ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.4ರಿಂದ ಕಾರವಾರ-ಬೆಂಗಳೂರು ರೈಲು ಸಂಚಾರ

|
Google Oneindia Kannada News

ಕಾರವಾರ, ಸೆಪ್ಟೆಂಬರ್ 03: ಕಾರವಾರ-ಬೆಂಗಳೂರು-ಕಾರವಾರ ರೈಲು ಸಂಚಾರ ಸೆಪ್ಟೆಂಬರ್ 4ರಿಂದ ಆರಂಭವಾಗಲಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ. ಮಾರ್ಚ್‌ನಲ್ಲಿ ಕೋವಿಡ್ ಲಾಕ್ ಡೌನ್ ಘೋಷಣೆ ಮಾಡಿದಾಗ ರೈಲು ಸಂಚಾರ ಸ್ಥಗಿತಗೊಂಡಿತ್ತು.

Recommended Video

SriLanka ನೀರಿನಲ್ಲಿ IOC ಕಚ್ಚಾ ತೈಲ ಹಡಗಿನಲ್ಲಿ ಬೆಂಕಿ | Oneindia Kannada

ವಿಶೇಷ ಪರೀಕ್ಷಾ ರೈಲು ಹೆಸರಿನಲ್ಲಿ ಕೊಂಕಣ ರೈಲ್ವೆ ಕಾರವಾರ-ಬೆಂಗಳೂರು-ಕಾರವಾರ ರೈಲನ್ನು ಶುಕ್ರವಾರದಿಂದ ಓಡಿಸಲಿದೆ. ಮುಂದಿನ ಆದೇಶದ ತನಕ ರೈಲುಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆ ಹೇಳಿದೆ.

 ಕಾರವಾರ ಕೋವಿಡ್ ವಾರ್ಡ್ ನಿಂದ ಮೊಬೈಲ್ ಕದ್ದು ಸೋಂಕಿತ ಪರಾರಿ! ಹೈರಾಣದ ಪೊಲೀಸರು ಕಾರವಾರ ಕೋವಿಡ್ ವಾರ್ಡ್ ನಿಂದ ಮೊಬೈಲ್ ಕದ್ದು ಸೋಂಕಿತ ಪರಾರಿ! ಹೈರಾಣದ ಪೊಲೀಸರು

ರೈಲು ನಂಬರ್ 06585 ಯಶವಂತರಪುರ-ಕಾರವಾರ ಮತ್ತು ನಂ.06586 ಕಾರವಾರ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಈ ಹಿಂದೆ ರೈಲು ಸಂಚಾರ ನಡೆಸುತ್ತಿದ್ದ ವೇಳಾಪಟ್ಟಿ ಅನ್ವಯವೇ ಸಂಚಾರ ನಡೆಸಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

15 ಗಂಟೆಯಲ್ಲಿ ಗುರಿ ತಲುಪಿದ ನೈಋತ್ಯ ರೈಲ್ವೆ ಮೊದಲ ರೋ ರೋ ರೈಲು 15 ಗಂಟೆಯಲ್ಲಿ ಗುರಿ ತಲುಪಿದ ನೈಋತ್ಯ ರೈಲ್ವೆ ಮೊದಲ ರೋ ರೋ ರೈಲು

Karwar Bengaluru Rail Service From September 4

ಸೆ.4ರಂದು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 8.25ಕ್ಕೆ ಕಾರವಾರ ತಲುಪಲಿದೆ. ಸೆಪ್ಟೆಂಬರ್ 5ರಂದು ಸಂಜೆ 6 ಗಂಟೆಗೆ ಕಾರವಾರದಿಂದ ಬೆಂಗಳೂರಿಗೆ ರೈಲು ಹೊರಡಲಿದೆ.

120 ವಿಶೇಷ ರೈಲು ಓಡಿಸಲಿದೆ ಭಾರತೀಯ ರೈಲ್ವೆ 120 ವಿಶೇಷ ರೈಲು ಓಡಿಸಲಿದೆ ಭಾರತೀಯ ರೈಲ್ವೆ

ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣಿಕರು ಸಂಚಾರ ನಡೆಸಬೇಕಿದೆ. ರೈಲು 7 ಸ್ಲೀಪರ್, 1 3ಟೈರ್ ಎಸಿ, 1 2 ಟೈರ್ ಎಸಿ, 4 ಸಾಮಾನ್ಯ ಬೋಗಿಗಳು ಸೇರಿ 15 ಬೋಗಿಯನ್ನು ಒಳಗೊಂಡಿದೆ. ಈ ರೈಲಿಗೆ ಸ್ಟೇಷನ್‌ನಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಪ್ರಕಟಣೆ ಹೇಳಿದೆ.

English summary
Konkan railway announced that Karwar Bengaluru railway service will be resume operation from September 4, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X