರಿಡಾರ್‌ಗಳಿಗೆ ಹೂವುಗಳ ಹೆಸರುಬೆಂಗಳೂರಿನ ಸಬ್‌ಅರ್ಬನ್ ರೈಲು ಕಾರಿಡಾರ್‌ಗಳಿಗೆ ಹೂವುಗಳ ಹೆಸರು

ರೈಲುಗಳಿಗೆ 300 ಕಿ.ಮೀ ನಷ್ಟು ಓಡಲು 1,500 ಲೀಟರ್‌ ಡೀಸೆಲ್ ಬೇಕು. ಗೂಡ್ಸ್ ರೈಲುಗಳಿಗೆ ಇದಕ್ಕಿಂತ ಹೆಚ್ಚು ಡೀಸೆಲ್ ಬೇಕಾಗುತ್ತದೆ. ದೇಶದಲ್ಲಿ ಅತೀ ಹೆಚ್ಚು ರೈಲುಗಳು ಸಂಚರಿಸುವ ಪ್ರದೇಶಗಳಲ್ಲಿ ಈ ಕೊಂಕಣ ಮಾರ್ಗವೂ ಒಂದಾಗಿದೆ. ಹೀಗಾಗಿ ವಿದ್ಯುದೀಕರಣದಿಂದ ಪ್ರತಿ ವರ್ಷ ಡೀಸೆಲ್ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಲಾಭ ಪಡೆಯಬಹುದಾಗಿದೆ.

ಪರಿಸರ ಸ್ನೇಹಿ ಪ್ರಯಾಣಕ್ಕೆ ಆದ್ಯತೆ

ಪರಿಸರ ಸ್ನೇಹಿ ಪ್ರಯಾಣಕ್ಕೆ ಆದ್ಯತೆ

ಡೀಸೆಲ್ ತುಂಬಿಸಲು ಕಾದು ನಿಲ್ಲುವ ಸಮಯ ಕೂಡ ಉಳಿಯಲಿದೆ ಎಂದು ಆಲೋಚಿಸಿ, ಪರಿಸರ ಸ್ನೇಹಿ ಪ್ರಯಾಣಕ್ಕೆ ಆದ್ಯತೆ ನೀಡಲು ಕೊಂಕಣ ರೈಲ್ವೆ ನಿಗಮವು 2017ರ ನವೆಂಬರ್‌ನಲ್ಲಿ ಈ ಕಾಮಗಾರಿ ಆರಂಭಿಸಿತು.

ರೋಹಾದಿಂದ ಗೋವಾದ ವೆರ್ನಾದವರೆಗೆ ಎಲ್ ಆ್ಯಂಡ್ ಟಿ ಮತ್ತು ವೆರ್ನಾದಿಂದ ಥೋಕೂರಿನವರೆಗೆ ಎಸ್.ಟಿ.ಎಸ್ ಕಲ್ಪತರು ಸಂಸ್ಥೆಗಳು ವಿದ್ಯುದೀಕರಣ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದವು. ವಿದ್ಯುತ್ ಚಾಲಿತ ಲೋಕೋಗಳ ಓಡಾಟದಿಂದಾಗಿ ರೈಲುಗಳ ವೇಗವೂ ಹೆಚ್ಚಾಗಲಿದ್ದು, ಪ್ರಯಾಣದ ಅವಧಿ‌ ಕೂಡ ಕಡಿಮೆಯಾಗಲಿದೆ ಎನ್ನಲಾಗಿದೆ.

Recommended Video

ST Somashekhar ಬಿಚ್ಚಿಟ್ಟ ಅಸಲಿ ಸತ್ಯ | Real Fact about Ramesh Jarkiholi | Oneindia Kannada
ಜೂನ್ ವೇಳೆಗೆ ವಿದ್ಯುತ್ ಚಾಲಿತ ರೈಲುಗಳ ಓಡಾಟ

ಜೂನ್ ವೇಳೆಗೆ ವಿದ್ಯುತ್ ಚಾಲಿತ ರೈಲುಗಳ ಓಡಾಟ

ಎಲೆಕ್ಟ್ರಿಕ್ ರೈಲು ಭಾನುವಾರ ತನ್ನ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಮುಗಿಸಿದೆ. ಬೆಳಿಗ್ಗೆ 9.40 ಕ್ಕೆ ಥೋಕೂರಿನಿಂದ ಹೊರಟು ಮಧ್ಯಾಹ್ನ 12.44ಕ್ಕೆ ಕಾರವಾರ ತಲುಪಿದೆ. ಮಧ್ಯಾಹ್ನ 1.40ಕ್ಕೆ ಕಾರವಾರ ಬಿಟ್ಟ ರೈಲು ಸಂಜೆ 4 ಗಂಟೆಗೆ ಥೋಕೂರ್ ಗೆ ಹಿಂತಿರುಗಿದೆ. ಈ ವರ್ಷ ಜೂನ್ ವೇಳೆಗೆ ವಿದ್ಯುತ್ ಚಾಲಿತ ರೈಲುಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

English summary
The electrification works on the 441.52km line along the Konkan Railway have already been completed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X