ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3,350 ಕಿ.ಮೀ. ಸೈಕ್ಲಿಂಗ್ ಮಾಡಿದ ಕನ್ನಡತಿಯರಿಂದ ಮತ್ತೊಂದು ಸಾಹಸ!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಅಕ್ಟೋಬರ್ 20; ಐವರು ಕನ್ನಡತಿಯರ ಕಾಶ್ಮೀರದಿಂದ ಕಾರವಾರದವರೆಗಿನ 'ಶಿಖರದಿಂದ ಸಾಗರದವರೆಗೆ' ಸೈಕಲ್ ಯಾತ್ರೆಯು ಕಾರವಾರದಲ್ಲಿ ಮಂಗಳವಾರ ಸಮಾಪ್ತಿಗೊಂಡಿದೆ. ಈ ಯಾತ್ರೆಯ ಎರಡನೇ ಭಾಗವಾದ ಕಾರವಾರದಿಂದ ಮಂಗಳೂರಿನವರೆಗಿನ ಕಯಾಕಿಂಗ್ ಬುಧವಾರ ಆರಂಭಗೊಂಡಿದ್ದು, ಕಾಳಿ‌ ನದಿಯಲ್ಲಿ ಚಾಲನೆ ನೀಡಲಾಯಿತು.

ಮೈಸೂರಿನ ಬಿಂದು ನೇತೃತ್ವದಲ್ಲಿ ಬೆಂಗಳೂರಿನ ಆಶಾ, ಶಿವಮೊಗ್ಗದ ಆಯನೂರಿನ ಧನಲಕ್ಷ್ಮೀ, ಐಶ್ವರ್ಯಾ, ಕೊಡಗಿನ ಪುಷ್ಪಾ 'ಶಿಖರದಿಂದ ಸಾಗರದವರೆಗೆ' ಯಾತ್ರೆಯ ಮೊದಲ ಭಾಗವಾಗಿ ಕಾಶ್ಮೀರದಿಂದ ಕಾರವಾರದವರೆಗೆ 3,350 ಕಿ.ಮೀ ಸೈಕ್ಲಿಂಗ್ ಮಾಡಿಕೊಂಡು ಮಂಗಳವಾರ ಕಾರವಾರಕ್ಕೆ ಭೇಟಿ ನೀಡಿದರು.

ಕಾರವಾರ: ಬಾಗಿಲು ಮುಚ್ಚಿದ ಗೋವಾ ಗಡಿಯ ಮದ್ಯದಂಗಡಿಗಳು!ಕಾರವಾರ: ಬಾಗಿಲು ಮುಚ್ಚಿದ ಗೋವಾ ಗಡಿಯ ಮದ್ಯದಂಗಡಿಗಳು!

ಕರ್ನಾಟಕ ಸರ್ಕಾರದ ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಇಂಡಿಯನ್ ಮೌಂಟೇನಿಯರಿಂಗ್ ಫೌಂಡೇಶನ್, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಸಹಕಾರದೊಂದಿಗೆ ಇವರು ಈ ಯಾತ್ರೆ ಹಮ್ಮಿಕೊಂಡಿದ್ದರು. ಆ.17ರಂದು ಬೆಂಗಳೂರಿನಿಂದ ಹೊರಟಿದ್ದರು. ಆ.22ರಂದು ಕಾಶ್ಮೀರದ 5,425 ಮೀಟರ್ ಎತ್ತರದ ಕೊಲೈಪಿಕ್ ಎಂಬ ಹಿಮಪರ್ವತವನ್ನು ಹತ್ತಿ ಸಾಹಸ ಪ್ರದರ್ಶನ ಮಾಡಿದ್ದರು. ನಂತರ ಸೆ.4ರಿಂದ ಲಡಾಖ್‌ನಿಂದ ಸೈಕಲ್ ಪ್ರಯಾಣ ಆರಂಭಿಸಿದ್ದರು. ಕೇರಳದ ಪ್ರಾನ್ಸಿಸ್ ಹಾಗೂ ಶಬ್ಬಿಬ್ ಮಾರ್ಗದರ್ಶನ ನೀಡಿದ್ದರು.

ಕಾರವಾರ: ನಿರ್ವಹಣೆಯಿಲ್ಲದೆ ಸೊರಗಿದ ರಾಕ್ ಗಾರ್ಡನ್! ಕಾರವಾರ: ನಿರ್ವಹಣೆಯಿಲ್ಲದೆ ಸೊರಗಿದ ರಾಕ್ ಗಾರ್ಡನ್!

Karwar To Mangaluru Kayaking At Kali River Began

ಮಂಗಳವಾರ ಸಂಜೆ ಗೋವಾ ಮೂಲಕ ಕಾರವಾರ ತಲುಪಿದ ಅವರಿಗೆ ಜಿಲ್ಲಾ ಪಂಚಾಯತಿ ಸಿಇಒ ಪ್ರಿಯಾಂಗಾ ಅವರು ಹಾರ ಹಾಕಿ ಸ್ವಾಗತಿಸಿದರು. ಇನ್ನು ಬುಧವಾರ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ; ಯುವಕನಿಂದ ಅಖಂಡ ಕರ್ನಾಟಕ ಸೈಕಲ್ ಯಾತ್ರೆಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ; ಯುವಕನಿಂದ ಅಖಂಡ ಕರ್ನಾಟಕ ಸೈಕಲ್ ಯಾತ್ರೆ

