ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ: ಕೊರೊನಾ ತಡೆಗಟ್ಟಲು ನಿಲ್ದಾಣಗಳಲ್ಲಿ ಹೆಲ್ತ್ ಡೆಸ್ಕ್

|
Google Oneindia Kannada News

ಕಾರವಾರ, ಮಾರ್ಚ್ 12: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ತಪಾಸಣಾ ತಂಡಗಳ ಮೇಲುಸ್ತುವಾರಿ ನಡೆಸುವ ಬಗ್ಗೆ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ ಕೆ. ಅವರು ಕಾರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಲಹೆ ಸೂಚನೆ ನೀಡಿದರು.

ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲೆಯ 12 ತಾಲ್ಲೂಕುಗಳ ಕೇಂದ್ರ ಬಸ್ ನಿಲ್ದಾಣ ಹಾಗೂ ಗೋಕರ್ಣ, ಮುರುಡೇಶ್ವರ, ಭಟ್ಕಳ ಹಾಗೂ ಕಾರವಾರ ರೈಲ್ವೆ ನಿಲ್ದಾಣಗಳಲ್ಲಿ ಹೆಲ್ತ್ ಡೆಸ್ಕ್ ಗಳನ್ನು ತೆರೆಯಲಾಗುವುದು. ಜನ ಜಾಗೃತಿ ಮೂಡಿಸುವ ಮೂಲಕ ಪ್ರಯಾಣಿಕರು ಸ್ವಯಂ ಆಗಿ ಹೆಲ್ತ್ ಡೆಸ್ಕ ನಲ್ಲಿ ಮಾಹಿತಿ ನೀಡುವಂತೆ ಮಾಡಬೇಕು ಹಾಗೂ ಮುಂದಿನ 48 ಗಂಟೆಗಳಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಬೇಕೆಂದು ಸೂಚಿಸಿದರು.

ಕೊರೊನಾ ಭೀತಿ ನಡುವೆಯೇ ಕಾರವಾರ ಬಂದರಿಗೆ ಬಂದ ವಿದೇಶಿ ಹಡಗುಕೊರೊನಾ ಭೀತಿ ನಡುವೆಯೇ ಕಾರವಾರ ಬಂದರಿಗೆ ಬಂದ ವಿದೇಶಿ ಹಡಗು

ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು ತಮ್ಮಲ್ಲಿ ತಪಾಸಣೆಗೆ ಬರುವವರಲ್ಲಿ ಜ್ವರ ಹಾಗೂ ಇತರ ಲಕ್ಷಣಗಳು ಕಂಡು ಬಂದಲ್ಲಿ ಅದರ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನೀಡಬೇಕೆಂದರು.

Karwar DC Order Health Desk Start To Prevention Of Corona

ಮಂಕಿ, ಕುಮಟಾ ಮತ್ತು ಕಾರವಾರ ನೌಕಾ ಆಸ್ಪತ್ರೆಗಳಲ್ಲಿ ನಿಗಾ ಘಟಕಗಳ ವ್ಯವಸ್ಥೆ ಮಾಡಲಾಗುವುದು. ವಿದೇಶದಿಂದ ಬರುವವರ ಮಾಹಿತಿಯನ್ನು ಪಡೆದು ಅವರ ಮೇಲೆ 14 ದಿನಗಳವರೆಗೆ ನಿಗಾ ವಹಿಸಬೇಕೆಂದು ತಿಳಿಸಿದರು.

ಉತ್ತರ ಕನ್ನಡದಲ್ಲಿ ರಾಜ್ಯದ ಮೊದಲ ಉತ್ತರ ಕನ್ನಡದಲ್ಲಿ ರಾಜ್ಯದ ಮೊದಲ "ಕಡಲ ಧಾಮ"; ಏನಿದರ ವಿಶೇಷ?

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಎನ್.ಅಶೋಕ್ ಕುಮಾರ, ಡಾ.ವಿನೋದ್ ಭೂತೆ ಸೇರಿದಂತೆ ಇತರೆ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

English summary
Karwar DC Dr.Harish Kumara K. held a consultation with the taluk doctors at the district health and family welfare office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X