ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ: ನಿರ್ವಹಣೆಯಿಲ್ಲದೆ ಸೊರಗಿದ ರಾಕ್ ಗಾರ್ಡನ್!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಅಕ್ಟೋಬರ್ 10; ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಸಮುದಾಯಗಳ ಜೀವನ ಶೈಲಿ, ಕಲೆ, ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸುವ ಉದ್ದೇಶದಿಂದ ನಗರದ ಟ್ಯಾಗೋರ್ ಕಡಲತೀರದಲ್ಲಿ ನಿರ್ಮಾಣಗೊಂಡಿದ್ದ ರಾಕ್ ಗಾರ್ಡನ್ ಇದೀಗ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.

ಕೋವಿಡ್‌ನಿಂದಾಗಿ ಮುಚ್ಚಿದ್ದ ರಾಕ್ ಗಾರ್ಡನ್ ಈಗ ಪ್ರವಾಸಿಗರಿಗೆ ತೆರೆದುಕೊಂಡಿದ್ದರೂ ಅಂದ ಕಳೆದುಕೊಂಡಿರುವುದು ಪ್ರವಾಸಿಗರ ಅಸಮಾಧಾನಕ್ಕೂ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೊಂದಿಕೊಂಡಂತೆ ಕಡಲತೀರದಲ್ಲಿ 2018ರಲ್ಲಿ ನಿರ್ಮಾಣಗೊಂಡಿದ್ದ ರಾಕ್ ಗಾರ್ಡನ್‌ನಲ್ಲಿ ಜಿಲ್ಲೆಯ ಬುಡಕಟ್ಟು ಜನಾಂಗಗಳಾದ ಹಾಲಕ್ಕಿ, ಸಿದ್ದಿ, ಗೌಳಿ, ಮುಕ್ರಿ, ಕುಣಬಿ, ಹಸಲ, ಗೊಂಡ ಹೀಗೆ ಹತ್ತಾರು ಸಮುದಾಯಗಳ ಆಚಾರ ವಿಚಾರ, ಜೀವನ ಶೈಲಿ, ಕಲೆ, ಸಂಸ್ಕೃತಿಗಳನ್ನು ಕಣ್ಣಿಗೆ ಕಟ್ಟುವಂತೆ ಶಿಲ್ಪಗಳ ಮೂಲಕ ತೆರೆದಿಡಲಾಗಿದೆ. ಇಷ್ಟೇ ಅಲ್ಲದೇ, ಗಾರ್ಡನ್ ಅನ್ನು ಸಂಪೂರ್ಣ ಕಲ್ಲುಗಳಿಂದಲೇ ನಿರ್ಮಾಣ ಮಾಡಿರುವ ಕಾರಣ ಹಾಗೂ ಬೆಳಕಿನ ದೀಪಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದವು.

 ಕಾರವಾರ- ಅಂಕೋಲಾ ಕ್ಷೇತ್ರ: ಸ್ವತಂತ್ರವಾಗಿ ಕಣಕ್ಕಿಳಿಯಲು ಸಿದ್ಧತೆ; ಆನಂದ್ ಅಸ್ನೋಟಿಕರ್ ಕಾರವಾರ- ಅಂಕೋಲಾ ಕ್ಷೇತ್ರ: ಸ್ವತಂತ್ರವಾಗಿ ಕಣಕ್ಕಿಳಿಯಲು ಸಿದ್ಧತೆ; ಆನಂದ್ ಅಸ್ನೋಟಿಕರ್

ಇದೇ ಕಾರಣದಿಂದ ರಾಕ್ ಗಾರ್ಡನ್‌ಗೆ ಜನಸಾಗರವೇ ಹರಿದುಬರುತ್ತಿದೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಂತೂ ಪ್ರವಾಸಿಗರ ಸಂಖ್ಯೆ ಸಾಮಾನ್ಯ ದಿನಗಳಿಗಿಂತ ದ್ವಿಗುಣವಿರುತ್ತದೆ. 40 ರೂ. ಪ್ರವೇಶ ಶುಲ್ಕ ನೀಡಿ ಒಳಗೆ ತೆರಳಿದರೆ ಸುಂದರ ಪ್ರವಾಸಿ ತಾಣ ಹಾಳು ಕೊಂಪೆಯಂತಾಗಿದೆ. ಕಲಾಕೃತಿಗಳು ಬಣ್ಣ ಕಳೆದುಕೊಂಡಿದ್ದು, ಕೆಲವುದರ ಭಾಗಗಳು ಮುರಿದಿವೆ. ಗುಡಿಸಲುಗಳ ಮೇಲೆ ಮರದ ಟೊಂಗೆಗಳು ಬಿದ್ದು, ಸುತ್ತಲೂ ಹುಲ್ಲು ಬೆಳೆದುಕೊಂಡಿವೆ. ಮಕ್ಕಳಿಗೆ ಆಟವಾಡಲು ನಿರ್ಮಿಸಿದ್ದ ಹಗ್ಗದ ನಡಿಗೆ, ಜೋಕಾಲಿ ಸೇರಿದಂತೆ ಎಲ್ಲವೂ ತುಂಡಾಗಿ ಈ ಪ್ರದೇಶ ಹುಲ್ಲುಗಾವಲಾಗಿ ಮಾರ್ಪಟ್ಟಿದೆ.

