ಮೀನಿನ ಲಾರಿಯಲ್ಲಿ ಸಾಗಾಟವಾಗ್ತಿತ್ತು ರಾಶಿ ರಾಶಿ ಮದ್ಯದ ಬಾಟಲ್
ಕಾರವಾರ, ಫೆಬ್ರವರಿ 16: ಮೀನಿನ ಲಾರಿಯಲ್ಲಿ 9 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಅಧಿಕಾರಿಗಳು, ಲಾರಿ ಸಹಿತ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಗೋವಾದಿಂದ ಮೀನಿನ ಲಾರಿಯಲ್ಲಿ 300ಕ್ಕೂ ಹೆಚ್ಚು ಖಾಲಿ ಮೀನಿನ ಟ್ರೇಗಳು ಇರುವುದನ್ನು ಕಂಡು ಅನುಮಾನಗೊಂಡ ಅಬಕಾರಿ ಅಧಿಕಾರಿಗಳು ಕಾರವಾರ ತಾಲೂಕಿನ ಮಾಜಾಳಿ ಗಡಿ ತಪಾಸಣಾ ಕೇಂದ್ರದಲ್ಲಿ ತಡೆದು ಪರಿಶೀಲನೆ ನಡೆಸಿದ್ದರು. ಈ ವೇಳೆ ಟ್ರೇಗಳ ಮಧ್ಯೆ ಸುಮಾರು 505 ಲೀಟರ್ ನ 9.13 ಲಕ್ಷ ರುಪಾಯಿ ಮೌಲ್ಯದ ಗೋವಾ ಮದ್ಯ ಪತ್ತೆಯಾಗಿದೆ.
ಎಲ್ಲರಿಗೂ ನನ್ನ ರಕ್ಷಣೆ ಇದೆ, ಕೇವಲ ಮಿರಾಶಿಗೆ ಮಾತ್ರವಲ್ಲ: ಸಚಿವ ಹೆಬ್ಬಾರ್
ಚಾಲಕ ಆಂಧ್ರಪ್ರದೇಶ ಮೂಲದ ಸೂರ್ಯನಾರಾಯಣ ಮೂರ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಸಾಗಾಟಕ್ಕೆ ಬಳಸಿದ್ದ 16 ಲಕ್ಷ
ಮೌಲ್ಯದ ಕಂಟೇನರ್ ಲಾರಿ, 90 ಸಾವಿರ ಮೌಲ್ಯದ ಪ್ಲಾಸ್ಟಿಕ್ ಟ್ರೇಗಳನ್ನೂ ಸೇರಿ 25 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.