ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಥಬ್ಧಗೊಳ್ಳಲಿದೆ ಕಾರವಾರ; 'ಜನತಾ ಕರ್ಫ್ಯೂ'ಗೆ ವ್ಯಾಪಾರಿ ಸಂಘಟನೆಗಳ ಬೆಂಬಲ

|
Google Oneindia Kannada News

ಕಾರವಾರ, ಮಾರ್ಚ್ 20: ಮಾರಣಾಂತಿಕ ಕೊರೊನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಈ ಭಾನುವಾರ (ಮಾ.22) 'ಜನತಾ ಕರ್ಫ್ಯೂ'ಗೆ ಕರೆ ನೀಡಿದ್ದಾರೆ. ಅದರಂತೆ, ಕಾರವಾರದಲ್ಲಿ ಪ್ರಮುಖ ಸಂಘಟನೆಗಳು ತಮ್ಮ ಅಡಿ ಬರುವ ಅಂಗಡಿ- ಮಾರುಕಟ್ಟೆಗಳನ್ನು ಮುಚ್ಚಲು ತೀರ್ಮಾನಿಸಿದ್ದು, ಅಂದು ಪ್ರಧಾನಿ ಕರೆಯನ್ನು ಚಾಚೂತಪ್ಪದೆ ಪಾಲಿಸಲಾಗುತ್ತಿದೆ.

ಕಾರವಾರ ಚೇಂಬರ್ ಆಫ್ ಕಾಮರ್ಸ್, ಕಾರವಾರ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್, ಜ್ಯೂವೆಲ್ಲರಿ ಅಸೋಸಿಯೇಷನ್, ಕೈಗಾರಿಕೆ, ಟೆಕ್ಸ್ ಟೈಲ್, ಕಿರಾಣಿ, ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ತರಕಾರಿ ವ್ಯಾಪಾರಸ್ಥರ ಸಂಘದಿಂದ ಮಾರುಕಟ್ಟೆ ಬಂದ್ ಮಾಡಲು ತೀರ್ಮಾನಿಸಲಾಗಿದೆ.

ಜನತಾ ಕರ್ಫ್ಯೂ ಆಚರಿಸುವಂತೆ ಶಾಸಕ ರಾಮದಾಸ್‌ ಮನವಿಜನತಾ ಕರ್ಫ್ಯೂ ಆಚರಿಸುವಂತೆ ಶಾಸಕ ರಾಮದಾಸ್‌ ಮನವಿ

ಈ ಬಗ್ಗೆ ಈ ಎಲ್ಲ ಸಂಘಟನೆಗಳ ಅಧ್ಯಕ್ಷರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು, ದೇಶದ ರಕ್ಷಣಾ ದೃಷ್ಟಿಯಿಂದ ಒಂದು ದಿನ ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಲಾಗುವುದು. ಪ್ರಧಾನಿ ಮೋದಿ ಅವರ ಕರೆಗೆ ಎಲ್ಲರೂ ಬೆಂಬಲ ನೀಡೋಣ, ಜನರು ಕೂಡ ಅಂದು ಯಾರೂ ಹೊರಬರದೆ, ಮನೆಯಲ್ಲೇ ಉಳಿಯೋಣ ಎಂದು ಕರೆ ನೀಡಿದ್ದಾರೆ.

Karwar Merchants Association Support To Janatha Curfew

ಏನಿದು ಜನತಾ ಕರ್ಫ್ಯೂ? ವೈರಸ್ ಭೀತಿ ನಡುವೆ ಹೇಗೆ ವರ್ಕ್ ಆಗುತ್ತೆ? ಏನಿದು ಜನತಾ ಕರ್ಫ್ಯೂ? ವೈರಸ್ ಭೀತಿ ನಡುವೆ ಹೇಗೆ ವರ್ಕ್ ಆಗುತ್ತೆ?

ಕೊರೊನಾ ವೈರಾಣು 12 ತಾಸು ವಾತಾವರಣದಲ್ಲಿ ಜೀವಿತವಾಗಿ ಇರುತ್ತದೆ. ಹೀಗಾಗಿ ಒಂದು ದಿನ ಎಲ್ಲರೂ ಮನೆಯಲ್ಲೇ ಉಳಿಯುವುದರಿಂದ ವೈರಾಣು ಹರಡುವಿಕೆಯನ್ನು ತಡೆಯಬಹುದಾಗಿದೆ. ಪಕ್ಷ, ಜಾತಿ ಬೇಧ ಮಾಡದೇ ಎಲ್ಲರೂ ಈ ಕ್ರಮವನ್ನು ಪಾಲಿಸಬೇಕಿದೆ. ಸಾರ್ವಜನಿಕರು ಕೂಡ ಸಹಕಾರ ನೀಡುವಂತೆ ಕೋರಿದ್ದಾರೆ.

English summary
Karwar merchants association has decided to support janatha curfew said by narendra modi on march 22 sunday. karwar will be shut down on sunday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X