ಬಳಿಕ ಕಾಳಿ ನದಿಯಲ್ಲಿ‌ ಕಾರವಾರದಿಂದ ಮಂಗಳೂರಿನವರೆಗಿನ ಕಯಾಕಿಂಗ್‌ಗೆ ಚಾಲನೆ ನೀಡಲಾಯಿತು. ಕಾರವಾರದಿಂದ ಅರಬ್ಬಿ ಸಮುದ್ರದಲ್ಲಿ ಫೈಬರ್ ದೋಣಿಯಲ್ಲಿ ಸ್ವಂತ ಹುಟ್ಟು ಹಾಕಿಕೊಂಡು ಕಯಾಕಿಂಗ್‌ನ ಮೂಲಕ ಮಂಗಳೂರಿಗೆ ತೆರಳುವ ಯುವತಿಯರು, ಅಲ್ಲಿಗೆ ತಮ್ಮ ಸಾಹಸಮಯ ಪ್ರಯಾಣವನ್ನು ಮುಕ್ತಾಯಗೊಳಿಸಲಿದ್ದಾರೆ.

ಇನ್ನು ಕಯಾಕಿಂಗ್‌ಗೆ ಚಾಲನೆ ನೀಡುವ ವೇಳೆ ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ, ತರಬೇತುದಾರ ಪ್ರಕಾಶ ರೇವಣಕರ್, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ತರಬೇತುದಾರ ಪ್ರಕಾಶ ಹರಿಕಂತ್ರ ಮುಂತಾದವರು ಇದ್ದರು.

Karwar To Mangaluru Kayaking At Kali River Began

ಕೇರಳದಿಂದ ಲಡಾಖ್‌ಗೆ ಸೈಕಲ್ ಯಾತ್ರೆ; ಕೇವಲ 500 ರೂ. ಇಟ್ಟುಕೊಂಡು ದೇಶದ ಗ್ರಾಮೀಣ ಪ್ರದೇಶಗಳ ಸೊಗಡನ್ನು ಅನ್ವೇಷಣೆ ಮಾಡಿಕೊಂಡು ಕೇರಳದಿಂದ ಯುವಕನೋರ್ವ ಲಡಾಖ್‌ಗೆ ಸೈಕಲ್‌ನಲ್ಲಿ ಯಾತ್ರೆ ಹೊರಟಿದ್ದಾನೆ.

ಕೇರಳದ ತ್ರಿಶೂರ್‌ನ ವಿಷ್ಣು ಸುನೀಲ್‌ಕುಮಾರ್ ಈ ಸೈಕಲ್ ಯಾತ್ರೆ ಹೊರಟವರು. ಕೇವಲ 500 ರೂ. ಇಟ್ಟುಕೊಂಡು ಯಾತ್ರೆ ಹೊರಟಿರುವ ಈತ, ರಾತ್ರಿಯ ವೇಳೆ ಬಸ್ ನಿಲ್ದಾಣ, ಪೆಟ್ರೋಲ್ ಬಂಕ್ ಗಳಲ್ಲಿ ತಂಗುತ್ತಿದ್ದಾನೆ. ಬೆಳಗ್ಗಿನ ತಿಂಡಿಗೆ ಬ್ರೆಡ್, ಜಾಮ್ ತಿನ್ನುವ ವಿಷ್ಣು, ಸಿಕ್ಕವರು ಕೊಟ್ಟಿದ್ದನ್ನ ತಿಂದು ಹೊಟ್ಟೆ ತುಂಬಿಸಿಕೊಂಡು ತಿರುಗುತ್ತಿದ್ದಾನೆ.

500 ರೂಪಾಯಿ ಇಟ್ಟುಕೊಂಡು ಕೇರಳದಿಂದ ಸೈಕಲ್ ತುಳಿಯುತ್ತಾ ಮಂಗಳವಾರ ಕಾರವಾರಕ್ಕೆ ಬಂದ ಈತನ ಬಳಿ ಆ ಐನೂರು ರೂಪಾಯಿನಲ್ಲಿ ಇನ್ನೂ ಸ್ವಲ್ಪ ಬಾಕಿ ಉಳಿದಿದೆಯಂತೆ. ಲಡಾಖ್‌ಗೆ ಹೋಗುವವರೆಗೂ ಈ ಐನೂರು ರೂಪಾಯಿನಲ್ಲೇ ಎಲ್ಲವನ್ನೂ ನಿಭಾಯಿಸುತ್ತೇನೆ ಎನ್ನುತ್ತಾನೆ ವಿಷ್ಣು.

ಇನ್ನು ಬಿಬಿಎ ಪದವೀಧರನಾಗಿರುವ 24 ವರ್ಷದ ವಿಷ್ಣು, ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಆ ಉದ್ಯೋಗವನ್ನು ತೊರೆದು ಸೆ.23ರಿಂದ ಸೈಕಲ್ ಯಾತ್ರೆ ಹೊರಟಿದ್ದಾನೆ. ಸದ್ಯ ಕಾರವಾರದ ಮೂಲಕ ಗೋವಾಕ್ಕೆ ಹೊರಟಿರುವ ಈತ, ಮುಂದೆ ಅಲ್ಲಿಂದ ಲಡಾಖ್‌ಗೆ ತಲುಪಲಿದ್ದಾನೆ.

English summary
Karwar to Mangaluru kayaking began at Karwar on October 20. Mysuru based Bindu leading the 5 members team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X