ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ ಏಕೈಕ ಬ್ಲೂಫ್ಲ್ಯಾಗ್ ಕಡಲು ಹೆಗ್ಗಳಿಕೆಗೆ ಕಾಸರಕೋಡು ತೀರ!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಮಾರ್ಚ್ 11: ಒಂದು ಕಾಲದಲ್ಲಿ ಉತ್ತಮ ಪ್ರವಾಸಿ ತಾಣವಾಗುವ ಎಲ್ಲ ಸಾಧ್ಯತೆಗಳಿದ್ದರೂ ಸಹ ಮೂಲಭೂತ ಸೌಕರ್ಯಗಳಿಲ್ಲದೇ ಹೊನ್ನಾವರ ತಾಲ್ಲೂಕಿನ ಕಾಸರಕೋಡಿನಲ್ಲಿರುವ ಇಕೋ ಬೀಚ್ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ವಿಫಲವಾಗಿತ್ತು. ಆದರೆ, ಇದೇ ಕಡಲತೀರ ಇಂದು ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಯತ್ನದಿಂದಾಗಿ ಅಂತರರಾಷ್ಟ್ರೀಯ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಸಜ್ಜಾಗುತ್ತಿದೆ. ಅಲ್ಲದೇ, ರಾಜ್ಯದ ಮೊದಲ ಬ್ಲೂಫ್ಲ್ಯಾಗ್ ಪಡೆದುಕೊಳ್ಳುವ ಕಡಲತೀರ ಎನ್ನುವ ಹೆಗ್ಗಳಿಯನ್ನು ಗಳಿಸಿಕೊಳ್ಳಲಿದೆ.

ಇಕೋ ಬೀಚ್ ಇದೀಗ ಅಂತರಾಷ್ಟ್ರೀಯ ಮಟ್ಟದ ಬೀಚ್‌ಗಳಂತೆ ಮೇಲ್ದರ್ಜೆಗೇರಿದೆ. ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ಕುಳಿತುಕೊಳ್ಳುವ ಆಸನದಿಂದ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲತೀರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಸಿಬ್ಬಂದಿಯನ್ನ ಒಳಗೊಂಡು ವಿನೂತನ ಮಾದರಿಯಲ್ಲಿ ಸಿದ್ಧಗೊಳ್ಳುತ್ತಿದೆ. ಇಕೋ ಬೀಚ್‌ನ್ನು ಅಂತರಾಷ್ಟ್ರೀಯ ಮಾನ್ಯತೆ ಹೊಂದಿರುವ ಬ್ಲೂಫ್ಲ್ಯಾಗ್ ಕಡಲತೀರವನ್ನಾಗಿ ಮಾರ್ಪಾಡು ಮಾಡಲು ಈ ಎಲ್ಲ ತಯಾರಿಗಳು ನಡೆಯುತ್ತಿವೆ.

ಸ್ಕೂಬಾ ಡೈವ್ ವೇಳೆ ಪತ್ತೆಯಾದ ಬೃಹತ್ ಹಂಪ್ ಬ್ಯಾಕ್ ತಿಮಿಂಗಲಸ್ಕೂಬಾ ಡೈವ್ ವೇಳೆ ಪತ್ತೆಯಾದ ಬೃಹತ್ ಹಂಪ್ ಬ್ಯಾಕ್ ತಿಮಿಂಗಲ

ಮೂಲಭೂತ ಸೌಕರ್ಯ ಒದಗಿಸುವುದು

ಮೂಲಭೂತ ಸೌಕರ್ಯ ಒದಗಿಸುವುದು

ಕಡಲತೀರ ವೀಕ್ಷಣೆಗೆ ಬರುವಂತಹ ಪ್ರವಾಸಿಗರಿಗೆ ಸ್ವಚ್ಛ ಕಡಲತೀರದ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರಿಂದ ದೇಶ, ವಿದೇಶಗಳ ಪ್ರವಾಸಿಗರನ್ನೂ ಇತ್ತ ಸೆಳೆಯುವಲ್ಲಿ ಅನುಕೂಲವಾಗಲಿದೆ. ಈಗಾಗಲೇ ಶೇ. 90 ರಷ್ಟು ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿದ್ದು, ಡೆನ್ಮಾರ್ಕ್ ನ ಪರಿಸರ ಶಿಕ್ಷಣ ಪ್ರತಿಷ್ಠಾನ ಪರಿಶೀಲನೆ ಬಳಿಕ ಬ್ಲೂಫ್ಲ್ಯಾಗ್ ಪ್ರಮಾಣಪತ್ರವನ್ನು ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ ಮಾಹಿತಿ ನೀಡಿದ್ದಾರೆ.

ಪರಿಸರ ಸ್ನೇಹಿ ಕಡಲತೀರ

ಪರಿಸರ ಸ್ನೇಹಿ ಕಡಲತೀರ

ಇನ್ನು ದೇಶದಲ್ಲಿ ಬ್ಲೂಫ್ಲ್ಯಾಗ್ ಬೀಚ್‌ಗಾಗಿ ಆಯ್ಕೆಯಾದ ಬೀಚ್‌ಗಳಲ್ಲಿ ಕಾಸರಕೋಡು ಇಕೋ ಬೀಚ್ ರಾಜ್ಯದ ಏಕೈಕ ಕಡಲತೀರವಾಗಿದೆ. 5.6 ಕಿಲೋ ಮೀಟರ್ ಉದ್ದವಿರುವ ಕಡಲತೀರದ 750 ಮೀಟರ್ ವ್ಯಾಪ್ತಿಯಲ್ಲಿ ಸದ್ಯ ಸುಮಾರು 8 ಕೋಟಿ ವೆಚ್ಚದಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕಡಲತೀರವನ್ನು ಪರಿಸರ ಸ್ನೇಹಿಯಾಗಿ ಸಿದ್ಧಪಡಿಸಬೇಕಿದ್ದು, ಕಡಲತೀರದ ಸ್ವಚ್ಛತೆಯ ಜೊತೆಗೆ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಸಹ ಕಡಲತೀರದಲ್ಲಿ ಆಯೋಜನೆ ಮಾಡಬೇಕಾಗಿದೆ.

