ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ ದೋಣಿ ದುರಂತ : ಸಾವಿನ ಸಂಖ್ಯೆ 13ಕ್ಕೆ ಏರಿಕೆ

|
Google Oneindia Kannada News

ಕಾರವಾರ, ಜನವರಿ 22 : ಕಾರವಾರದಲ್ಲಿ ನಡೆದ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮಂಗಳವಾರ 5 ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ ಎರಡು ದೇಹಗಳಿಗಾಗಿ ಹುಡುಕಾಟ ನಡೆದಿದೆ.

ಭಾರತೀಯ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳು ಮಂಗಳವಾರ ಹಾವೇರಿ ಮೂಲದ ಕಿರಣ್ (5), ಶ್ರೇಯಸ್ ಪಾವಸ್ಕರ್ (37), ಪರಶುರಾಮ್ (35), ಸಂಜೀವಿನಿ (14), ಸೌಜನ್ಯ (12) ಶವವನ್ನು ಪತ್ತೆ ಹಚ್ಚಿದ್ದಾರೆ.

ಕಾರವಾರ ದೋಣಿ ದುರಂತ : ಸರ್ಕಾರದಿಂದ ಪರಿಹಾರ ಘೋಷಣೆಕಾರವಾರ ದೋಣಿ ದುರಂತ : ಸರ್ಕಾರದಿಂದ ಪರಿಹಾರ ಘೋಷಣೆ

ಇನ್ನೂ ಇಬ್ಬರು ನಾಪತ್ತೆಯಾಗಿದ್ದು ನೌಕಾಪಡೆಯ ಹೆಲಿಕಾಪ್ಟರ್, ತಟರಕ್ಷಕ ದಳದ ಸಿ -155, ಸಿ-123 ದೋಣಿಗಳ ಮೂಲಕ ಹುಡುಕಾಟ ನಡೆಸಲಾಗುತ್ತಿದೆ. ಕೂರ್ಮಗಡ ದ್ವೀಪ ಸೇರಿದಂತೆ ಸುತ್ತಮುತ್ತಲಿನ ದ್ವೀಪದ ಅಂಚಿನಲ್ಲಿ ಮೃತದೇಹ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.

ಕಾರವಾರ: ಭೀಕರ ದೋಣಿ ದುರಂತ 9 ಮಂದಿ ಸಾವುಕಾರವಾರ: ಭೀಕರ ದೋಣಿ ದುರಂತ 9 ಮಂದಿ ಸಾವು

Karwar boat tragedy

ಪೊಲೀಸ್ ಇಲಾಖೆ, ಟ್ಯಾಗೋರ್ ಬೀಚ್ ಸಮಿತಿ ಸಿಬ್ಬಂದಿ ಹಾಗೂ ಲೈಫ್‌ ಗಾರ್ಡ್‌ನ 5 ತಂಡಗಳು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿವೆ. ಸ್ಥಳೀಯ ಮೀನುಗಾರರು ಪತ್ತೆ ಕಾರ್ಯಾಚರಣೆಗೆ ಸಹಕಾರ ನೀಡುತ್ತಿದ್ದಾರೆ.

ಕಾರವಾರ ದೋಣಿ ದುರಂತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ, ಚಾಲಕನ ಬಂಧನಕಾರವಾರ ದೋಣಿ ದುರಂತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ, ಚಾಲಕನ ಬಂಧನ

ಮುಖ್ಯಮಂತ್ರಿಗಳ ಸಂತಾಪ : ಸೋಮವಾರ ಸಂಭವಿಸಿದ ದೋಣಿ ದುರಂತಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದರು. ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರವನ್ನು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಘೋಷಣೆ ಮಾಡಿದ್ದರು.

ಉತ್ತರ ಕನ್ನಡದ ಸಾಗರ ದರ್ಶನ ಸಮೀಪ ಸಂಭವಿಸಿದ ದೋಣಿ ದುರಂತ ನನ್ನ ಮನ ಕಲಕಿದೆ. ತಕ್ಷಣವೇ ಸೂಕ್ತ ಪರಿಹಾರ ಕ್ರಮಗಳನ್ನು ಒದಗಿಸುವ ಬಗ್ಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಜೊತೆ ಚರ್ಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು.

ಮೃತಪಟ್ಟವರ ಕುಟುಂಬಕ್ಕೆ ನನ್ನ ಸಾಂತ್ವನಗಳು. ದೇವರು ಈ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದರು.

English summary
Indian Navy and the Coast Guard have recovered 5 bodies from the Kali river Karnataka after a boat carrying 33 people capsized on January 22, 2019. 13 people died in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X