 ಕಾರವಾರ: ವನ್ನಳ್ಳಿ ಬೀಚ್‌ನ ಬಂಡೆ ಮೇಲೆ ಕುಳಿತು ಪೋಸ್ ನೀಡುತ್ತಿದ್ದ ವ್ಯಕ್ತಿ ಸಮುದ್ರಪಾಲು! ಕಾರವಾರ: ವನ್ನಳ್ಳಿ ಬೀಚ್‌ನ ಬಂಡೆ ಮೇಲೆ ಕುಳಿತು ಪೋಸ್ ನೀಡುತ್ತಿದ್ದ ವ್ಯಕ್ತಿ ಸಮುದ್ರಪಾಲು!

Karwar Rock Garden Poor Maintenance

ಗಾರ್ಡನ್ ಸುತ್ತಲು ಹಾಕಿದ್ದ ಬೇಲಿ ತುಂಡಾಗಿದ್ದು, ನಿತ್ಯವೂ ದನಕರುಗಳಿಗೆ ಮೇವು ದೊರೆಯುವ ಬೇಣವಾಗಿ ಮಾರ್ಪಟ್ಟಿದೆ. ನಿತ್ಯ ಬಣ್ಣ ಬಣ್ಣದ ಬೆಳಕಿನಿಂದ ಪ್ರವಾಸಿಗರನ್ನು ಆಕರ್ಷಿಸುತ್ತದ್ದ ಗಾರ್ಡನ್‌ನಲ್ಲಿ ಬಿಲ್ ಕಟ್ಟದ ಕಾರಣ ಕೆಇಬಿ ಅವರು ಕೆಲ ದಿನಗಳ ಹಿಂದೆ ವಿದ್ಯುತ್ ಸಂಪರ್ಕ ಕೂಡ ಕಡಿತಗೊಳಿಸಿದ್ದರು.

ಕಾರವಾರ: ಕಡಲತೀರದಲ್ಲಿ ಅಪರೂಪದ 'ಹಾಕ್ಸ್‌ಬಿಲ್' ಸಮುದ್ರ ಆಮೆಯ ಕಳೇಬರ ಪತ್ತೆಕಾರವಾರ: ಕಡಲತೀರದಲ್ಲಿ ಅಪರೂಪದ 'ಹಾಕ್ಸ್‌ಬಿಲ್' ಸಮುದ್ರ ಆಮೆಯ ಕಳೇಬರ ಪತ್ತೆ

ಇದರಿಂದ ಸಂಜೆ ಹೊತ್ತಿಗೆ ಕತ್ತಲೆ ಕೂಪವಾಗಿ, ಸಂಜೆಯ ಬಳಿಕ ರಾಕ್ ಗಾರ್ಡನ್ ಪ್ರವೇಶವನ್ನೇ ಬಂದ್ ಮಾಡಲಾಗುತ್ತಿತ್ತು. ಶೀಘ್ರವೇ ರಾಕ್ ಗಾರ್ಡನ್‌ಗೆ ಜಿಲ್ಲಾಡಳಿತ ಮರು ಸ್ಪರ್ಶ ನೀಡಬೇಕಿದೆ ಎಂದು ಪ್ರವಾಸಿಗರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕೇಳಿದರೆ, "ಕೋವಿಡ್ ಕಾರಣದಿಂದಾಗಿ ಕೆಲಸಗಳು ನಿಧಾನವಾಗಿದ್ದವು. ರಾಕ್ ಗಾರ್ಡನ್ ಅಂದ ಕೆಡಿಸಿಕೊಂಡಿರುವುದು ಗಮನಕ್ಕಿದೆ. ಶೀಘ್ರವೇ ಅದನ್ನು ಮೊದಲಿನಂತೆ ಪ್ರವಾಸಿಗರ ಆಕರ್ಷಣೀಯ ಕೇಂದ್ರವನ್ನಾಗಿ ಮಾಡಲಾಗುವುದು" ಎಂದು ತಿಳಿಸಿದ್ದಾರೆ.

Karwar Rock Garden Poor Maintenance

ರಾಕ್ ಗಾರ್ಡನ್‌ಗೆ 2018- 19ರಲ್ಲಿ 2.13 ಲಕ್ಷ, 2019- 20ರಲ್ಲಿ 1.48 ಲಕ್ಷ ಮತ್ತು 2020- 21ರಲ್ಲಿ 24 ಸಾವಿರ ಮಂದಿ ಭೇಟಿ ನೀಡಿದ್ದರು. 2021- 22ರಲ್ಲಿ ಇದುವರೆಗೂ 7 ಸಾವಿರ ಜನರು ಭೇಟಿ ಕೊಟ್ಟಿದ್ದಾರೆ.

English summary
After Covid lock down rock garden in Karwar open for tourist. But tourist upset with garden poor maintenance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X