ಡೆನ್ಮಾರ್ಕ್ ಪರಿಸರ ಶಿಕ್ಷಣ ಪ್ರತಿಷ್ಠಾನದಿಂದ ಪ್ರಮಾಣಪತ್ರ

ಡೆನ್ಮಾರ್ಕ್ ಪರಿಸರ ಶಿಕ್ಷಣ ಪ್ರತಿಷ್ಠಾನದಿಂದ ಪ್ರಮಾಣಪತ್ರ

ಇನ್ನು ಕಡಲತೀರದಲ್ಲಿನ ಅಭಿವೃದ್ಧಿ ಕಾರ್ಯಗಳು ಹಾಗೂ ಬೀಚ್ ಸ್ಥಿತಿಯನ್ನು ಆಧರಿಸಿ ಬ್ಲೂಫ್ಲ್ಯಾಗ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಬಳಿಕ ಕಡಲತೀರದ ನೀರಿನ ಗುಣಮಟ್ಟ, ಬೀಚ್ ಸ್ವಚ್ಛತೆ, ಮೂಲಭೂತ ಸೌಕರ್ಯಗಳು ಹಾಗೂ ಪ್ರವಾಸಿಗರ ಭದ್ರತೆಯನ್ನೂ ಸಹ ಕಡಲತೀರದಲ್ಲಿ ಕಾಯ್ದುಕೊಂಡಲ್ಲಿ ಮಾತ್ರ ಕಡಲತೀರದಲ್ಲಿ ಬ್ಲೂಫ್ಲ್ಯಾಗ್ ನ್ನ ಹಾಕಲು ಅವಕಾಶ ಇರುತ್ತದೆ. ಕೆಲವೇ ದಿನಗಳಲ್ಲಿ ಬ್ಲೂಫ್ಲ್ಯಾಗ್ ಬೀಚ್ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಸಾರ್ವಜನಿಕರಿಗೆ ಬಳಕೆಗೆ ಲಭ್ಯವಾಗಲಿದೆ. ಬಳಿಕ ಕಡಲತೀರದಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಡೆನ್ಮಾರ್ಕ್ ನ ಪರಿಸರ ಶಿಕ್ಷಣ ಪ್ರತಿಷ್ಠಾನ ಪ್ರಮಾಣಪತ್ರವನ್ನ ನೀಡಲಿದೆ.

ಕೊರೊನಾ ಭೀತಿ: ಕಾರವಾರ ಬಂದರಿನಲ್ಲಿ ಹೈ ಅಲರ್ಟ್ಕೊರೊನಾ ಭೀತಿ: ಕಾರವಾರ ಬಂದರಿನಲ್ಲಿ ಹೈ ಅಲರ್ಟ್

ಸರ್ಕಾರದ ಸಹಯೋಗದಿಂದ ಕಾರ್ಯನಿರ್ವಹಣೆ

ಸರ್ಕಾರದ ಸಹಯೋಗದಿಂದ ಕಾರ್ಯನಿರ್ವಹಣೆ

ಸದ್ಯ ಕಡಲತೀರದಲ್ಲಿ ಮಾಡಲಾಗಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಕಡಲತೀರಕ್ಕೆ ಭೇಟಿ ನೀಡುವ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ಸ್ವಚ್ಛ, ಸುಂದರ ಕಡಲತೀರದಲ್ಲಿ ಕುಟುಂಬಸ್ಥರೊಂದಿಗೆ ಯಾವುದೇ ತೊಂದರೆ ಇಲ್ಲದೇ ಕಾಲ ಕಳೆಯಬಹುದಾಗಿದ್ದು, ಸಮುದ್ರದಲ್ಲಿ ಈಜಾಡಿದ ಬಳಿಕ ಬಟ್ಟೆ ಬದಲಾಯಿಸಲು ಪ್ರತ್ಯೇಕ ರೂಂಗಳ ವ್ಯವಸ್ಥೆ ಸಹ ಇರುವುದರಿಂದ ಸಾಕಷ್ಟು ಅನುಕೂಲವಾಗಲಿದೆ ಅನ್ನೋದು ಬೀಚ್ ವೀಕ್ಷಣೆಗೆ ಬಂದಿದ್ದ ಪ್ರವಾಸಿ ದಿವ್ಯಾ ರೇವಣಕರ ಅಭಿಪ್ರಾಯ. ಸದ್ಯ ಕಡಲತೀರದ ಅಭಿವೃದ್ಧಿ ಕಾರ್ಯಗಳನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿಕೊಡಲಾಗಿದ್ದು ಬಳಿಕ ಸರ್ಕಾರದ ಸಹಯೋಗದೊಂದಿಗೆ ಬೀಚ್ ಕಾರ್ಯನಿರ್ವಹಿಸಲಿದೆ.

English summary
Kasarakodu Eco Beach Transform into an Internationally recognized Blue Flag beach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X